ಮುಳ್ಳೂರು, ಮಾ. ೧೯: ಜವಾಹರಲಾಲ್ ನೆಹರು ತಾರಾಲಯ ಬೆಂಗಳೂರು ಮತ್ತು ರೋಟರಿ ಮಲ್ಲೇಶ್ವರ ಆಲೂರುಸಿದ್ದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಅಂಕನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಖಗೋಳ ವೀಕ್ಷಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಗೆ ಖಗೋಳ ವಿಜ್ಞಾನದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಯಿತು. ಎರಡು ಖಗೋಳ ದೂರದರ್ಶಕಗಳ ಮೂಲಕ ಆಕಾಶ ಕಾಯಗಳ ವೀಕ್ಷಣೆ ಮೂಡಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಸೌರಮಂಡಲದಲ್ಲಿರುವ ಗ್ರಹಗಳಿಗೆ ಮನುಷ್ಯ ಹೋಗುವಾಗ ನಮ್ಮ ದೇಹದ ತೂಕದಲ್ಲಿ ಆಗುವ ಬದಲಾವಣೆಯನ್ನು ಯಂತ್ರದ ಮೂಲಕ ತೋರಿಸುವ ಪ್ರಾತ್ಯಕ್ಷಿಕೆತೆಯನ್ನು ನೀಡಲಾಯಿತು. ಇದೆ ಸಂದರ್ಭದಲ್ಲಿ ಸದರಿ ಶಾಲೆಯಲ್ಲಿ ಜರುಗಿದ ಸಹ ಪಠ್ಯೇತರ ಚಟುವಟಿಕೆಗಳ ಹೊತ್ತಿಗೆ (ವ್ಯುತ್ಪತ್ತಿ)ಯನ್ನು ಬಿಡುಗಡೆಗೊಳಿಸಲಾಯಿತು. ಸಹ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ವಿಜೇತಗೊಂಡ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಖಗೋಳ ವೀಕ್ಷಣಾ ಕಾರ್ಯಕ್ರಮದಲ್ಲಿ ಬೆಂಗಳೂರು ಜವಾಹರಲಾಲ್ ನೆಹರು ತಾರಾಲಯದ ಹಿರಿಯ ವಿಜ್ಞಾನಿ ಡಾ.ಆನಂದ್ ಖಗೋಳ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಬೆಂಗಳೂರಿನ ಖಗೋಳ ವಿಜ್ಞಾನ ತಜ್ಞರಾದ ರವೀಂದ್ರ ಆರಾಧ್ಯ, ಹವ್ಯಾಸ ಖಗೋಳ ವೀಕ್ಷಕರ ಸಂಘದ ಬಿ.ಪುಷ್ಪ ನೇತೃತ್ವದ ತಂಡ ಖಗೋಳ ವೀಕ್ಷಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷ ಎಂ.ಇ.ವೆAಕಟೇಶ್, ಕಾರ್ಯದರ್ಶಿ ಲೋಕೇಶ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಜಿ.ಎಂ. ಹೇಮಂತ್, ಎಸ್‌ಡಿಎಂಸಿ ಅಧ್ಯಕ್ಷೆ ಗಾಯತ್ರಿ, ಶಿಕ್ಷಕರಾದ ರಮೇಶ್ ಕುರಿ, ಶಿವಕುಮಾರ್, ಕೆ.ವಿ.ಪ್ರವೀಣ್ ಕಾಮತ್ ಮುಂತಾದವರಿದ್ದರು.