ಸಿದ್ದಾಪುರ, ಮಾ. ೨೧: ನೆಲ್ಯಹುದಿಕೇರಿ ನಗರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಒತ್ತಾಯಿಸಿ ಸಿಪಿಐಎಂ ವತಿಯಿಂದ ಗ್ರಾ ಪಂ ಎದುರು ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡ ಪಿ ಆರ್ ಭರತ್ ಮಾತನಾಡಿ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಗ್ರೇಡ್ ಒನ್ ಪಂಚಾಯಿತಿಯಾಗಿದೆ. ನೆಲ್ಯಹುದಿಕೇರಿ ನಗರವು ವಾಣಿಜ್ಯ, ವ್ಯಾಪಾರ ಚಟುವಟಿಕೆಗಳಿಂದ ಬೆಳೆಯುತ್ತಿರುವ ನಗರವಾಗಿದೆ.ಅಲ್ಲದೆ ನಗರವು ಅತೀ ಹೆಚ್ಚು ಜನಸಾಂದ್ರತೆ ಹೊಂದಿದೆ. ಪ್ರತಿನಿತ್ಯ ಶಾಲೆ ಕಾಲೇಜು, ಆಸ್ಪತ್ರೆ, ಸಾಮಾಗ್ರಿಗಳ ಖರೀದಿಗೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಆಗಮಿಸುತ್ತಾರೆ. ಸಾರ್ವಜನಿಕ ಶೌಚಾಲಯ ಇಲ್ಲದೆ ಅನಾರೋಗ್ಯಪೀಡಿತರು, ವೃದ್ಧರಿಗೆ ಸಮಸ್ಯೆಯಾಗಿದೆ.
ಗ್ರಾ.ಪಂ. ಎದುರು ಪ್ರತಿಭಟನೆ ನಡೆಸುವುದಾಗಿ ಪತ್ರಿಕೆ ,ಮಾಧ್ಯಮದಲ್ಲಿ ಹೇಳಿಕೆ ನೀಡಿರುವುದು ಗ್ರಾಮ ಪಂಚಾಯಿತಿಯ ಗಮನಕ್ಕೆ ಬಂದಿದ್ದರೂ ಕೂಡ ಮನವಿ ಸ್ವೀಕರಿಸಲು ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಪಿಡಿಓ ಕೂಡ ಸ್ಥಳದಲ್ಲಿ ಇಲ್ಲದೆ ಇರುವುದು ಸರಿಯಲ್ಲ. ಶೌಚಾಲಯದ ಬೇಡಿಕೆಗೆ ಸಂಬAಧಿಸಿದAತೆ ಹಲವಾರು ವರ್ಷಗಳಿಂದ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮನವಿ ಮಾಡುತ್ತಾ ಬಂದಿದ್ದರೂ ಯಾರೂ ಕೂಡ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಮುಂದಾಗಲಿಲ್ಲ. ನಗರದಲ್ಲಿ ಅವಶ್ಯಕವಾದ ಸಾರ್ವಜನಿಕ ಶೌಚಾಲಯದ ಕುರಿತು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಕಾರ್ಯಾಲ ಯದ ಎದುರು ಶೌಚಾಲಯ ನಿರ್ಮಿಸಿ ಪ್ರತಿಭಟನೆ ನಡೆಸಲಾಗು ವುದು ಎಂದರು. ಇದೇ ಸಂದರ್ಭದಲ್ಲಿ ಶೌಚಾಲಯ ನಿರ್ಮಾಣಕ್ಕೆ ಬೇಡಿಕೆ ಸಂಬAಧ ಮನವಿ ಪತ್ರವನ್ನು ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್ರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಪ್ರಮುಖರಾದ ಮೋಣಪ್ಪ, ಚಂದ್ರ, ಶಿವರಾಮ, ಮಣಿ ಇನ್ನಿತರರು ಹಾಜರಿದ್ದರು.