ಗೋಣಿಕೊಪ್ಪ ವರದಿ, ಮಾ. ೧೯: ವಿಶ್ವ ಮಟ್ಟದ ಫೋಟೊಗ್ರಫಿಯಲ್ಲಿ ಹೊಸ್ಕೇರಿ ಗ್ರಾಮದ ಬಲ್ಲಚಂಡ ದರ್ಶನ್ ಗಣಪತಿಗೆ ಪ್ರತಿಷ್ಠಿತ ಸೋನಿ ವರ್ಲ್ಡ್ ವಿಶೇಷ ಪ್ರಶಸ್ತಿ ಲಭಿಸಿದೆ.

ಸೋನಿ ವರ್ಲ್ಡ್ ‘ಪ್ರಯಾಣ’ ಎಂಬ ಹೆಸರಿನಲ್ಲಿ ಆಯೋಜಿಸಿದ್ದ ಫೋಟೊಗ್ರಫಿ ಸ್ಪರ್ಧೆಯಲ್ಲಿ ಇವರು ವಾರಣಾಸಿಯಲ್ಲಿ ನಡೆದಿದ್ದ ಬಲೂನ್ ಮೇಳದ ಚಿತ್ರ ವಿಶೇಷ ಬಹುಮಾನ ಪಡೆದುಕೊಂಡಿದೆ. ಚಿತ್ರವನ್ನು ಲಂಡನ್ ಫೋಟೊ ಮೇಳದಲ್ಲಿ ಹಾಕಲಾಗಿದೆ.