ಪ್ರತಿ ವರ್ಷ ಮಾರ್ಚ್ ೨೩ ರಂದು ವಿಶ್ವ ಹವಾಮಾನ ದಿನವನ್ನು ಆಚರಿಸಲಾಗುತ್ತದೆ.
೨೩ನೇ ಮಾರ್ಚ್ ೧೯೫೦ ರಂದು ವಿಶ್ವ ಹವಾಮಾನ ಸಂಸ್ಥೆಯ ರಚನೆ ಹಾಗೂ ಒಪ್ಪಂದ ಅಸ್ತಿತ್ವಕ್ಕೆ ಬಂದ ದಿನವಾಗಿದೆ. ಇದರ ನೆನಪಿಗಾಗಿ ೧೯೬೧ ರಲ್ಲಿ ವಿಶ್ವ ಹವಾಮಾನ ದಿನವನ್ನು ಸ್ಥಾಪಿಸಲಾಯಿತು. ಈ ಸಂಸ್ಥೆಯು ಪ್ರತಿ ವರ್ಷ ವಿಶ್ವ ಹವಾಮಾನ ದಿನಾಚರಣೆಯ ಘೋಷಣೆ (ಥೀಮ್)ಯನ್ನು ಘೋಷಿಸುತ್ತದೆ ಮತ್ತು ಈ ದಿನವನ್ನು ಎಲ್ಲಾ ಸದಸ್ಯ ರಾಷ್ಟçಗಳಲ್ಲಿ ಆಚರಿಸಲಾಗುತ್ತದೆ.
ಈ ದಿನ ಅತ್ಯಂತ ಹವಾಮಾನ ತಜ್ಞರಿಗೆ ಮಹತ್ವದ ಮತ್ತು ವಿಶೇಷ ದಿನ ಕೂಡ ಆಗಿದೆ. ತೀವ್ರ ಹವಾಮಾನ ಘಟನೆಗಳಿಂದ ಸಂಭವಿಸಬಹುದಾದ ಅನಾಹುತಗಳಿಂದ ಜನಸಂಖ್ಯೆಯನ್ನು ರಕ್ಷಿಸುವ ಮುಂಜಾಗ್ರತಾ ಎಚ್ಚರಿಕೆಗಳ ಪ್ರಸಾರದಲ್ಲಿ ಹವಾಮಾನಶಾಸ್ತçಜ್ಞರು ಕಾರ್ಯನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ವಿಶ್ವ ಹವಾಮಾನ ಸಂಸ್ಥೆಯು ಹವಾಮಾನ, ಭೌಗೋಳಿಕ ಸನ್ನಿವೇಶಗಳ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಂಡು ಆಗಿಂದಾಗ್ಗೆ ಹವಾಮಾನ ಬದಲಾವಣೆಯ ಕುರಿತು ಮಾಹಿತಿ ನೀಡುತ್ತಾ ಬಂದಿದೆ.
ಉದ್ದೇಶ
ಹವಾಮಾನ ಬದಲಾವಣೆಯಿಂದ ಉಂಟಾಗುವ ವ್ಯತ್ಯಯಗಳ ಬಗ್ಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಹವಾಮಾನ ವಿಧಾನ ಹಾಗೂ ಈಗ ಆಗಿರುವ ಬದಲಾವಣೆ ಬಗ್ಗೆ ಜಾಗೃತಿ ಮೂಡಿಸಲು ಇದು ಸಹಕಾರಿಯಾಗಿದೆ. ವಾತಾವರಣದಲ್ಲಿ ಅಧಿಕ ಬಿಸಿಗಾಳಿ, ಬರ ಪರಿಸ್ಥಿತಿ , ಅತಿವೃಷ್ಟಿ, ಅನಾವೃಷ್ಠಿ, ಜಲ ಪ್ರಳಯ, ಭೂಕಂಪನ, ಮಳೆಯಲ್ಲಿ ಉಂಟಾಗುವ ಏರು ಪೇರು, ಅಗ್ನಿ ಪರ್ವತಗಳ ಸ್ಫೋಟ ಸೇರಿದಂತೆ ಇತರೆ ಪ್ರಾಕೃತಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
ಹವಾಮಾನವು ಜನರ ದೈನಂದಿನ ಜೀವನದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಹವಾಮಾನ ಉತ್ತಮವಾಗಿದ್ದರೆ ಜನರು ಉಲ್ಲಾಸ ಭರಿತರಾಗಿರುತ್ತಾರೆ. ಒಂದು ಪ್ರದೇಶದ ಹವಾಮಾನ ಆ ಪ್ರದೇಶದ ಜನವಸತಿ, ಕೃಷಿ, ಉದ್ಯಮ, ಕೈಗಾರಿಕೆ ಇತ್ಯಾದಿಗಳನ್ನು ನಿರ್ಧರಿಸುತ್ತದೆ. ಹವಾಮಾನ ಕೈಕೊಟ್ಟರೆ ಜನರ ದಿನನಿತ್ಯದ ಕೆಲಸಗಳಿಗೆ ತೀವ್ರ ವ್ಯತ್ಯಯಗಳು ಉಂಟಾಗುತ್ತವೆ. ಒಂದು ಪ್ರದೇಶದ ಹವಾಮಾನ ಚೆನ್ನಾಗಿದ್ದರೆ ಆ ಪ್ರದೇಶದಲ್ಲಿ ಹೆಚ್ಚು ಜನ ವಸತಿ ಪ್ರದೇಶ ಕಂಡುಬರುತ್ತದೆ. ಒಂದು ಪ್ರದೇಶದ ಹವಾಮಾನ ಮಾನವನ ನೆಲೆಗೆ ಪ್ರತಿಕೂಲವಿದ್ದರೆ ಅಲ್ಲಿ ಯಾವುದೇ ಹುಲ್ಲುಕಡ್ಡಿ ಕೂಡ ಬೆಳೆಯುವುದಿಲ್ಲ.
ಹವಾಮಾನ ನಿರ್ಧರಿಸುವಲ್ಲಿ ಮೋಡಗಳ ಪಾತ್ರ ಮಹತ್ವದ್ದು ಹಾಗೂ ಇದರ ಅಧ್ಯಯನ ನಡೆಸುವ ಅಗತ್ಯತೆಯನ್ನು ಈ ದಿನ ಪ್ರತಿಪಾದಿಸುತ್ತದೆ. ಪ್ರಕೃತಿಯಲ್ಲಿ ಕ್ಷಣ ಕ್ಷಣಕ್ಕೆ ಉಂಟಾಗುವ ಹವಾಮಾನ ಬದಲಾವಣೆಯಿಂದ ಪ್ರತಿ ದೇಶವು ಹವಾಮಾನ ವರದಿಗಳಿಗೆ ತುಂಬಾ ಆದ್ಯತೆ ನೀಡುತ್ತವೆ. ಭಾರತದಲ್ಲಿ ಆಯಾ ಹವಾಮಾನವನ್ನು ಅವಲಂಬಿಸಿ ವಿವಿಧ ಕೃಷಿ ಚಟುವಟಿಕೆಗಳು ನಡೆಯುತ್ತವೆ. ಹವಾಮಾನಕ್ಕೆ ಇರುವ ಈ ಮಹತ್ವವನ್ನು ಗಮನಿಸಿಯೇ ಇದಕ್ಕೂ ಒಂದು ವಿಶೇಷ ದಿನವನ್ನು ನಿಗದಿಪಡಿಸಲಾಗಿದೆ.
ಪರಿಸರದಲ್ಲಿ ಉಂಟಾಗುವ ಹವಾಮಾನ ಬದಲಾವಣೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಜಾಗೃತಿ ಮೂಡಿಸುವ ದಿಸೆಯಲ್ಲಿ ಈ ದಿನಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಜನರ ಸುರಕ್ಷತೆ ಮತ್ತು ಕ್ಷೇಮಕ್ಕೆ ಹವಾಮಾನದ ಕೊಡುಗೆ ಅತ್ಯಂತ ಮಹತ್ವದ್ದು ಎಂಬುದನ್ನು ತಿಳಿಸಲು ಈ ದಿನವನ್ನು ಆಚರಿಸಲಾಗುತ್ತಿದೆ.
ಹವಾಮಾನ ವೈಪರೀತ್ಯ
ಹವಾಮಾನ ವೈಪರೀತ್ಯವು ನಿಸರ್ಗ ಸಹಜ ಪ್ರಕ್ರಿಯೆಯೇ ಹೊರತು ಮನುಷ್ಯನ ಸೃಷ್ಠಿಯಲ್ಲ. ಆದರೆ, ಮನುಷ್ಯನ ದೌರ್ಜನ್ಯ ಹೆಚ್ಚಾದಂತೆ ಪ್ರಕೃತಿ ಮತ್ತು ಭೂ ಸಂಪನ್ಮೂಲ ಯಥೇಚ್ಛ ಬಳಕೆಯ ಪರಿಣಾಮ ಕೂಡ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಈ ಭೂಮಿಯಲ್ಲಿ ಹವಾಮಾನ ವೈಪರೀತ್ಯವು ಮನುಷ್ಯ ಸೃಷ್ಠಿಗೂ ಮೊದಲೇ ಎಷ್ಟೋ ಸಲ ಸಂಭವಿಸಿದೆ. ಭೂಮಿಯ ಮೇಲಿನ ಅತ್ಯಧಿಕ ತಾಪಮಾನದಿಂದಾಗಿ ಹಲವಷ್ಟು ವರ್ಷಗಳ ಹಿಂದೆ ಜೀವ ವೈವಿಧ್ಯವೆಲ್ಲಾ ನಾಶವಾಗಿದ್ದೇ ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹವಾಮಾನ ಬದಲಾದಂತೆ ಪ್ರಾಣಿ, ಪಕ್ಷಿ, ಸಸ್ಯ ಸಂಕುಲ ಸೇರಿದಂತೆ ಇಡೀ ಜೀವ ಸಂಕುಲ ಅಳಿವಿನತ್ತ ಸಾಗುತ್ತಾ ಭವಿಷ್ಯದಲ್ಲಿ ಕಣ್ಮರೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಕೂಡ ನಮ್ಮ ಪರಿಸರ ತಜ್ಞರು ಎಚ್ಚರಿಕೆ ಗಂಟೆ ನೀಡಿದ್ದಾರೆ.
ಇದರ ಜೊತೆಗೆ ಮಾನವನ ಅತಿಯಾಸೆಯಿಂದ ಈಗಾಗಲೇ ಅರಣ್ಯ ಪ್ರದೇಶ ಹಾಗೂ ಭೂ ಸಂಪನ್ಮೂಲ ದಿನದಿನದಿಂದ ಕ್ಷೀಣಿಸುತ್ತಿದೆ. ಅರಣ್ಯ ನಾಶ ಸೇರಿದಂತೆ ಹೆಚ್ಚುತ್ತಿರುವ ಕೈಗಾರಿಕೋದ್ಯಮ ಕೂಡ ಪರಿಸರದ ಸಮತೋಲನದ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡುತ್ತಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ.
ಭಾರತದಲ್ಲಿ ಆಯಾ ಹವಾಮಾನವನ್ನು ಅವಲಂಬಿಸಿ ವಿವಿಧ ಕೃಷಿ ಚಟುವಟಿಕೆಗಳು ನಡೆಯುತ್ತದೆ. ಉದಾಹರಣೆಗೆ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಕಾಫಿ, ಏಲಕ್ಕಿ ಬೆಳೆದರೆ ಜಮ್ಮು ಕಾಶ್ಮೀರ ಪ್ರದೇಶದಲ್ಲಿ ಸೇಬು ಬೆಳೆ ಬೆಳೆಯಲಾಗುತ್ತದೆ. ಹೀಗೆ ಆಯಾ ಪ್ರದೇಶದ ವಾಯುಗುಣ ಮತ್ತು ಹವಾಮಾನಕ್ಕೆ ಅನುಗುಣವಾಗಿ ಹಾಗೂ ಸ್ಥಳೀಯವಾಗಿ ಬೆಳೆ ಮತ್ತು ಕೃಷಿ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಆದ್ದರಿಂದ, ಭೌಗೋಳಿಕವಾಗಿ ಹವಾಮಾನವನ್ನು ಆಧರಿಸಿಯೇ ಒಂದು ಪ್ರದೇಶದ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿ ನಿರ್ಧಾರವಾಗುತ್ತದೆ.
ಅರಣ್ಯ ಪ್ರದೇಶ ಕ್ಷೀಣಿಸುವುದು ಹಾಗೂ ಕಾಡ್ಗಿಚ್ಚುಗಳು ಕೂಡ ಶೇ. ೨೦ ರಷ್ಟು ಭೂಮಿಯ ತಾಪಮಾನ ಏರಿಕೆಗೆ ಕಾರಣವಾಗಿದೆ. ಜಗತ್ತಿನಲ್ಲಿ ದಿನೇ ದಿನೇ ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವುದರಿಂದ ಸಂಯುಕ್ತ ರಾಷ್ಟçಗಳು ಆಗಿಂದಾಗ್ಗೆ ಈ ಕುರಿತು ವಿಚಾರ ವಿನಿಮಯ ಮಾಡಿಕೊಂಡು ಭವಿಷ್ಯದಲ್ಲಿ ಎದುರಾಗಬಹುದಾಗ ಅನಾಹುತಗಳು-ಹಾನಿ ಬಗ್ಗೆ ಅಧ್ಯಯನ ಕೈಗೊಂಡು ನಾವು ವಹಿಸಬಹುದಾದ ಮುಂಜಾಗ್ರತೆಗಳ ಬಗ್ಗೆ ಮಾಹಿತಿ ನೀಡುತ್ತಾ ಬಂದಿವೆ.
ಆದ್ದರಿAದ ನಾವು ಪರಿಸರ ಮಾಲಿನ್ಯಕ್ಕೆ ಯಾವುದೇ ಆಸ್ಪದ ನೀಡದೇ ಜಾಗತಿಕ ತಾಪಮಾನ ತಡೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ.
- ಟಿ.ಜಿ. ಪ್ರೇಮಕುಮಾರ್, ಮುಖ್ಯ ಶಿಕ್ಷಕರು,
ಸರ್ಕಾರಿ ಪ್ರೌಢಶಾಲೆ, ಕೂಡುಮಂಗಳೂರು.