ಶ್ರೀಮಂಗಲ: ಮಹಿಳೆಯರ ಸಬಲೀಕರಣಕ್ಕೆ ಸಮಾಜದಲ್ಲಿ ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಮಹಿಳೆಯರು ಬಳಸಿಕೊಳ್ಳಬೇಕೆಂದು ಗೋಣಿಕೊಪ್ಪ ಲೋಪಾಮುದ್ರಾ ಮೆಡಿಕಲ್ ಸೆಂಟರ್ ‘ದೃಷ್ಟಿ’ ಕಣ್ಣಿನ ಆಸ್ಪತ್ರೆ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯ ಗಣೇಶ್ ನಾಣಯ್ಯ ಪ್ರತಿಪಾದಿಸಿದರು.

ಕಾನೂರು-ಕೋತೂರು ಮಹಿಳಾ ಮಂಡಲದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯ ಮಹಿಳೆಯರ ಸಾಧನೆ ಅವರು ಶ್ರಮಿಸಿದ ಹಾದಿ, ಮಹಿಳೆಯರ ಆರೋಗ್ಯದ ಮಹತ್ವ ಮತ್ತು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಬಗ್ಗೆ ವಿವರಿಸಿದರು.

ಮಹಿಳಾ ಮಂಡಲದ ಅಧ್ಯಕ್ಷೆ ಮಾಯಮ್ಮ ಬೋಪಯ್ಯ ಮಾತನಾಡಿ, ಮಹಿಳಾ ದಿನಾಚರಣೆಯ ಮಹತ್ವ ಮತ್ತು ಮಹಿಳಾ ಸಾಧಕಿಯರ ಬಗ್ಗೆ ಪರಿಚಯ ಮಾಡಿದರು.

ಮಹಿಳಾ ಮಂಡಲದ ಕಾರ್ಯದರ್ಶಿ ನವೀನಾ ಮುತ್ತಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು. ಗೋಣಿಕೊಪ್ಪ ಸೈಕ್ಲೋನ್ ಡ್ಯಾನ್ಸರ್ ತಂಡದಿAದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಿಳಾ ಮಂಡಲದ ಸದಸ್ಯರು ಪಾಲ್ಗೊಂಡಿದ್ದರು.ಪಾಲಿಬೆಟ್ಟ: ಪಾಲಿಬೆಟ್ಟದ ಚೆಷೈರ್ ಹೋಂನಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಕನ್ನಿಕಾ ಸ್ತಿçà ಶಕ್ತಿ ಸಂಘದ ಸಹಯೋಗದಲ್ಲಿ ನಡೆಯಿತು.

ಈ ಸಂದರ್ಭ ೨೦೨೧ ರ ಮಿಸೆಸ್ ವರ್ಲ್ಡ್ ಪ್ರಶಸ್ತಿ ವಿಜೇತೆ ಕೊಣಿಯಂಡ ಕಾವ್ಯ ಸಂಜು ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಡಾ. ಸೋನಿಯ ಮಂದಪ್ಪ ಪಾಲ್ಗೊಂಡಿದ್ದರು. ಸ್ತಿçà ಶಕ್ತಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಚೆಷೈರ್ ಹೋಂನ ಮುಖ್ಯ ಶಿಕ್ಷಕ ಶಿವರಾಜ್, ಮುಖ್ಯಸ್ಥೆ ಗೀತಾ ಚಂಗಪ್ಪ ಮತ್ತಿತರರು ಪಾಲ್ಗೊಂಡಿದ್ದರು.ವೀರಾಜಪೇಟೆ: ಸಮಾಜಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದು ವೀರಾಜಪೇಟೆಯ ಕೂರ್ಗ್ ವ್ಯಾಲಿ ಶಾಲೆಯ ಮುಖ್ಯಸ್ಥೆ ಸುಮಚಿತ್ರ ಬಾನು ಅಭಿಪ್ರಾಯಪಟ್ಟರು.

ವೀರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಮಹಿಳಾ ಘಟಕದ ಹಾಗೂ ಐಕ್ಯೂಎಸಿ ಘಟಕದ ವತಿಯಿಂದ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಮಹಿಳೆಯರು ಈ ಹಿಂದಿಗಿAತಲೂ ಪ್ರಸ್ತುತದಲ್ಲಿ ಸಮಾಜಕ್ಕೆ ಗಮನಾರ್ಹ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಭಾರತೀಯ ಸಂಸ್ಕöÈತಿಯ ಪ್ರತೀಕ ಮಹಿಳೆಯಾಗಿದ್ದಾರೆ. ಕುಟುಂಬ, ಸಮಾಜ, ರಾಷ್ಟç ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳೆಯರು ತಮ್ಮದೇ ಆದ ಪ್ರಭಾವವನ್ನು ಹೊಂದಿರುತ್ತಾರೆ ಎಂದರು.

ಪದವಿ ಕಾಲೇಜಿನ ಪ್ರಾಂಶುಪಾಲ ರೆ.ಫಾ. ರೋನಿ ರವಿಕುಮಾರ್ ಮಾತನಾಡಿ ಮಹಿಳೆಯರು ಶಿಕ್ಷಣವನ್ನು ಪಡೆದು ಮುಖ್ಯವಾಹಿನಿಗೆ ಬಂದರೆ ಮಾತ್ರ ಸವಾಲುಗಳನ್ನು ಎದುರಿಸಲು ಸಾಧ್ಯ. ಹಿಂದೆ ಮಹಿಳಾ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ಸಮಾಜ ಕೊಟ್ಟಿರಲಿಲ್ಲ. ಪ್ರಸ್ತುತ ಮಹಿಳೆಯು ಶಿಕ್ಷಣವನ್ನು ಪಡೆದು ರಾಷ್ಟçಕ್ಕೆ ತನ್ನದೇಯಾದ ಕೊಡುಗೆ ಕೊಡುತ್ತಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕÀ ರೆ. ಫಾ. ಮದಲೈ ಮುತ್ತು ಮಾತನಾಡಿದರು.

ವೇದಿಕೆಯಲ್ಲಿ ಕಾಲೇಜಿನ ಐಕ್ಯೂಎಸಿ ಘಟಕದ ಸಂಚಾಲಕಿ ತೃಪ್ತಿ ಬೋಪಣ್ಣ, ಮಹಿಳಾ ಘಟಕದ ಸಂಚಾಲಕಿ ಮುತ್ತಮ್ಮ ಹಾಗೂ ಸುನಿತಾ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಯುಕ್ತ ಉಪನ್ಯಾಸಕರಿಂದ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆದವು.