ಮಡಿಕೇರಿ, ಮಾ. ೨೧ : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವ ಜನ ಜಾಗೃತಿ ಹಕ್ಕೊತ್ತಾಯಗಳ ಮೂಲಕ ಜನಾಂಗೀಯ ತಾರತಮ್ಯ ನಿರ್ಮೂಲನೆಯ ಅಂತÀರಾಷ್ಟಿçÃಯ ದಿನವನ್ನು ಮಡಿಕೇರಿಯಲ್ಲಿ ಆಚರಿಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಎನ್‌ಸಿ ಪ್ರಮುಖರು ಸರ್ಕಾರದ ಗಮನ ಸೆಳೆದರು.
ಈ ಸಂದರ್ಭ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಭೂ-ರಾಜಕೀಯ ಸ್ವಾಯತ್ತತೆಗಾಗಿ ಸಂವಿಧಾನ ಪರಿಶೀಲನಾ ಆಯೋಗ ನೀಡಿರುವ ಶಿಫಾರಸ್ಸಿನಂತೆ ಕೊಡವರನ್ನು ಪರಿಗಣನೆ ಮಾಡಬೇಕು. ಕೊಡವ ಜನಾಂಗವನ್ನು ಸಂವಿಧಾನದ ೩೪೦ ಮತ್ತು ೩೪೨ ವಿಧಿಗಳಡಿಯಲ್ಲಿ ಎಸ್ಟಿ ಎಂದು ಘೋಷಿಸಬೇಕು. ಕೊಡವ ಜನಾಂಗದ ಗನ್ ಪರಂಪರೆಯನ್ನು ಸಿಖ್ಖರ ಕಿರ್ಪಾನ್‌ಗೆ ಸಮಾನವಾಗಿ ಸÀಂವಿಧಾನದ ೨೫ ಮತ್ತು ೨೬ ನೇ ವಿಧಿಗಳಯಲ್ಲಿ "ಸಂಸ್ಕಾರ" ಎಂದು ಪರಿಗಣಿಸಬೇಕು ಮತ್ತು ರಕ್ಷಿಸಬೇಕು.
ಕಾವೇರಿ ಇಲ್ಲದೆ ಕೊಡವ ಜನಾಂಗದ ಪ್ರಪಂಚವಿಲ್ಲ, ಕೊಡವ ಜನಾಂಗವಿಲ್ಲದೆ ಕಾವೇರಿ ಇಲ್ಲ. ಕೊಡವ-ಕಾವೇರಿ ಮತ್ತು ಕೊಡವಲ್ಯಾಂಡ್ ಸಮಾನಾರ್ಥಕ ಪದಗಳಾಗಿದ್ದು, ಯಾವುದಾದರು ಒಂದು ಭಾಗವನ್ನು ಕಳೆದುಕೊಂಡರೂ ಇಡೀ ಭಾಗ ಅಪೂರ್ಣವಾಗುತ್ತದೆ. ಆದ್ದರಿಂದ ಈ ಬಲವಾದ ಭಾವನಾತ್ಮಕ ಸಂಬAಧಗಳಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು ಎಂದು ನಾಚಪ್ಪ ಒತ್ತಾಯಿಸಿದರು.
ತಲಕಾವೇರಿ ದೇಗುಲಕ್ಕೆ ನಮ್ಮನ್ನು ಪ್ರವೇಶಿಸದಂತೆ ತಡೆಯುವುದು ಮತ್ತು ಕೊಡವ ಸಾಂಪ್ರದಾಯಿಕ ಉಡುಗೆಯನ್ನು ಧರಿಸದಂತೆ ಮಾಡುವುದು ಧಾರ್ಮಿಕ ಸ್ವಾತಂತ್ರö್ಯಕ್ಕೆ ಮಾಡುವ ಅಡ್ಡಿಯಾಗಿದೆ. ಅಲ್ಲದೆ ಸಂವಿಧಾನದ ೨೫ ನೇ ವಿಧಿಯ ಉಲ್ಲಂಘನೆಯಾಗಿದೆ. ಕೊಡವ- ಕೊಡವರು ಎಂಬ ಕೊಡವ ನಾಮಕರಣದ ಹಕ್ಕನ್ನು ಸಂಬAಧಪಟ್ಟ ಅಧಿಕಾರಿಗಳು ದಮನ ಮಾಡುತ್ತಿದ್ದಾರೆ, ಸರ್ಕಾರ ಆದೇಶವನ್ನು ಪಾಲಿಸಲು ಹಿಂದೇಟು ಹಾಕುತ್ತಿದೆ. ಇದು ಕಲ್ಯಾಣ ರಾಜ್ಯದ ಸಿದ್ಧಾಂತಕ್ಕೆ ವಿರುದ್ಧವಾದ ಕ್ರಮವಾಗಿದೆ. ಸರ್ಕಾರ ಯಾವುದೇ ನಿಯಮ ರೂಪಿಸು ವಾಗಲೂ ಕೊಡವ ಜನಾಂಗದ ಅಭಿಪ್ರಾಯ ಸಂಗ್ರಹಿಸುತ್ತಿಲ್ಲ, ಸಮಾಲೋಚಿಸುತ್ತಿಲ್ಲ ವೆಂದು ನಾಚಪ್ಪ ಆರೋಪಿಸಿದರು.
ದೇವಟ್‌ಪರಂಬ್‌ನಲ್ಲಿ ಕೊಡವ ನರಮೇಧದ ಸ್ಮಾರಕವನ್ನು ನಿರ್ಮಿಸುವ ನಮ್ಮ ಹಕ್ಕನ್ನು ಸರ್ಕಾರ ನಿರ್ಲಕ್ಷಿಸಿದೆ, ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ಹಿಂದೆ ನಡೆದ ಕೊಡವರ ಹತ್ಯೆಗಳ ಸ್ಮರಣೆಗಾಗಿ ಸ್ಮಾರಕವನ್ನು ಸ್ಥಾಪಿಸಲು ಕೂಡ ಉತ್ಸುಕವಾಗಿಲ್ಲ. ಕೊಡವರ ಭೂಮಿ ಮತ್ತು ಕೋವಿ ಹಕ್ಕನ್ನು ಕಸಿದುಕೊಳ್ಳುವ ಷಡ್ಯಂತ್ರ ನಡೆಯುತ್ತಿದ್ದರೂ ಅದನ್ನು ತಡೆಯುವ ಪ್ರಯತ್ನ ಮಾಡುತ್ತಿಲ್ಲ.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ ಅವರ ಮೂಲಕ ನಾಚಪ್ಪ ಅವರು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಸಿಎನ್‌ಸಿ ಪ್ರಮುಖರಾದ ಪಟ್ಟಮಾಡ ಲಲಿತಾ, ಪುಲ್ಲೇರ ಸ್ವಾತಿ ಕಾಳಪ್ಪ, ಕಲಿಯಂಡ ಮೀನಾ ಪ್ರಕಾಶ್, ಅಜ್ಜಿನಿಕಂಡ ಇನಿತಾ ಮಾಚಯ್ಯ, ಚೋಳಪಂಡ ಜ್ಯೋತಿ ನಾಣಯ್ಯ, ಲೆಫ್ಟಿನೆಂಟ್ ಕರ್ನಲ್ ಪಾರ್ವತಿ (ನಿವೃತ್ತ), ನಂದಿನೆರವAಡ ನಿಶಾ ಅಚ್ಚಯ್ಯ, ಕೂಪದೀರ ಪುಷ್ಪಾ ಮುತ್ತಪ್ಪ, ಕಲಿಯಂಡ ಪ್ರಕಾಶ್, ಅಜ್ಜಿಕುಟೀರ ಲೋಕೇಶ್, ಅರೆಯಡ ಗಿರೀಶ್, ಬಾಚರಣಿಯಂಡ ಚಿಪ್ಪಣ್ಣ, ಮಂದಪAಡ ಮನೋಜ್, ಅಳಮಂಡ ಜೈ, ಬೇಪಡಿಯಂಡ ದಿನು, ಮಣವಟ್ಟೀರ ಚಿಣ್ಣಪ್ಪ, ಬಲ್ಲಚಂಡ ಪೃಥ್ವಿ, ಕಿರಿಯಮಾಡ ಶರೀನ್, ಪುಟ್ಟಿಚಂಡ ದೇವಯ್ಯ, ಚೆಂಬAಡ ಜನತ್, ಅಜ್ಜಿನಿಕಂಡ ಸನ್ನಿ ಮಾಚಯ್ಯ, ಪುಲ್ಲೇರ ಕಾಳಪ್ಪ, ನಂದಿನೆರವAಡ ಅಯ್ಯಣ್ಣ, ನಂದಿನೆರವAಡ ವಿಜು, ಅಪ್ಪೆಂಗಡ ಮಾಲೆ, ಪುದಿಯೊಕ್ಕಡ ಕಾಶಿ, ಚೋಳಪಂಡ ನಾಣಯ್ಯ, ಮೇದುರ ಕಂಟಿ ನಾಣಿಯಪ್ಪ, ಕೊಟ್ಟಂಗಡ ರವಿ, ಕೊಟ್ಟಂಗಡ ಕುಶಾಲಪ್ಪ, ನಂದಿನೆರವAಡ ಅಪ್ಪಯ್ಯ, ಬಡುವಂಡ ವಿಜಯ ಪಾಲ್ಗೊಂಡು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.