ಸುಂಟಿಕೊಪ್ಪ, ಮಾ. ೧೯: ಸುಂಟಿಕೊಪ್ಪ ಸೆಸ್ಕ್ಂ ಇಲಾಖೆಗೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಲಕ್ಷಾಂತರ ರೂ. ಬಾಕಿ ಉಳಿಸಿಕೊಂಡಿದ್ದು ಕಚೇರಿಯ ವಿದ್ಯುತ್ ಕಡಿತಗೊಳಿಸಿರುವ ಪ್ರಸಂಗ ನಡೆದಿದೆ.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯು ಕಳೆದ ಫೆಬ್ರವರಿ ತಿಂಗಳವರೆಗೆ ಅಂದಾಜು ೪೨ ಲಕ್ಷ ರೂ.ವಿಗೂ ಮಿಕ್ಕಿ ವಿದ್ಯುತ್ ಬಿಲ್ ಅನ್ನು ಪಾವತಿಸಿದೆ ಉಳಿಸಿಕೊಂಡಿದ್ದು ಪ್ರಭಾರ ಕಾರ್ಯಪಾಲಕ ಇಂಜಿನಿಯರ್ ಅಶೋಕ್ ಆದೇಶದ ಮೇರೆ ಸೆಸ್ಕಾಂ ಅಭಿಯಂತರ ಜೈದೀಪ್, ಸಿಬ್ಬಂದಿಗಳಾದ ನಾಗರಾಜ್ ಶಿವಣ್ಣ ನಾಯಕ್ ಅವರುಗಳು ತೆರಳಿ ವಿದ್ಯುತ್ ಪಾವತಿಸದ ಪಂಚಾಯಿತಿ ಕಚೇರಿಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದರು.