ಕೂಡಿಗೆ, ಮಾ. ೨೦: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಸಮೀಪದ ಬಲ ಭಾಗದ ಹಾರಂಗಿ ಹಿನ್ನೀರಿನ ಪ್ರದೇಶಕ್ಕೆ ಹೊಂದಿಕೊAಡಿರುವ ಅರಣ್ಯ ಇಲಾಖೆಯ ೪೦ ಎಕರೆಗಳಷ್ಟು ಪ್ರದೇಶದಲ್ಲಿ ಈಗಾಗಲೇ ಟ್ರೀ ಪಾರ್ಕ್ ಮಾಡಲು ಉದ್ದೇಶಿಸಿ ಕಾಯ್ದಿರಿಸಿದ ಜಾಗದ ಪಕ್ಕದಲ್ಲಿ ಸರಕಾರ ಹೊಸ ಸಾಕಾನೆ ಶಿಬಿರ ಆರಂಭಿಸುವ ಕಾರ್ಯಗಳು ಭರದಿಂದ ಸಾಗುತ್ತಿದೆ.

ಈಗಾಗಲೇ ಜಿಲ್ಲೆಯ ಮತ್ತಿಗೋಡು, ನಾಗರಹೊಳೆ, ದುಬಾರೆಗಳಲ್ಲಿ ಇರುವಂತೆ ಹಾರಂಗಿಯಲ್ಲಿ ನೂತನವಾಗಿ ಆನೆ ಕ್ಯಾಂಪ್ ಆರಂಭ ಮಾಡಲು ಬೇಕಾಗುವ ಎಲ್ಲಾ ಸಿದ್ಧತೆಗಳ ನಡೆಯುತ್ತಿವೆ.

ಹಾರಂಗಿ ಹಿನ್ನೀರಿನ ಪ್ರದೇಶದ ಅರಣ್ಯ ಇಲಾಖೆಯ ಜಾಗದಲ್ಲಿ ಸಾಕಾನೆಗಳ ಕ್ಯಾಂಪ್‌ನ ನಿರ್ವಹಣೆ ಬೇಕಾಗುವ ಸಾಮಗ್ರಿಗಳ ಸಂಗ್ರಹದ ಕೊಠಡಿ, ಆನೆ ಮಾವುತರು, ಕಾವಾಡಿಗರು ವಾಸಿಸಲು ಬೇಕಾಗುವ ಮನೆಗಳ ನಿರ್ಮಾಣ ಮತ್ತು ಆನೆಗಳಿಗೆ ಅಹಾರ ತಯಾರಿಸುವ ಕೊಠಡಿ, ಸಾಕಾನೆಗಳ ಶಿಬಿರದಲ್ಲಿ ಇರಬೇಕಾದ ಎಲ್ಲಾ ವ್ಯವಸ್ಥೆಗಳ ಕಾರ್ಯಗಳು ಸೇರಿದಂತೆ ಆ ಜಾಗಕ್ಕೆ ತೆರಳುವ ರಸ್ತೆ, ವಿದ್ಯುತ್ ದೀಪಗಳ ಅಳವಡಿಕೆ ಬೇಕಾಗುವ ವಿದ್ಯುತ್ ಕಂಬಗಳ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳ ಕೆಲಸಗಳು ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ ನೇತೃತ್ವದಲ್ಲಿ ನಡೆಸಫಾರಿಯನ್ನು ನಡೆಸಲು ಉದ್ಧೇಶಿಸಿ ಜಾಗವನ್ನು ಗುರುತಿಸಲಾಗಿದೆ. ಅದರಂತೆ ಆನೆ ಕ್ಯಾಂಪ್‌ಗೆ ಪ್ರಮುಖವಾಗಿ ಬೇಕಾಗಿರುವ ನೀರಿನ ಸೌಲಭ್ಯ ಮತ್ತು ಸಾಕಾನೆಗಳಿಗೆ ಸ್ನಾನಕ್ಕೆ ಬೇಕಾಗುವ ನೀರಿನ ವ್ಯವಸ್ಥೆ, ಹಾರಂಗಿ ನದಿಯ ಹಿನ್ನೀರಿನಲ್ಲಿ ವ್ಯವಸ್ಥೆಯು ಇದುವುದರಿಂದ ಸಾಕಾನೆಗಳ ಕ್ಯಾಂಪ್ ತರೆಯಲು ಉತ್ತಮವಾದ ಪ್ರದೇಶ ಎಂದು ಗುರುತಿಸಿ ಸರಕಾರಕ್ಕೆ ಕಳೆದ ಎರಡು ವರ್ಷಗಳ ಹಿಂದೆ ವರದಿಯನ್ನು ಸಲ್ಲಿಸಿತ್ತು.

ಅದರಂತೆ ರಾಜ್ಯ ಸರ್ಕಾರದ ಅರಣ್ಯ ಇಲಾಖೆಯ ಆದೇಶದಂತೆ ಹೊಸ ಸಾಕಾನೆಗಳ ಶಿಬಿರವನ್ನು ತೆರೆಯಲು ಅನುಮತಿ ದೊರೆತ ಹಿನ್ನೆಲೆಯಲ್ಲಿ ಮತ್ತು ಸರಕಾರದಿಂದ ಈಗಾಗಲೇ ರೂ. ೫೦ ಲಕ್ಷ ಬಿಡುಗಡೆಯಾದ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿನಿAದ ಹಾರಂಗಿಯಲ್ಲಿ ಹೊಸ ಆನೆ ಕ್ಯಾಂಪ್ ತೆರೆಯವ ಚಿಂತನೆಯೊAದಿಗೆ ಶೇ. ೫೦ ರಷ್ಟು ಮುಗಿದಿದೆ. ಇತರೆ ಎಲ್ಲಾ ಯುತ್ತಿವೆ.

ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದಲ್ಲಿ ಹೆಚ್ಚು ಸಾಕಾನೆಗಳು ಇರುವುದರಿಂದ ಹೆಚ್ಚುವರಿ ಸಾಕಾನೆಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಯೋಜನೆಯನ್ನು ಅರಣ್ಯ ಇಲಾಖೆ ಸಿದ್ಧಪಡಿಸಿದೆ. ಅದರನ್ವಯ ಜಿಲ್ಲೆಯಲ್ಲಿರುವ ಹಾರಂಗಿ ಅಣೆಕಟ್ಟೆಯ ಸಮೀಪದಲ್ಲಿ ಈಗಾಗಲೇ ಟೀ ಪಾರ್ಕ್ ಮತ್ತು ಆನೆ ಕೆಲಸಗಳು ಭರದಿಂದ ಸಾಗುತ್ತಿದೆ.

ಹೈಕೋರ್ಟ್ ಆದೇಶದಂತೆ ಒಂದು ಆನೆ ಕ್ಯಾಂಪ್‌ನಲ್ಲಿ ೧೫ ಸಾಕಾನೆಗಳು ಇರಬೇಕು ಎಂಬ ನಿಯಮದಡಿಯಲ್ಲಿ ದುಬಾರೆ ಆನೆ ಕ್ಯಾಂಪ್‌ನಲ್ಲಿ ಹೆಚ್ಚು ಸಾಕಾನೆಗಳು ಇರುವುದರಿಂದ ಅಲ್ಲಿದ ಕೆಲ ಆನೆಗಳನ್ನು ಹಾರಂಗಿಯ ನೂತನ ಆನೆ ಕ್ಯಾಂಪ್‌ಗೆ ಸಾಗಿಸಲಾಗುವುದು ಎಂದು ತಿಳಿದುಬಂದಿದೆ.

ಸಾಕಾನೆಗಳ ಶಿಬಿರ ಆರಂಭ ಮಾಡಲು ಉದ್ದೇಶಿಸಿರುವ ಜಾಗವು ಹಾರಂಗಿ ಅಣೆಕಟ್ಟೆಯ ಹಿನ್ನೀರಿನ ಪ್ರದೇಶದಲ್ಲಿದ್ದು, ಸಮೀಪದ ೨೦೦೦ ಎಕರೆಗಳಷ್ಟು ಪ್ರದೇಶದಲ್ಲಿರುವ ಅತ್ತೂರು ಮೀಸಲು ಅರಣ್ಯ ಪ್ರದೇಶವು ಸಹ ಸಾಕಾನೆಗಳ ಓಡಾಟಕ್ಕೆ ಮತ್ತು ಮೇಯಲು ಅನುಕೂಲವಾದ ಪ್ರದೇಶವಾಗಿದೆ.

ಹಾರಂಗಿ ಅಣೆಕಟ್ಟೆಯ ಮುಂಭಾಗದ ಕಾವೇರಿ ನೀರಾವರಿ ನಿಗಮದ ವತಿಯಿಂದ ಈಗಾಗಲೇ ಬೃಂದಾವನ ಉದ್ಯಾನವನವಿದ್ದು ಇದರ ಜೊತೆಯಲ್ಲಿ ಅತ್ಯಾಕರ್ಷಕವಾದ ಸಂಗೀತ ಕಾರಂಜಿ ಇದೆ. ಕಳೆದ ಎರಡೂ ವರ್ಷಗಳಿಂದ ಪ್ರವಾಸಿಗರಿಗೆ ವೀಕ್ಷಣೆಯ ಅವಕಾಶವನ್ನು ಒದಗಿಸಲಾಗಿದೆ. ಇದರಿಂದಾಗಿ ರಾಜ್ಯ ಮತ್ತು ಅಂತರರಾಜ್ಯದ ಪ್ರವಾಸಿಗರು ಬಂದು ವೀಕ್ಷಣೆÀ ಮಾಡಿ ತೆರಳುತ್ತಿದ್ದಾರೆ. ಇದರ ಜೊತೆಯಲ್ಲಿ ಸಮೀಪದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಆನೆ ಕ್ಯಾಂಪ್ ಆರಂಭವಾದಲ್ಲಿ ಇನ್ನೂ ಜಿಲ್ಲೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದು. ಇದರ ಮುಖೇನ ಪ್ರವಾಸೋದ್ಯಮವೂ ಬೆಳವಣಿಗೆ ಸಾಧಿಸುತ್ತದೆ.

ಸರಕಾರ ೫೦ ಲಕ್ಷ ರೂ.ಗಳನ್ನು ನೂತನ ಆನೆ ಕ್ಯಾಂಪ್ ಯೋಜನೆಗೆ ಬಿಡುಗಡೆ ಮಾಡಿದೆ. ಅದರನ್ವಯ ಹಾರಂಗಿಯಲ್ಲಿ ಈಗಾಗಲೇ ಕಾಯ್ದಿರಿಸಿದ ಜಾಗದಲ್ಲಿ ಸಾಕಾನೆಗಳ ಕ್ಯಾಂಪ್ ತೆರೆಯುವ ಕಾಮಗಾರಿಗಳ ಕೆಲಸಗಳು ನಡೆಯುತ್ತಿವೆ ಅದಕ್ಕೆ ಬೇಕಾಗುವ ಅಧಿಕಾರಿಗಳ ವರ್ಗ, ಸಿಬ್ಬಂದಿ , ವೈದ್ಯಾಧಿಕಾರಿ ನೇಮಕ ಸೇರಿದಂತೆ ಎಲ್ಲಾ ಕೆಲಸಗಳು ರಾಜ್ಯ ಮಟ್ಟದಿಂದ ಆಗಬೇಕಾಗಿದೆ. ಇವುಗಳನ್ನು ಸರಿಪಡಿಸಿಕೊಂಡು ಮುಂದಿನ ತಿಂಗಳುಗಳಲ್ಲಿ ಆನೆ ಕ್ಯಾಂಪ್ ಆರಂಭ ಮಾಡುವ ಯೋಜನೆ ಇದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ತಿಳಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.