ವೀರಾಜಪೇಟೆ, ಮಾ. ೧೯: ಶಿಕ್ಷಣ ಎಂದರೆ ಅದು ಬರಿ ಪ್ರಮಾಣ ಪತ್ರ ಪಡೆಯುವುದು ಅಥವಾ ಹೆಚ್ಚಿನ ಅಂಕ ಪಡೆಯುವುದು ಮಾತ್ರವಲ್ಲ. ಶಿಕ್ಷಣದೊಂದಿಗೆ ಸಂಸ್ಕೃತಿ ಮತ್ತು ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಾಣುವ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಣಾಧಿಕಾರಿ ಕಿಟ್ಟು ಕುಟ್ಟಪ್ಪ ಹೇಳಿದರು.

ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ ಮತ್ತು ವಿವಿಧ ಸಮಿತಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯೆ ಎಂದರೆ ಯಾರು ತಮ್ಮಿಂದ ಕಿತ್ತುಕೊಳ್ಳಲಾಗದ ವಸ್ತುವಾಗಿದೆ. ಇದರ ಮಹತ್ವ ಬದುಕಿನಲ್ಲಿ ಮುಂದೆ ಅರಿವಾಗುತ್ತದೆ. ಕಲಿಕೆಗೆ ಕೊನೆಯೇ ಇಲ್ಲ ಆದರಿಂದ ಓದುವ ಹವ್ಯಾಸ ಬೆಳೆಸಿಕೊಂಡರೆ ಮುಂದೆ ಅನುಕೂಲ ಖಂಡಿತ ಇದೆ ಎಂದು ಹೇಳಿದರು.

ಸಾಹಿತಿಗಳು ಹಾಗೂ ನಿವೃತ ಪ್ರಾದ್ಯಾಪಕ ಕೊಳ್ಳೆಗಾಲದ ಶಂಕನಪುರ ಮಹಾದೇವ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕೊಡಗಿನಲ್ಲಿ ಹಲವಾರು ಜನಾಂಗದವರು ಇದ್ದಾರೆ, ಇಲ್ಲಿ ಭಾಷೆ ಸಂಸ್ಕೃತಿ ಬಿನ್ನವಾಗಿದ್ದರು ಪ್ರಜ್ಞಾವಂತ ನಾಗರಿಕತೆಯನ್ನು ಕಾಣಬಹುದು. ಅಲ್ಲದೆ ಈ ಜಿಲ್ಲೆಯಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣಬಹುದಾಗಿದೆ. ಕೊಡಗು ಜಿಲ್ಲೆ ದೇಶಕ್ಕೆ ರಾಷ್ಟಿçÃಯ ಅಂರ‍್ರಾಷ್ಟಿçÃಯ ಕ್ರೀಡಾಪಟುಗಳನ್ನು ನೀಡಿದೆ. ದಂಡ ನಾಯಕರನ್ನು ವೀರ ಯೋಧರನ್ನು ದೇಶಕ್ಕೆ ನೀಡಿದ್ದು, ಈ ಮಹನೀಯರು ಮಾದರಿಯಾಗಲಿ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಅರ್ಥಶಾಸ್ತç ವಿಭಾಗದ ಮುಖ್ಯಸ್ಥ ಶಿವಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಸಾಂಸ್ಕೃತಿಕ ಸಮಿತಿ ಸದಸ್ಯರಾದ ಶೃತಿ, ಪಾರ್ವತಿ ಮತ್ತು ಕ್ರೀಡಾ ನಿರ್ದೇಶಕಿ ರಾಖಿ ಪೂವಣ್ಣ ಮತ್ತು ವಾಣಿಜ್ಯ ಶಾಸ್ತç ವಿಭಾಗದ ಮುಖ್ಯಸ್ಥ ಹೆಚ್.ಎಸ್. ವೇಣುಗೋಪಾಲ್ ಉಪಸ್ಥಿತರಿದ್ದರು.

ಉಪನ್ಯಾಸಕಿ ಸರಸ್ವತಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು.