ಸುಂಟಿಕೊಪ್ಪ, ಮಾ. ೨೦: ನಾಕೂರು, ಶಿರಂಗಾಲ, ಮಳೂರು ಗ್ರಾಮದ ಶ್ರೀ ಕುರುಂಭ ಭಗವತಿ ವಿಷ್ಣು ಮಾಯ ದೇವಸ್ಥಾನದ ೨೩ನೇ ಭರಣಿ ವಾರ್ಷಿಕೋತ್ಸವ ಹಾಗೂ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ತಾ. ೩೧ ಮತ್ತು ಏ. ೧ ರಂದು ನಡೆಯಲಿದೆ.
ತಾ. ೩೧ ರಂದು ಸಂಜೆ ೬ ಗಂಟೆಗೆ ಸ್ಥಳ ಶುದ್ಧಿ, ಬಿಂಬ ಶುದ್ಧಿ, ದೀಪಾರಾಧನೆ ನಡೆಯಲಿದೆ. ದೀಪಾರಾಧನೆ ಮಾಡಿದ ನಂತರ ಭಗವತಿ ಸೇವೆಯನ್ನು ನಿರ್ವಹಿಸುವವರು ಕೊಡಂಗಲ್ಲೂರು ಮೂಲಸ್ಥಾನದ ಶಿವದಾಸ್ ಅಡಿಯಾಳ್ ನಡೆಸಿಕೊಡಲಿದ್ದಾರೆ.
ಏ. ೧ ರಂದು ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ. ಭಕ್ತಾದಿಗಳು ವಾರ್ಷಿಕೋತ್ಸವ ಹಾಗೂ ಪ್ರತಿಷ್ಠಾನಾ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.