ಮಡಿಕೇರಿ, ಮಾ. ೧೯: ಕೊಡಗು ಯುವಸೇನೆಯ ಮತ್ತೂರು-ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧ್ಯಕ್ಷರಾಗಿ ಮತ್ತೂರು ಕಾಲೋನಿಯ ನಿವಾಸಿ ಸುನಿತಾ ಸುಬ್ರಮಣಿ ಪಿ.ಜಿ. ಹಾಗೂ ಉಪಾಧ್ಯಕ್ಷರಾಗಿ ಕೊರಕುಟ್ಟಿರ ರೀನಾ ವಿನೋದ್ ಅವರನ್ನು ನೇಮಕ ಮಾಡಲಾಗಿದೆ ಎಂದು ಯುವ ಸೇನೆಯ ಪ್ರಮುಖ ಕುಲದೀಪ್ ಪೂಣಚ್ಚ ಹಾಗೂ ಜಿಲ್ಲಾ ಸಂಚಾಲಕ ಮಾಚೆಟ್ಟಿರ ಸಚಿನ್ ಮಂದಣ್ಣ ಅವರು ತಿಳಿಸಿದ್ದಾರೆ.