ಕುಶಾಲನಗರ, ಮಾ.೨೦ : ಕೊಡಗು ಜಿಲ್ಲಾ ವೀರಶೈವ ಸಮಾಜ ಮಹಾಸಭಾ ವತಿಯಿಂದ ಕುಶಾಲನಗರ ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ವೀರಶೈವ ಧರ್ಮದ ಸಂಸ್ಥಾಪಕರಾದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಕಿರಿಕೊಡ್ಲಿಪೇಟೆ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ವೀರಶೈವ ಎಂಬುದು ಜಾತಿಯಲ್ಲ. ಅದೊಂದು ಪರಿಪೂರ್ಣ ವಿಶ್ವಧರ್ಮ ಎಂದರು.
ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ತತ್ವ ಸಿದ್ಧಾಂತ ಮತ್ತು ಆಚರಣೆಗಳನ್ನು ಬೋಧಿಸಿ ಜೀವನ್ಮುಕ್ತಿಯನ್ನು ತಿಳಿಸಿಕೊಟ್ಟಿದ್ದಾರೆ ಎಂದರು.
ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಎಚ್.ವಿ.ಶಿವಪ್ಪ, ಉಪಾಧ್ಯಕ್ಷರಾದ ಜಿ.ಎಂ.ಕಾAತರಾಜು, ಎಸ್.ಎಸ್. ಸುರೇಶ್, ಪ್ರಧಾನ ಕಾರ್ಯದರ್ಶಿ ಟಿ.ಎಸ್.ಶಾಂಭಶಿವಮೂರ್ತಿ, ಗೌರವ ಕೋಶಾಧಿಕಾರಿ ಎಚ್.ಪಿ. ಉದಯಕುಮಾರ್, ನಿರ್ದೇಶಕರಾದ ಪಿ.ಮಹಾದೇವಪ್ಪ, ಅನುರಾಧ ಚಂದ್ರಶೇಖರ್, ಶ್ರೀಕಂಠಪ್ಪ, ಮಹಿಳಾ ಕಾರ್ಯದರ್ಶಿ ಮಮತಾ ಹರೀಶ್, ದಾನಿ ಎಂ.ಬಿ. ಬಸವರಾಜು, ಪ್ರಮುಖರಾದ ಶಿವಪ್ಪ, ಪುಟ್ಟಸ್ವಾಮಿ, ನಾಗರಾಜ್ ಇತರರು ಇದ್ದರು.