ಸೋಮವಾರಪೇಟೆ, ಮಾ. ೨೦: ಸಮೀಪದ ಯಡೂರು ವೈಸಿಸಿ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಯಡೂರು ಬಿಟಿಸಿಜಿ ಕಾಲೇಜು ಮೈದಾನದಲ್ಲಿ ನಡೆದ ೨೩ನೇ ವರ್ಷದ ಜಿಲ್ಲಾ ಮಟ್ಟದ ವೈಸಿಸಿ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕೊಡಗು ಯುವ ಜೆಡಿಎಸ್‌ನ ಎಚ್.ಡಿ.ಕೆ. ತಂಡ ಬಜೆಗುಂಡಿ ದುಬೈ ಬ್ರರ‍್ಸ್ ತಂಡವನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಪಡೆಯಿತು.

ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಎಚ್.ಡಿ.ಕೆ. ತಂಡ ಹೊಸಬೀಡು ತಂಡವನ್ನು ಸೋಲಿಸಿ ಪ್ರಶಸ್ತಿ ಹಾಗೂ ನಗದನ್ನು ಮುಡಿಗೇರಿಸಿಕೊಂಡಿತು. ಪ್ರಶಸ್ತಿ ಸ್ವೀಕರಿಸಿದ ತಾಲೂಕು ಯುವ ಜೆಡಿಎಸ್‌ನ ಅಧ್ಯಕ್ಷ ತ್ರಿಶೂಲ್ ಮಾತನಾಡಿ, ಈ ಟೂರ್ನಿಯಲ್ಲಿ ಬಂದಿರುವ ನಗದು ಬಹುಮಾನದಲ್ಲಿ ಅರ್ಧ ಹಣವನ್ನು ಮುಂದಿನ ದಿನಗಳಲ್ಲಿ ಸಮಾಜ ಸೇವೆಗೆ ಬಳಸುವುದಾಗಿ ತಿಳಿಸಿದರು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕ್ಲಬ್‌ನ ಅಧ್ಯಕ್ಷ ಸಿ.ಸಿ. ಲೋಹಿತ್, ಶಾಂತಳ್ಳಿ ಗ್ರಾ. ಪಂ ಮಾಜಿ ಅಧ್ಯಕ್ಷ ಬಗ್ಗನ ಅನಿಲ್, ಯಡೂರು ಗ್ರಾಮದ ವೈ.ಎಂ. ನಾಗರಾಜು, ಡಿ.ಎಸ್. ಸುರೇಶ್, ವಿಜೇತ ತಂಡದ ಸ್ವಾಗತ್ ಕುಶಾಲಪ್ಪ, ರಕ್ಷಿತ್, ಆದರ್ಶ್ ತಮ್ಮಯ್ಯ ಮತ್ತಿತರರು ಇದ್ದರು.