ಚೆಯ್ಯಂಡಾಣೆ, ಮಾ ೨೧: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕೊಡಗು ಜಿಲ್ಲಾ ಪಂಚಾಯತ್ ವತಿಯಿಂದ ಜಲಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಮಕ್ಕಳಿಗೆ ನೀರನ್ನು ಮಿತವಾಗಿ ಬಳಸುವ ಬಗ್ಗೆ ಹಾಗೂ ಅಂತರ್ಜಲದ ಮಾಹಿತಿ ಮತ್ತು ಸ್ವಚ್ಛತೆ ಬಗ್ಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ದಯಾನಂದ ಎಚ್, ದ್ವಿತೀಯ ಸ್ಥಾನವನ್ನು ಕವನ್ ಕೆ.ಸಿ, ತೃತೀಯ ಸ್ಥಾನವನ್ನು ಮದನ್.ಎಂ. ಪಡೆದುಕೊಂಡರು.