ಮಡಿಕೇರಿ, ಮಾ. ೧೯: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಫ್ರೂಟ್÷ಆ್ಯಪ್‌ನಲ್ಲಿ ಸೌಹಾರ್ದ ಸಹಕಾರಿಗಳನ್ನು ಕೈಬಿಟ್ಟಿರುವುದರಿಂದ ರೈತರು ಸೌಹಾರ್ದ ಸಹಕಾರಿ ಸಂಘಗಳಲ್ಲಿ ಸಾಲ ಪಡೆದುಕೊಳ್ಳಲು ಆಗುತ್ತಿಲ್ಲ. ಫ್ರೂಟ್ ಆ್ಯಪ್‌ನಲ್ಲಿ ಸೌಹಾರ್ದ ಸಹಕಾರಿಗಳನ್ನು ಸೇರ್ಪಡೆಗೊಳಿಸುವವರೆಗೆ ಹಿಂದಿನ ಕ್ರಮವನ್ನು ಅನುಸರಿಸುವುದು ಉತ್ತಮ ಎಂದು ಕೊಡವ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ನೆಲ್ಲಮಕ್ಕಡ ಮುತ್ತಣ್ಣ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರವು ರ‍್ಯೆತರಿಗೆ ಅನುಕೂಲವಾಗುವಂತೆ ಫ್ರೂಟ್ ಆ್ಯಪ್ ಎಂಬ ತಂತ್ರಜ್ಞಾನವನ್ನು ಅಳವಡಿಸಿರುವುದು ಸ್ವಾಗತಾರ್ಹ. ಕೊಡಗಿನಲ್ಲಿರುವ ಬಹುತೇಕ ರೈತರು ಆರ್‌ಟಿಸಿ ಹೊಂದಿರುವವರಾಗಿ ರುವುದರಿಂದ ಸಹಕಾರಿ ಸಂಸ್ಥೆಯಿAದ ಸಾಲ ವಿತರಣೆ ಮಾಡುವ ಸಂದರ್ಭದಲ್ಲಿ ರೈತರಲ್ಲಿರುವ ಆರ್‌ಟಿಸಿಯನ್ನು ಉಪ ನೋಂದಣಿ ಕಚೇರಿಯಲ್ಲಿ ನೋಂದಾವಣಿ ಮಾಡಿದ ನಂತರವೇ ಸಹಕಾರಿಗಳಿಗೆ ಸಾಲ ನೀಡಲಾಗುವುದು. ಆದರೆ ಸರ್ಕಾರ ಸೌಹಾರ್ದ ಸಹಕಾರಿಗಳನ್ನು ಇದರಿಂದ ಕೈ ಬಿಟ್ಟಿರುವುದರಿಂದ ನೋಂದಣಿ ಸಾಧ್ಯವಾಗುತ್ತಿಲ್ಲ. ಈಗಾಗಲೇ ಕೊರೊನಾದಿಂದ ತತ್ತರಿಸಿ ಹೋಗಿರುವ ರೈತರು ಬಹಳಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಈ ವಿಚಾರದಲ್ಲಿ ಸಂಯುಕ್ತ ಸಹಕಾರಿಗೆ ದೂರು ಸಲ್ಲಿಸಿದರು ಪ್ರಯೋಜವಾಗಲಿಲ್ಲ ಎಂದು ಹೇಳಿದರು.

ಉಪಾಧ್ಯಕ್ಷ ಚೇದಂಡ ವಸಂತ್ ಕುಮಾರ್ ಮಾತನಾಡಿ ಕೊಡಗು ಚಿಕ್ಕಮಂಗಳೂರು, ಹಾಸನ ಜಿಲ್ಲೆಗಳಲ್ಲಿನ ರೈತರು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಕಾಲಕ್ಕೆ ರೈತರಿಗೆ ಸಾಲ ಸೌಲಭ್ಯ ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ, ಜನಪ್ರತಿನಿಧಿಗಳು ಹಾಗೂ ಸಂಬAಧ ಪಟ್ಟ ಇಲಾಖೆಗಳು ಮುತುವರ್ಜಿ ವಹಿಸಿ ಫ್ರೂಟ್ ಆ್ಯಪ್‌ನಲ್ಲಿ ಸೌಹಾರ್ದ ಸಹಕಾರಿ ಸಂಘಗಳನ್ನು ಸೇರ್ಪಡೆಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕಾಗಿ ಕೋರಿದರು.

ಗೋಷ್ಠಿಯಲ್ಲಿ ನಿರ್ದೇಶಕರಾದ ಕಾಂಡAಡ ಚರ್ಮಣ, ವಾಟೇರಿರ ಶಂಕರಿ ಪೂವಯ್ಯ, ನೆಲ್ಲಮಕ್ಕಡ ಬೆಳ್ಯಪ್ಪ, ನೆಲ್ಲಚಂಡ ಭೀಮಯ್ಯ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.