ಮಡಿಕೇರಿ, ಮಾ. ೧೯: ಕನ್ನಡ ಚಲನಚಿತ್ರ ರಂಗದ ಪ್ರಖ್ಯಾತ ಹಾಸ್ಯನಟ, ಮಿಮಿಕ್ರಿ ದಯಾನಂದರವರು ಇತ್ತೀಚೆಗೆ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದರು. ಕೇರಳದ ಕಣ್ಣೂರಿನಿಂದ ಆಗಮಿಸಿದ ದಯಾನಂದರವರನ್ನು ಹೊದ್ದೂರು ಶ್ರೀ ಶಾಸ್ತ - ಈಶ್ವರ ದೇವಾಲಯಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು. ದೈವ ಸನ್ನಿಧಿಯಲ್ಲಿ ವಿಶೇಷ ಪೂಜಾ ಕಾರ್ಯ ನಡೆದ ಬಳಿಕ, ಮಿಮಿಕ್ರಿ ದಯಾನಂದರವರು ಚಲನಚಿತ್ರರಂಗದಲ್ಲಿನ ಅನುಭವ, ಬದುಕಿನ ಬಗ್ಗೆ ವಿವರಣೆ ನೀಡುತ್ತಾ, ನೆರೆದಿದ್ದ ಭಕ್ತರನ್ನು ನಗೆಗಡಲಲ್ಲಿ ತೇಲಾಡಿಸಿದರು.

ಈ ಸಂದರ್ಭ ದಯಾನಂದರವರನ್ನು ಶ್ರೀ ಶಾಸ್ತ - ಈಶ್ವರ ದೇವಾಲಯ ಸಮಿತಿ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ, ಪಟ್ಟೆದಾರರಾದ ಕೂಡಂಡ ಪೆಮ್ಮಯ್ಯ, ಚೆಟ್ಟಿಮಾಡ ಕುಟುಂಬ ಸಮಿತಿ ಉಪಾಧ್ಯಕ್ಷ ಚೆಟ್ಟಿಮಾಡ ಗೋಪಾಲ, ಅಮ್ಮಣಂಡ ಕುಟುಂಬದ ಪಟ್ಟೆದಾರ ಅಮ್ಮಣಂಡ ಸುಬ್ಬಯ್ಯ, ಚಿಂಡುಳಿರ ಕುಟುಂಬದ ಚಿಂಡುಳಿರ ಸುಬ್ರಮಣಿ, ನಿವೃತ್ತ ಮುಖ್ಯ ಶಿಕ್ಷಕ ಚೌರೀರ ಉದಯ, ವಾಂಚೀರ ರಾಜ ಅಪ್ಪಯ್ಯ ಹಾಗೂ ಜಾದುಗಾರ ವಿಕ್ರಂಶೆಟ್ಟಿ ಭಾಗವಹಿಸಿದ್ದರು. ಸಮಿತಿ ಕಾರ್ಯದರ್ಶಿ ಕೂಡಂಡ ಸಾಬು ಸುಬ್ರಮಣಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.