ಮಡಿಕೇರಿ, ಮಾ. ೨೧: ಶಾಸಕರಾದ ಕೆ.ಜಿ. ಬೋಪಯ್ಯ ಮತ್ತು ಸಂಸದರಾದ ಪ್ರತಾಪ್ ಸಿಂಹ ಅವರು ಮಡಿಕೇರಿ ತಾಲೂಕಿನ ೩೭ ಕುಟುಂಬಗಳಿಗೆ ಸಾಗುವಳಿ ಪತ್ರ ಹಾಗೂ ಎರಡು ಕುಟುಂಬಕ್ಕೆ ಹಕ್ಕು ಪತ್ರವನ್ನು ನಗರದ ಸುದರ್ಶನ ಅತಿಥಿ ಗೃಹದಲ್ಲಿ ವಿತರಿಸಿದರು.
೩೭ ಕುಟುಂಬಗಳಿಗೆ ಬೇಸಾಯ ಮಾಡಲು ಸಾಗುವಳಿ ಪತ್ರ ಹಾಗೂ ೯೪ ಸಿ ನಡಿ ಎರಡು ಕುಟುಂಬಗಳಿಗೆ ಹಕ್ಕು ಪತ್ರವನ್ನು ವಿತರಿಸಿದರು. ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ, ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಉಪಾಧ್ಯಾಯ, ಸದಸ್ಯರಾದ ಮಿಟ್ಟು ರಂಜಿತ್, ತಹಶೀಲ್ದಾರ್ ಪಿ.ಎಸ್.ಮಹೇಶ್, ಶಿರಸ್ತೇದಾರ್ ಗುರುರಾಜ್ ಇತರರು ಇದ್ದರು.