ಮಡಿಕೇರಿ, ಮಾ. ೨೦: ಭಗವತಿ ನಗರದ ಟೀಂ ಭಗವತಿ ತಂಡದ ವತಿಯಿಂದ ಏ. ೨ ರಂದು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಎರಡನೇ ವರ್ಷದ ಕೊಡಗು ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ ೮.೩೦ ಗಂಟೆಗೆ ಪಂದ್ಯಾಟ ಆರಂಭವಾಗಲಿದ್ದು, ಭಾಗವಹಿಸುವ ತಂಡಗಳು ತಾ. ೨೪ ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಮೊದಲ ೩೦ ತಂಡಗಳಿಗೆ ಮಾತ್ರ ಆಡಲು ಅವಕಾಶ ನೀಡಲಾಗುತ್ತದೆ. ಪ್ರಥಮ ಬಹುಮಾನವಾಗಿ ೪೪,೪೪೪ ರೂ. ನಗದು ಟ್ರೋಫಿ, ದ್ವಿತೀಯ ಬಹುಮಾನವಾಗಿ ೨೨,೨೨೨ ರೂ. ನಗದು ಟ್ರೋಫಿ, ತೃತೀಯ ಬಹುಮಾನವಾಗಿ ೧೧,೧೧೧ ರೂ. ನಗದು ಟ್ರೋಫಿ ಹಾಗೂ ನಾಲ್ಕನೇ ಬಹುಮಾನವಾಗಿ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಪಂದ್ಯಾಟದ ಕುರಿತ ಹೆಚ್ಚಿನ ಮಾಹಿತಿಗೆ ೯೮೮೬೬೦೪೩೩೪ ಅಥವಾ ೯೮೪೫೫೪೬೧೮೪ ದೂರವಾಣಿಯನ್ನು ಸಂಪರ್ಕಿಬಹುದಾಗಿದೆ.