ಆಲೂರುಸಿದ್ದಾಪುರ, ಮಾ. ೨೦: ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಸೋಮವಾರಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರಸಂತೆ ಹೋಬಳಿಯ ನಿಡ್ತ ಗ್ರಾ.ಪಂ. ವ್ಯಾಪ್ತಿಯ ಚೌಡೇನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿಯಲ್ಲಿ ಗ್ರಾಮಸ್ಥರುಗಳ ಅರ್ಜಿ ಸ್ವೀಕಾರ, ಕಡತ ದಾಖಲಾತಿ ವಿಲೇವಾರಿ ಮತ್ತು ಸಾರ್ವಜನಿಕರ ಕುಂದು ಕೊರತೆಗಳು, ಗ್ರಾಮದ ಸಮಸ್ಯೆಗಳ ಕುರಿತಾದ ಸಂವಾದ ಕಾರ್ಯಕ್ರಮ ಶನಿವಾರ ನಡೆಯಿತು. ಅಪರ ಜಿಲ್ಲಾಧಿಕಾರಿ ನಂಜುAಡೇಗೌಡ ಮತ್ತು ಸೋಮವಾರಪೇಟೆ ತಹಶೀಲ್ದಾರ ಗೋವಿಂದರಾಜ್ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಮತ್ತು ಹೋಬಳಿ ಮಟ್ಟದ ಕಂದಾಯ, ಭೂ ಮಾಪನ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡು ಗ್ರಾಮಸ್ಥರ ವಿವಿಧ ಬೇಡಿಕೆಯ ಅರ್ಜಿ, ವಿವಿಧ ದಾಖಲಾತಿಗಳ ಪರಿಶೀಲನೆ, ಗ್ರಾಮದ ಸಮಸ್ಯೆಗಳನ್ನು ಆಲಿಸಿದರು.
ಶನಿವಾರಸಂತೆ ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ದಲ್ಲಾಳಿಗಳ ಹಾವಳಿ, ಕೆಲವು ಅಧಿಕಾರಿಗಳು ರೈತರಿಗೆ ಮತ್ತು ಗ್ರಾಮಸ್ಥರಿಗೆ ಲಂಚದ ಬೇಡಿಕೆ ಇಡುವುದು ಮುಂತಾದ ಭ್ರಷ್ಟಾಚಾರಕ್ಕೆ ಸಂಬAಧಪಟ್ಟ ಸಮಸ್ಯೆಗಳ ಕುರಿತಾಗಿ ಜಿ.ಪಂ. ಮಾಜಿ ಸದಸ್ಯ ಡಿ.ಬಿ. ಧರ್ಮಪ್ಪ ಪ್ರಸ್ತಾಪಿಸಿದರು. ಶನಿವಾರಸಂತೆ ನಾಡ ಕಚೇರಿಯಲ್ಲಿ ದಲ್ಲಾಳಿಗಳು ಜಮೀನು, ಆಸ್ತಿಗಳಿಗೆ ಸಂಬAಧಪಟ್ಟ ಅರ್ಜಿ, ದಾಖಲಾತಿ, ಕಡತಗಳನ್ನು ಮೇಲಾಧಿಕಾರಿಗಳ ಬಳಿಗೆ ತೆಗೆದುಕೊಂಡು ಹೋಗಿ ಕೆಲಸ ಮಾಡಿಕೊಡುತ್ತಿರುವುದು ಹೆಚ್ಚಾಗುತ್ತಿದೆ. ಆದರೆ ರೈತರು, ಗ್ರಾಮಸ್ಥರು ನೇರವಾಗಿ ಸಂಬAಧಪಟ್ಟ ಅಧಿಕಾರಿಗಳಿಗೆ ಅರ್ಜಿ, ದಾಖಲಾತಿ ನೀಡಿ ವರ್ಷಗಳು ಉರುಳಿದರೂ ತಮಗೆ ಸಂಬAಧಪಟ್ಟ ಕೆಲಸವಾಗುವುದಿಲ.್ಲ ದಲ್ಲಾಳಿಗಳಿಂದ ಮಾತ್ರ ಹೇಗೆ ಕೆಲಸವಾಗುತ್ತದೆ ಎಂದು ಆರೋಪಿಸಿದರು.
ಅಪರ ಜಿಲ್ಲಾಧಿಕಾರಿ ನಂಜುAಡೇ ಗೌಡ ಮಾತನಾಡಿ, ಸರಕಾರದ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದ ಮೂಲಕ ತಾಲೂಕು, ಹೋಬಳಿ ಮಟ್ಟದ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಗ್ರಾಮಸ್ಥರ ಅಹವಾಲು, ಗ್ರಾಮದ ಸಮಸ್ಯೆ ಮುಂತಾದವುಗಳ ಅರ್ಜಿ ಸ್ವೀಕಾರ ಮಾಡುವುದರ ಜೊತೆಯಲ್ಲಿ ಸ್ಥಳದಲ್ಲೆ ದಾಖಲಾತಿ ವಿಲೇವಾರಿ ಮಾಡಿಕೊಡಲಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಸಭೆಗೆ ಬಂದು ತಮ್ಮ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಹೇಳಿಕೊಳ್ಳಬಹುದಾಗಿದೆ ಎಂದರು. ಹಿಂದೆ ಹೋಬಳಿ ಕೇಂದ್ರದಲ್ಲಿ ಜನರ ಸೇವೆಗಾಗಿ ಕಾರ್ಯನಿರ್ವಹಿಸುತ್ತಿದ್ದ ಕಚೇರಿಯು ಇದೀಗ ಗ್ರಾ.ಪಂ.ಯ ಕೇಂದ್ರದಲ್ಲಿ ಗ್ರಾಮ ಸೇವಾ ಕೇಂದ್ರ ಎಂಬ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಗ್ರಾಮಸ್ಥರು ಇದರ ಸೇವೆಯನ್ನು ಸದುಪಯೋಗಿಸಿ ಕೊಳ್ಳಬೇಕು, ಅಧಿಕಾರಿಗಳು ತನ್ನ ಅಧಿಕಾರದ ಇತಿಮಿತಿಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ ಹಾಗೇ ಅಧಿಕಾರಿಗಳು ತಮ್ಮ ಕಚೇರಿಗೆ ಬರುವ ಸಾರ್ವಜನಿಕರು, ರೈತರಿಗೆ ಸರಿಯಾಗಿ ಸ್ಪಂದಿಸುವAತಹ ಸೇವಾ ಮನೋಭಾವನೆಯನ್ನು ಬೆಳೆಸಿ ಕೊಳ್ಳಬೇಕೆಂದರು.
ಸೋಮವಾರಪೇಟೆ ತಹಶೀಲ್ದಾರ ಗೋವಿಂದÀರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿಡ್ತ ಗ್ರಾ.ಪಂ. ಅಧ್ಯಕ್ಷೆ ಯಶೋಧ, ಗ್ರಾ.ಪಂ. ಕಾರ್ಯದರ್ಶಿ ಕುಶಾಲಪ್ಪ, ಗ್ರಾ.ಪಂ. ಸದಸ್ಯ ತೀರ್ಥಾನಂದ್, ಗ್ರಾಮಲೆಕ್ಕಾಧಿಕಾರಿ ಗಳಾದ ಸಂತೋಷ್, ರಜಾಕ್, ವಿಶ್ವವಾಣಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು