ಮಡಿಕೇರಿ, ಮಾ. ೨೧ : ಯುವ ಬಂಟ್ಸ್ ಅಸೋಸಿಯೇಷನ್ ವತಿಯಿಂದ ಮೂರು ದಿನ ಕಾಲ ನಡೆದ ಬಂಟ್ಸ್ ಚಾಂಪಿಯನ್ಸ್ ಲೀಗ್ ಕ್ರಿಕೆಟ್-೨೦೨೨ರಲ್ಲಿ ಭಗವತಿ ಬಂಟ್ಸ್ ಮಡಿಕೇರಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಫೈನಲ್ ಪಂದ್ಯದಲ್ಲಿ ಬಂಟ್ಸ್ ಹಂಟರ್ಸ್ ಐಗೂರು ತಂಡವನ್ನು ೫೨ ರನ್ ಅಂತರದಿAದ ಮಣಿಸಿತು. ಮೊದಲು ಬ್ಯಾಟ್ ಮಾಡಿದ ಭಗವತಿ ಬಂಟ್ಸ್ ತಂಡ ನಿಗದಿತ ೬ ಓವರ್ನಲ್ಲಿ ೫ ವಿಕೆಟ್ ಕಳೆದುಕೊಂಡು ೯೬ ರನ್ ಗಳಿಸಿತು. ಅಗ್ರ ಕ್ರಮಾಂಕದ ಆಟಗಾರರು ಬೇಗ ವಿಕೆಟ್ ಕೈಚೆಲ್ಲಿದರೂ ರೇಣುಕಾ ಪ್ರಸಾದ್ ಶೆಟ್ಟಿ ಏಕಾಂಗಿಯಾಗಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಆಸರೆಯಾದರು. ೨೦ ಎಸೆತದಲ್ಲಿ ೧೩ ಸಿಕ್ಸರ್ ಸಿಡಿಸಿದ ರೇಣುಕಾ ಪ್ರಸಾದ್ ವೈಯಕ್ತಿಕವಾಗಿ ೭೯ ರನ್ ಗಳಿಸಿ ಔಟಾಗದೆ ಉಳಿದರು.
ಗುರಿ ಬೆನ್ನತ್ತಿದ ಐಗೂರು ತಂಡ ನಿಗದಿತ ಓವರ್ನಲ್ಲಿ ೫ ವಿಕೆಟ್ ಕಳೆದುಕೊಂಡು ೪೪ ರನ್ ಗಳಿಸಲು ಮಾತ್ರ ಶಕ್ತವಾಯಿತು. ದಿವಿನ್(೧೨), ಪ್ರವೀಣ್(೧೪) ಹೊರತುಪಡಿಸಿ ಯಾವ ಆಟಗಾರನೂ ಎರಡಂಕಿ ರನ್ ಗಳಿಸಲಿಲ್ಲ. ಬೌಲಿಂಗ್ನಲ್ಲೂ ಉತ್ತಮ ಪ್ರದರ್ಶನ ತೋರಿದ ರೇಣುಕಾ ಪ್ರಸಾದ್ ಎರಡು ಓವರ್ನಲ್ಲಿ ೧೨ ರನ್ ನೀಡಿ ೨ ಪ್ರಮುಖ ವಿಕೆಟ್ ಕಬಳಿಸಿ ಮಿಂಚಿದರು. ಭಗವತಿ ಬಂಟ್ಸ್ ತಂಡ ಆಡಿದ ೯ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಗಮನ ಸೆಳೆಯಿತು. ವಿಜೇತ ತಂಡಕ್ಕೆ ಟ್ರೋಫಿ, ೬೦,೦೦೦ ರೂ. ನಗದು, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ, ೪೦,೦೦೦ ರೂ. ನಗದು ಬಹುಮಾನ ನೀಡಲಾಯಿತು.
(ಮೊದಲ ಪುಟದಿಂದ) ಇದಕ್ಕೂ ಮೊದಲು ನಡೆದ ಮೊದಲ ಕ್ವಾಲಿಫೈಯರ್ನಲ್ಲಿ ಬಂಟ್ಸ್ ಹಂಟರ್ಸ್ ಐಗೂರು ವಿರುದ್ಧ ಭಗವತಿ ಬಂಟ್ಸ್ ತಂಡ ೨೯ ರನ್ ಗೆಲುವು ದಾಖಲಿಸಿ ಫೈನಲ್ಗೆ ಅರ್ಹತೆ ಪಡೆಯಿತು. ಎಲಿಮಿನೇಟರ್ ಪಂದ್ಯದಲ್ಲಿ ಸಮುದ್ರ ಶೆಟ್ಟಿ ಗ್ರೂಪ್ಸ್ ತಂಡವನ್ನು ೧೫ ರನ್ ಅಂತರದಿAದ ಮಣಿಸಿದ ಬೊಟ್ಲಪ್ಪ ಬಂಟ್ಸ್ ತಂಡ ದ್ವಿತೀಯ ಕ್ವಾಲಿಫೈಯರ್ಗೆ ಪ್ರವೇಶಿಸಿತು. ದ್ವಿತೀಯ ಕ್ವಾಲಿಫೈಯರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಬೊಟ್ಲಪ್ಪ ಬಂಟ್ಸ್ ೬ ಓವರ್ನಲ್ಲಿ ೫ ವಿಕೆಟ್ಗೆ ೪೫ ರನ್ ಗಳಿಸಿತು. ಬಂಟ್ಸ್ ಹಂಟರ್ಸ್ ತಂಡ ೪.೨ ಓವರ್ನಲ್ಲಿ ೧ ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿ ಎರಡನೇ ತಂಡವಾಗಿ ಫೈನಲ್ಗೇರಿತು. ಬೊಟ್ಲಪ್ಪ ಬಂಟ್ಸ್ ತೃತೀಯ, ಸಮುದ್ರ ಶೆಟ್ಟಿ ಗ್ರೂಪ್ಸ್ ನಾಲ್ಕನೇ ಬಹುಮಾನ ಪಡೆಯಿತು.
ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದ ಭಗವತಿ ಬಂಟ್ಸ್ ತಂಡದ ರೇಣುಕಾ ಪ್ರಸಾದ್ ಶೆಟ್ಟಿ ೯ ಪಂದ್ಯದಲ್ಲಿ ವೈಯಕ್ತಿಕವಾಗಿ ೨೭೦ ಗಳಿಸಿದರು. ಬೌಲಿಂಗ್ನಲ್ಲೂ ಉತ್ತಮ ಪ್ರದರ್ಶನ ತೋರಿ ೧೫ ವಿಕೆಟ್ ಕಬಳಿಸಿದರು. ಆ ಮೂಲಕ ಸರಣಿ ಶ್ರೇಷ್ಠ, ಬೆಸ್ಟ್ ಬ್ಯಾಟರ್, ಬೆಸ್ಟ್ ಬೌಲರ್, ಅಂತಿಮ ಪಂದ್ಯದ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ಉತ್ತಮ ಕ್ಷೇತ್ರ ರಕ್ಷಕ - ಸಂದೇಶ್ ರೈ(ಬಂಟ್ಸ್ ಹಂಟರ್ಸ್ ಐಗೂರು), ಉದಯೋನ್ಮುಖ ಆಟಗಾರ-ದಿವಿನ್ ರೈ(ಐಗೂರು). ಕಿರಿಯ ಪ್ರತಿಭೆ-ದಿಗಂತ್ ರೈ(ಬಂಟ್ಸ್ ದ ಹಂಟರ್ಸ್ ಮಡಿಕೇರಿ) ಪ್ರಶಸ್ತಿ ಪಡೆದರು.
ಮಹಿಳೆಯರ ಕ್ರೀಡಾಕೂಟ
ಇದಕ್ಕೂ ಮುನ್ನ ನಡೆದ ಮಹಿಳೆಯರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಸುಮತಿ ಶೆಟ್ಟಿ ನಾಯಕತ್ವದ ಭಗವತಿ ಬಂಟ್ಸ್ ತಂಡ ಪ್ರಥಮ, ದೀಕ್ಷಾ ಕಿಶೋರ್ ರೈ ನಾಯಕತ್ವದ ಯಂಗ್ ಬಂಟ್ಸ್ ಕೈಕೇರಿ ದ್ವಿತೀಯ ಸ್ಥಾನ ಪಡೆಯಿತು. ಥ್ರೋಬಾಲ್ನಲ್ಲಿ ದೀಕ್ಷಾ ಕಿಶೋರ್ ನಾಯಕತ್ವದ ಯಂಗ್ ಬಂಟ್ಸ್ ಕೈಕೇರಿ ಪ್ರಥಮ, ಜಯಂತಿ ಆರ್. ಶೆಟ್ಟಿ ನಾಯಕತ್ವದ ಭಗವತಿ ಬಂಟ್ಸ್ ದ್ವಿತೀಯ ಸ್ಥಾನ ಪಡೆಯಿತು.
ಪುರುಷರ ವಿಭಾಗದ ಹಗ್ಗಜಗ್ಗಾಟದಲ್ಲಿ ಯೋಗೇಶ್ ಶೆಟ್ಟಿ ನಾಯಕತ್ವದ ಮಲ್ನಾಡ್ ಬಂಟ್ಸ್ ಪ್ರಥಮ, ಸತೀಶ್ ರೈ ನಾಯಕತ್ವದ ಯಂಗ್ ಬಂಟ್ಸ್ ಕೈಕೇರಿ ದ್ವಿತೀಯ ಸ್ಥಾನ ಗಳಿಸಿತು.
ವೈಯಕ್ತಿಕ ಬಹುಮಾನ ವಿವರ
ಪ್ರಿ ನರ್ಸರಿ(ಚಾಕೋಲೆಟ್ ಹೆಕ್ಕುವುದು) - ತ್ರಿಶಾಲಿ ರಮೇಶ್ ರೈ(ಪ್ರ), ಮೋನಲ್ ರವಿಕಿರಣ್ ರೈ(ದ್ವಿ), ಅದ್ವಿತ್ ಸಂತೋಷ್ ರೈ(ತೃ), ನಿಖಿಲ್ ಅರುಣ್ ಶೆಟ್ಟಿ(ಚ). (ಎಲ್ಕೆಜಿ, ಯುಕೆಜಿ) ಬಾಲಕರ ವಿಭಾಗದ ಕಪ್ಪೆ ಜಿಗಿತ - ಮನ್ವಿಕ್ ಶರತ್ ರೈ(ಪ್ರ). ಬಾಲಕಿಯರ ವಿಭಾಗದ ರ್ಯಾಬಿಟ್ ರೇಸ್ - ಆರಾಧ್ಯ ಲೋಕೇಶ್ ರೈ(ಪ್ರ), ಅದಿತ್ರಿ ಸಂತೋಷ್ ರೈ(ದ್ವಿ). ೧-೩ನೆ ತರಗತಿ ಬಾಲಕರ ೫೦ ಮೀ. ಓಟ - ಸಮೃದ್ಧ್ ಸದಾಶಿವ ರೈ(ಪ್ರ)
ಬಾಲಕಿಯರ ವಿಭಾಗದ ಬುಕ್ ಬ್ಯಾಲೆನ್ಸ್ ಓಟ - ಸಾನ್ವಿ ಸತೀಶ್ ರೈ ಕೈಕೇರಿ(ಪ್ರ). ವಂಶಿಕ ಚಂದ್ರಶೇಖರ್ ರೈ(ದ್ವಿ), ಹಿತಶ್ರೀ ಸಚಿನ್ ರೈ(ತೃ), ಜನ್ಯ ಸತೀಶ್ ರೈ(ಚ). ೪, ೫ನೆ ತರಗತಿ ೭೫ ಮೀ. ಓಟ, ಬಾಲಕರ ವಿಭಾಗ -ಕಾರ್ತಿಕ್ ಸತೀಶ್ ರೈ ಕೈಕೇರಿ(ಪ್ರ), ಅನ್ಶುಲ್ ಜಯರಾಮ್ ರೈ(ದ್ವಿ).
ಬಾಲಕಿಯರ ವಿಭಾಗ - ಐಶ್ವರ್ಯ ಲೋಕೇಶ್ ರೈ(ಪ್ರ), ಚಿರಸ್ವಿ ಜಯ ರೈ(ದ್ವಿ), ಅನನ್ಯ ಪ್ರಕಾಶ್ ರೈ(ತೃ). ೬,೭ನೆ ತರಗತಿ ೧೦೦ ಮೀ. ಓಟ, ಬಾಲಕರ ವಿಭಾಗ - ಆದಿತ್ಯ ಜಿತೇಂದ್ರ ರೈ(ಪ್ರ), ಸಮರ್ಥ್ ಸದಾಶಿವ ರೈ(ದ್ವಿ), ಸಿಂಚನ ಹರೀಶ್ ರೈ(ತೃ). ಬಾಲಕಿಯರ ವಿಭಾಗ - ಮೋಕ್ಷಿತ ಹರೀಶ್ ರೈ(ಪ್ರ). ೮-೧೦ನೆ ತರಗತಿ ೧೦೦ ಮೀ. ಓಟ, ಬಾಲಕರ ವಿಭಾಗ -ರಿನಿತ್ ದಯಾಕರ್ ರೈ(ಪ್ರ), ಪ್ರಜ್ವಲ್ ಜಯ ರೈ ಕೈಕೇರಿ(ದ್ವಿ), ಪೂಜಿತ್ ಗುಣಶೇಖರ್ ಶೆಟ್ಟಿ(ತೃ)
ಬಾಲಕಿಯರ ವಿಭಾಗ - ದೇಶಿಕಾ(ಪ್ರ), ರೋಶ್ನಿ ಅಶೋಕ್ ಆಳ್ವ(ದ್ವಿ). ಪಿಯುಸಿ-ಪದವಿ ತರಗತಿ ೧೦೦ ಮೀ. ಓಟ, ಬಾಲಕಿಯರ ವಿಭಾಗ -ನವ್ಯ ಜಯರಾಮ್ ರೈ(ಪ್ರ), ಪವಿತ್ರ ಗಣೇಶ್ ರೈ(ದ್ವಿ). ೫೦ ವರ್ಷ ಮೇಲ್ಪಟ್ಟ ಪುರುಷರ ೫೦ ಮೀ. ಓಟ - ಜನಾರ್ಧನ ರೈ(ಪ್ರ), ಶೇಖರ್ ಶೆಟ್ಟಿ(ದ್ವಿ), ಗೋಪಣ್ಣ ರೈ(ತೃ), ಪಿ.ಎಸ್. ಕೊರಗಪ್ಪ ರೈ(ಸಮಾಧಾನಕರ). ಪುರುಷರ ವಿಭಾಗದ ಭಾರದ ಗುಂಡು ಎಸೆತ - ಪ್ರಕಾಶ್ ರೈ(ಪ್ರ), ಲಿಖಿತ್ ರೈ(ದ್ವಿ), ಗಗನ್ ಆಳ್ವ(ತೃ) ಸಂಗೀತ ಕುರ್ಚಿ(ಮಹಿಳೆಯರು) - ಮಮತಾ ಸತೀಶ್ ರೈ(ಪ್ರ), ಪವಿತ್ರಾ ಸಚಿನ್ ರೈ(ದ್ವಿ), ಲತಾ(ತೃ) ಸ್ಥಾನ ಗಳಿಸಿಕೊಂಡಿರು.
ಸಮಾರೋಪ
ಸAಜೆ ಉದ್ಯಮಿ ಐತಪ್ಪ ರೈ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಿತು. ವೇದಿಕೆ ಕಾರ್ಯಕ್ರಮವನ್ನು ಗುತ್ತಿಗೆದಾರ ಬಿ.ಕೆ. ರವೀಂದ್ರ ರೈ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಜಗದೀಶ್ ರೈ, ರಮೇಶ್ ರೈ, ಮಡಿಕೇರಿ ನಗರ ಬಂಟರ ಮಹಿಳಾ ಘಟಕ ಅಧ್ಯಕ್ಷೆ ಸೌಮ್ಯ ಶೆಟ್ಟಿ, ನಗರಸಭೆ ಸದಸ್ಯ ಅರುಣ್ ಶೆಟ್ಟಿ, ಪ್ರಮುಖರಾದ ಗಿರೀಶ್ ರೈ, ಡಾ.ಜಯಂತಿ ಆರ್. ಶೆಟ್ಟಿ, ವಿಜಯಲಕ್ಷಿö್ಮÃ ಶೆಟ್ಟಿ, ಸಾವಿತ್ರಿ ಉದಯ ಶೆಟ್ಟಿ ಪಾಲ್ಗೊಂಡಿದ್ದರು. ವಿವಿಧ ಕ್ಷೇತ್ರದ ಸಾಧಕರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಹಿತಾ ಯೋಗೇಶ್ ಶೆಟ್ಟಿ ಪ್ರಾರ್ಥಿಸಿ, ರವಿಕಿರಣ್ ರೈ ಸ್ವಾಗತಿಸಿದರು. ದೀಕ್ಷಾ ಕಿಶೋರ್ ರೈ ವಂದಿಸಿದರು.