ಸೋಮವಾರಪೇಟೆ, ಮಾ.೨೦: ತಾಲೂಕು ಸ್ತಿçà ಶಕ್ತಿ ಬ್ಲಾಕ್ ಸೊಸೈಟಿ ವತಿಯಿಂದ ತಾ. ೨೦ರಂದು (ಇಂದು) ಪೂರ್ವಾಹ್ನ ೧೧ ಗಂಟೆಗೆ ಸ್ತಿçà ಶಕ್ತಿ ಭವನದಲ್ಲಿ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯದರ್ಶಿ ಹೇಮ ತಿಳಿಸಿದ್ದಾರೆ.
ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ತಾಲೂಕು ಸ್ತಿçà ಶಕ್ತಿ ಸೊಸೈಟಿ ಅಧ್ಯಕ್ಷೆ ಸುಮತಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು, ತಹಶೀಲ್ದಾರ್ ಗೋವಿಂದ ರಾಜು, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಸೊಸೈಟಿಯ ರಾಜ್ಯಾಧ್ಯಕ್ಷೆ ರೆಹನಾ ಸುಲ್ತಾನ್, ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್, ಸಿಡಿಪಿಓ ಅಣ್ಣಯ್ಯ, ಹಿರಿಯ ಪತ್ರಕರ್ತೆ ಶ.ಗ. ನಯನತಾರ, ಮಹಿಳಾ ಮೇಲ್ವಿಚಾರಕಿ ಗುರುಬಸಮ್ಮ, ಸಾವಿತ್ರವ್ವ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.