ಕಡAಗ, ಮಾ. ೨೦: ಎಸ್‌ವೈಎಸ್ ಮತ್ತು ಎಸ್‌ಕೆಎಸ್‌ಎಸ್‌ಎಫ್ ಕುಂಜಿಲ ಶಾಖೆ ವತಿಯಿಂದ ಪಾಣಕ್ಕಾಡ್ ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್ ಅನುಸ್ಮರಣೆ ಮತ್ತು ಪ್ರಾರ್ಥನಾ ಸಂಗಮವು ಕುಂಜಿಲ ಪಯ್‌ನರಿ ಮಖಾಂ ನಲ್ಲಿ ನಡೆಯಿತು. ಅನುಸ್ಮರಣೆ ಮತ್ತು ಪ್ರಾರ್ಥನಾ ಸಂಗಮಕ್ಕೆ ನೇತೃತ್ವವನ್ನು ನೀಡಿ ಮಾತನಾಡಿದ ಶೈಖುನಾ ಹುಸೈನ್ ಉಸ್ತಾದ್ ರವರು ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್ ಜೀವನಶೈಲಿ ಹಾಗೂ ತಂಙಳ್ ರವರ ಮಹತ್ವವನ್ನು ವಿವರಿಸಿದರು. ಎಸ್‌ವೈಎಸ್ ಅಧ್ಯಕ್ಷ ಹಮೀದ್ ಫೈಝಿ, ಕಾರ್ಯಾಧ್ಯಕ್ಷರಾದ ಹಂಝ ಮುಸ್ಲಿಯಾರ್, ಹಂಝ ವಯಕೋಲ್, ಮೊಯ್ದು ಮುಸ್ಲಿಯಾರ್, ಎಸ್ ಕೆಎಸ್‌ಎಸ್‌ಎಫ್ ಅಧ್ಯಕ್ಷ ಹನೀಫ, ಜಮಾಅತ್ ಸಮಿತಿ ಸದಸ್ಯರಾದ ಹಂಝ ಪಯ್ಯಡಿ, ಅಬ್ದುಲ್ ರಹಮಾನ್ ಹಾಜಿ, ಇರ್ಷಾದ್ ಎ.ಇ. ಮುಸ್ತಫ, ಅಶ್ರಫ್ ಶಾಕಿರ್ ಪಾಯಡತ್ ಹಾಗೂ ಸಂಘದ ಸದಸ್ಯರುಗಳು ಭಾಗವಹಿಸಿದ್ದರು. -ನೌಫಲ್ ಕಡಂಗ