ವೀರಾಜಪೇಟೆ, ಮಾ. ೨೨: ಗ್ರಾಮದ ದೇಗುಲದಲ್ಲಿ ಪೂಜೆ ಮಾಡುವ ವಿಷಯದಲ್ಲಿ ಎರಡು ಕುಟುಂಬಗಳ ಮಧ್ಯೆ ಕಲಹ ಏರ್ಪಟ್ಟು ಪರಸ್ಪರ ದೂರು ದಾಖಲಾದ ಘಟನೆ ನಲ್ವತೊಕ್ಲು ಗ್ರಾಮದಲ್ಲಿ ನಡೆದಿದೆ.

ವೀರಾಜಪೇಟೆ ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತೊಕ್ಲು ಗ್ರಾಮದ ಚೀಪೆಕಾಡು ಪೈಸಾರಿ ಗ್ರಾಮದ ನಿವಾಸಿಗಳಾದ ಸಲೀಲಾ ಮತ್ತು ನಾರಾಯಣ ಕುಟುಂಬದ ಮಧ್ಯೆ ಕಲಹ ಏರ್ಪಟ್ಟು ಉಭಯ ಕಡೆಯವರು ಪ್ರಕರಣ ದಾಖಲಿಸಿದ್ದಾರೆ.

ಚೀಪೆಕಾಡು ಪೈಸಾರಿಯಲ್ಲಿ ದುರ್ಗಾದೇವಿ ಮತ್ತು ಮುತ್ತಪ್ಪ ಸ್ಥಾನಗಳಿರುವ ದೇಗುಲವಿದೆ. ಪ್ರಸ್ತುತ ದೇಗುಲದಲ್ಲಿ ತಾ. ೨೧ ರಂದು ಸಲೀಲಾ ಅವರÀ ಪುತ್ರ ಬಿ.ಎಸ್. ವಿದುನ್ ಪೂಜೆ ಮಾಡುತ್ತಿದ್ದರು. ಈ ವೇಳೆಯಲ್ಲಿ ಕ್ಷÄಲ್ಲಕ ಕಾರಣದಿಂದಾಗಿ ನಾರಾಯಣ ಮತ್ತು ರೀನಾ ದಂಪತಿ ಆಗಮಿಸಿ ನಿನಗೆ ದೇಗುಲದಲ್ಲಿ ಪೂಜೆ ಮಾಡುವ ಅವಕಾಶವಿಲ್ಲ. ದೇಗುಲ ನಮ್ಮದು ಎಂದು ನಿಂದಿಸಿದ್ದಾರೆ. ಇದರಿಂದ ವಿದುನ್ ಮತ್ತು ನಾರಾಯಣ ದಂಪತಿ ಮಧ್ಯೆ ಕಲಹವಾಗಿದೆ. ಪರಿಣಾಮ ನಾರಾಯಣ ತನ್ನ ಬಳಿಯಿದ್ದ ಕತ್ತಿಯಿಂದ ವಿದುನ್ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಬಲಗೈಗೆ ಗಾಯವಾಗಿದೆ. ಕಲಹದ ಮಧ್ಯೆ ಬಂದ ಸಲೀಲ ಅವರನ್ನು ತಳ್ಳಿ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಗಾಯಾಳುಗಳು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಗಾಐಆಳು ವಿದುನ್ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾರಾಯಣ ದಂಪತಿ ವಿರುದ್ಧ ದೂರು ದಾಖಲಾಗಿದೆ. ಸಂಜೆಯ ವೇಳೆಯಲ್ಲಿ ದೇಗುಲದ ಮುಂದೆ ಹುಲ್ಲು ಕೊಯ್ಯುವ ಸಲುವಾಗಿ ನಾರಾಯಣ ಅವರ ಪತ್ನಿ ರೀನಾ ಮತ್ತು ಮಗಳು ಪ್ರಿಯಾಂಕ ತೆರಳಿದ್ದಾರೆ. ಈ ವೇಳೆಯಲ್ಲಿ ದೂರು ನೀಡಿರುವ ವಿಚಾರವಾಗಿ ವಿದುನ್ ಮತ್ತು ಇತರರು ಸೇರಿ ರೀನಾ ಅವರ ಮಗಳು ಪ್ರಿಯಾಂಕ ಮೇಲೆ ಕಲ್ಲು ತೂರಾಟ ಮತ್ತು ಮರದ ಬಡಿಗೆಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವಿದುನ್ ಮತ್ತು ಇತರರ ಮೇಲೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದ್ದು, ಪೊಲೀಸ್ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.