ಜ್ಯೋತಿಷಿ ಪಿ. ಟಿ. ನಾರಾಯಣ ವಾರಿಯರ್ ತಮ್ಮ ಅಷ್ಟಮಂಗಲ ಪ್ರಶ್ನೆ ಮುಂದುವರಿಸಿ ತಿಳಿಸಿದ ಅಂಶಗಳು ಈ ಕೆಳಗಿನಂತಿದೆ.
‘‘ಸಮಸ್ತ ಗುಣ-ದೋಷ-ಪರಿಹಾರಗಳ ವಿವರ’’
ಸರ್ವೇಶ್ವರಕಾರನಾದ ಗುರುವಿನ ಅನಿಷ್ಪರಾಶಿ ಸ್ಥಿತಿ, ದೀಪದಲ್ಲಿ ಮಿಶ್ರಸ್ಥಿತಿ ಹಾಗೂ ಈಶಾನ್ಯ ಜ್ವಾಲೆಗೆ ಕೇಡು, ಪೃಥ್ವಿವ್ಯಾದಿ ಮಹಾಸೂತ್ರಗಳಲ್ಲಿ ಮೃತ್ಯುಸ್ಫುಟಗಳಲ್ಲಿ ಮೃತ್ಯು ಅಧಿಕವಾಗಿದ್ದು, ಇತರ ಫಲಗಳಿಂದಲೂ ಚಿಂತಿಸಿದಾಗ, ಅವರ್ಣನೀಯವೂ, ಅನಿರ್ವಚನೀಯವೂ ಆದ ಸರ್ವೇಶ್ವರಾನುಗ್ರಹವು ಈ ಕ್ಷೇತ್ರವಾಸಿಗಳಿಗೂ, ಭಕ್ತರಿಗೂ ಸಾರ್ವಜನಿಕರಿಗೂ ಇಲ್ಲದಿರುವುದು ಕಂಡುಬರುತ್ತದೆ.
ಅನಶ್ವರ ಚೈತನ್ಯಪೂರ್ಣ ತೀರ್ಥ ಪಾವಿತ್ರö್ಯವನ್ನು ಹೊಂದಿ ಶ್ರೀ ಗಂಗಾದಿ ಸಮಸ್ತ ಪುಣ್ಯ ತೀರ್ಥ ಸ್ವರೂಪಳಾದ ಶ್ರೀಕಾವೇರಿಯ ಸಾನಿಧ್ಯವು ಸ್ವಯಂಭೂತವಾಗಿದ್ದು, ಉತ್ಪತ್ತಿಯಿಂದಲೇ ಸ್ವಯಂ ಪರಿಶುದ್ಧ ಮಹಿಮಾಹಿತಿಶಯವನ್ನು ಹೊಂದಿರುವುದು ತಿಳಿದು ಬರುತ್ತದೆ. ಆದರೆ ಇಂತಹ ಅಲೌಕಿಕ ಶಕ್ತಿ ಪ್ರಭೆಯು ಪ್ರಸರಣವಾಗಿ ಭಕÀ್ತರಾದ ನಮಗೆ ಪ್ರಾಪ್ತವಾಗಬೇಕಾದ ಮಾಧ್ಯಮವೇ ಇದೀಗ ಸಂಪೂರ್ಣ ಮಾಲಿನ್ಯಗೊಂಡಿರು ವುದು ಸುಸ್ಪಷ್ಟವಾಗಿದೆ. ಇದರಿಂದಾಗಿ ಭೂಲೋಕದಲ್ಲಿ ಸುರಲೋಕ ಪ್ರತೀತಿಯ, ಋಷೀಶ್ವರ ತಪೋಮಂಡಲವಾದ ಶ್ರೀ ತಲಕಾವೇರಿ ಸಮುಚ್ಚಯದ ಪೂರ್ಣಾನುಗ್ರಹ ಪ್ರಯೋಜನವಿಂದು ಭಕ್ತಕೋಟಿಗೆ ಆಗುತ್ತಿಲ್ಲವಾಗಿರುವದು ವೇದ್ಯವಾಗುತ್ತದೆ.
ಇಂದು ರಾಜಾಧಿಕಾರದ ಭ್ರಂಶ, ಉಪಾಸನಾ ವೈಕಲ್ಯಗಳು, ನಿತ್ಯಾನುಷ್ಠಾನಗಳಲ್ಲಿ ಲೋಪ, ಉತ್ಸವ ಮಹೋತ್ಸವ, ಅನ್ನದಾನಗಳಲ್ಲಿ, ಲೋಪದೋಷ, ಕ್ಷೇತ್ರದ ಆಡಳಿತದಲ್ಲಿ ಪರಸ್ಪರ ಕಲಹ, ದೇವ ದ್ರವ್ಯ-ಭೂಮಿಗಳ ನಾಶ, ಸಾನ್ನಿಧ್ಯ ವೃದ್ಧಿಕರವಾದ ವೇದ-ಮಂತ್ರಾದಿ ಜಪದಲ್ಲಿ ಲೋಪ ಮತ್ತು ಕೇವಲ ಶೂನ್ಯತ್ವ, ಅಶುದ್ಧಿ ಜನರ ಪ್ರವೇಶ, ಕ್ಷೇತ್ರ ಪರಿಸರದಲ್ಲಿ, ಅಕೃತ್ಯಗಳು ಹೆಚ್ಚು ಹೆಚ್ಚಾಗಿ ಸಂಭವಿಸುತ್ತಿರುವುದೂ, ಪ್ರಸಾದ, ಉಪಗೃಹಗಳ ನಿರ್ಮಾಣದಲ್ಲಿ ಅಶಾಸ್ತಿçÃಯತೆಯೂ, ತೀರ್ಥಸ್ನಾನದಲ್ಲಿ ಅವ್ಯವಸ್ಥೆಯೂ, ಇತ್ಯಾದಿಗಳು ನಿತ್ಯನಿರಂತರವಾಗಿ ಬಾಧಿಸುತ್ತಿದ್ದು, ದೇವ ಸಾನ್ನಿಧ್ಯಕ್ಕೆ ಅತ್ಯಂತ ಕಳವಳಕಾರಿಯಾದ ಕ್ಷೀಣಾವಸ್ಥೆಯು ಪ್ರಾಪ್ತಿಯಾಗಿರುತ್ತದೆ.
ಪೂಜ್ಯ ಪೂಜಾಕ್ರಮ ನಿಯಮಗಳಲ್ಲಿ ವ್ಯತ್ಯಾಸ ಬಂದಿರುತ್ತದೆ.
ಈ ಕ್ಷೇತ್ರದ ಆದಿಮಗುರು, ಪ್ರತಿಷ್ಠಾ ಕರ್ತೃ, ಆಚಾರ್ಯ, ನಿರ್ಮಾತೃ ಗಳಾದ ಶ್ರೀ ಅಗಸ್ತö್ಯ ಮಹಾಮುನಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಅಗಸ್ತö್ಯ ಪೀಠ, ಶ್ರೀ ಅಗಸ್ತೆö್ಯÃಶ್ವರ ಸಾನ್ನಿಧ್ಯಗಳಿಗೆ ಗೌಣಸ್ಥಾನವನ್ನು ಕೊಟ್ಟು ಶ್ರೀ ಅಗಸ್ತೆö್ಯÃಯರಿಗೆ ಪ್ರಥಮ ಪ್ರಾಶಸ್ತö್ಯ ಕೊಡಬೇಕೆಂಬ ಪ್ರಧಾನ ವಿಚಾರವನ್ನೇ ಮರೆತು ಬಿಟ್ಟಿರುವ ಘೋರ ದುರಂತ, ತಪ್ಪು ಎಲ್ಲರಿಂದಲೂ ಆಗಿ ಹೋಗಿರು ವುದು ಕಂಡುಬರುತ್ತಿದೆ.
ಹೀಗಾಗಿ ಶ್ರೀ ತಲಕಾವೇರಿ ಕ್ಷೇತ್ರವು ಕೇವಲ ಶ್ರೀ ಕಾವೇರಿಯ ಉಗಮ ಸ್ಥಾನವಾಗಿರದೇ ಮಹಾಪುರುಷರ, ಸಪ್ತರ್ಷಿಗಳ, ತಪೋಬಲದ ಅಕ್ಷಯ ನಿಧಿಯೂ ಆಗಿದ್ದು, ಮನುಕುಲದ, ಉದ್ಧಾರಕ್ಕೆ ಪುಣ್ಯಪುಷ್ಕರಿಣಿಯಾಗಿ, ದಕ್ಷಿಣದ ಗಂಗೆಯಾಗಿ, ಶ್ರೀ ಕಾವೇರಿಯ ರೂಪದಿಂದ ಭೂಗರ್ಭದೊಳಗೆ ನಿಕ್ಷೇಪವಾಗಿರಿಸಿದ ಮಹರ್ಷಿಗಳ ತಪೋನಿಧಿಯೇ ತೀರ್ಥರೂಪದಲ್ಲಿ, ಇಳೆಯಿಂದ, ಹೊರಹೊಮ್ಮಿ, ಸಮಸ್ತ ಮಾನವ ಕೋಟಿಯ ಪಾಪರಾಶಿಯನ್ನು ತೊಳೆಯುವ ನಿರಂತರ ಪೂರ್ವ ಪ್ರಕ್ರಿಯೆಯಾಗಿರುತ್ತದೆ ಎಂಬುದನ್ನು ನಾವೆಲ್ಲರೂ ತಿಳಿಯಬೇಕಾಗಿರುತ್ತದೆ ಎಂದು ಕಂಡು ಬಂದಿರುತ್ತದೆ. ಈ ಕ್ಷೇತ್ರದ ಸ್ಥಾಪಕರಾದ ಮಹಾ ಮಹರ್ಷಿ ಆದಿಮಗುರು ಶ್ರೀ ಅಗಸ್ತö್ಯರನ್ನು ಉಪೇಕ್ಷೆ ಮಾಡಿದ್ದರಿಂದಲೇ ಇಲ್ಲಿ ಯಾವ ಕಾರ್ಯಗಳೂ ಸುಗಮವಾಗಿ, ಶಾಸ್ತಿçÃಯವಾಗಿ, ದೇವರಿಗೆ ಹಿತವಾಗಿ, ಜರುಗದೇ ಒಟ್ಟಾರೆಯಾಗಿ ನೆರವೇರುವುದು ಕಂಡುಬರುತ್ತದೆ.
ಆಶ್ರಮ ರೀತಿಯ ಋಷಿವಾಸಕ್ಕೆ ಯೋಗ್ಯವಾದ ರೀತಿಯ ಸಾನ್ನಿಧ್ಯ ಸಮುಚ್ಚಯವಾದ ಈ ಶ್ರೀ ತಲಕಾವೇರಿಯಲ್ಲಿ ಕ್ರಮೇಣ ರಾಜಮನೆತನದವರ ಆಡಳಿತ ಪ್ರಾಪ್ತವಾದ ಮೇಲೆ ಜನಜೀವನವು ಮಾರ್ಪಾಡು ಆಗುತ್ತಾ ಬಂದ ಹಾಗೆ, ಆಗಮೋಕ್ತವಾದ, ದೇವಮಂದಿರ, ಪೂಜಾವ್ಯವಸ್ಥೆಗಳು, ಏರ್ಪಾಡಾಗಿರುವುದೆಂದು ತಿಳಿದು ಬರುತ್ತದೆ.
ಶ್ರೀ ತಲಕಾವೇರಿ ಕ್ಷೇತ್ರವು ಮಾನವ ಜನ್ಮದ ಮೂರು ಋಣಗಳನ್ನು ಕಳೆಯುವ ಮಹಾಪಾವನವಾದ ಅತ್ಯಂತ ವಿಶಿಷ್ಟವೂ, ಸಂಕೀರ್ಣವೂ ಆದ ಮಹಾಕ್ಷೇತ್ರವಾಗಿರುತ್ತದೆಯೆಂಬುದು ನಿಸ್ಸಂದೇಹವಾಗಿರುತ್ತದೆ. ಅದು ಹೇಗೆಂದರೆ, ಈ ಕ್ಷೇತ್ರದಲ್ಲಿ ದೇವತಾ ಸಾನ್ನಿಧ್ಯಗಳಿಗೆ ಸಲ್ಲಿಸುವ ದೇವಪೂಜೆ ಯಿಂದ ದೇವಋಣವನ್ನೂ ಋಷೀಶ್ವರ ಸಾನ್ನಿಧ್ಯಗಳಿಗೆ ಸಲ್ಲಿಸುವ ಋಷಿ ಪೂಜೆಯಿಂದ ಋಷಿಋಣವನ್ನೂ ಪಿತೃಗಳಿಗೆ ಸಲ್ಲಿಸುವ ಪಿಂಡೋದಕ ಕ್ರಿಯೆಗಳಿಂದ ಪಿತೃಋಣವನ್ನೂ, ತೀರಿಸಲು ಅವಕಾಶವಿರುವ, ಅಪೂರ್ವ ತ್ರಿವೇಣಿ ಸಂಗಮ ಕ್ಷೇತ್ರವಾದ ಈ ತಲಕಾವೇರಿ ಕ್ಷೇತ್ರವು ಕೇವಲ ದೇವಾಲಯ, ಕಟ್ಟಡಗಳ ಸಮೂಹವಾಗಿರದೇ, ಬ್ರಹ್ಮಗಿರಿ, ಋಷ್ಮಾಶ್ರಮ, ಕಾವೇರಿಯ ಉಗಮ -ಇತ್ಯಾದಿ ಪರಿಸರಗಳನ್ನೊಳಗೊಂಡ ಒಟ್ಟು ಪರಿಧಿಯ ಸಮುಚ್ಚಯ ಸಂಕೀರ್ಣಗಳನ್ನೊಳಗೊAಡ ಋಣತ್ರಯ ನಿಮೋಚಕವಾದ ಮಹಾ ತೀರ್ಥಕ್ಷೇತ್ರವಾಗಿದೆಯೆಂದು ತಿಳಿದುಬರುತ್ತಿದೆ.
ಇಲ್ಲಿಯ ಆಚಾರ ವಿಚಾರಗಳ ಬಗ್ಗೆ ಇರುವ ಸಂವಿಧಾನ ಕಟ್ಟು ಪಾಡುಗಳ ಅನುಸರಣೆಯು ಇಲ್ಲಿಯ ಕ್ಷೇತ್ರದ ತಂತ್ರಿಗಳಾದ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನವನ್ನು ಪಡೆದುಕೊಂಡು ಆಗುತ್ತಿಲ್ಲವೆಂಬುದು ಮುಖ್ಯ ವಿಚಾರವಾಗಿದೆ. ಅನೇಕ ಬಾರಿ ಇಲ್ಲಿಯ ವಿಶಿಷ್ಟ ಉತ್ಸವವಾದ ತುಲಾ ಸಂಕ್ರಮಣ ಅಥವಾ ಕಾವೇರಿ ಸಂಕ್ರಮಣವು ತಪ್ಪು ದಿನಗಳಲ್ಲಿ ಆಗಿರುತ್ತದೆ. ಸಾರ್ವಜನಿಕ ಭಕ್ತ ಮಹಾಜನಗಳಿಗೆ ಸಂಕ್ರಾAತಿಯ ಬಗ್ಗೆ ಸರಿಯಾದ ಪೂರ್ವ ಸೂಚನೆ ನೀಡದೇ ಸಂಕ್ರಮಣದ ದಿವಸವು ಬೇರೆ ಬೇರೆ ಪಂಚಾAಗದಲ್ಲಿ ವ್ಯತ್ಯಾಸ ಬರುವ ಕಾರಣದಿಂದಲೂ ಈ ರೀತಿ ಆಗಿರುವುದೂ ಕಂಡು ಬಂದಿದೆ. ಉತ್ಸವದ ಈ ವೈಪರೀತ್ಯದಿಂದ ಭಕ್ತ-ಭಗವಂತನ ಸಮಾಗಮವು ಯುಕ್ತರೀತಿಯಲ್ಲಿ ಆಗದೇ ಇದರಿಂದ ಶ್ರೀ ಅಗಸ್ತö್ಯ ಮಹರ್ಷಿಗಳಿಗೂ, ಶ್ರೀ ಕಾವೇರಿ ಮಾತೆಗೂ ಅತೀವ ಅತೃಪ್ತಿಯುಂಟಾಗಿದ್ದು ದೇವ ಸಾನ್ನಿಧ್ಯ ಕ್ಷಯವೂ ಪ್ರಾಪ್ತವಾಗಿರುತ್ತದೆ ಎಂದು ತಿಳಿದು ಬಂದಿದೆ. ಇದಕ್ಕಾಗಿ ಬ್ರಹ್ಮಶ್ರೀ ವೇದ ಮೂರ್ತಿಗಳಾದ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ, ದೇವಾಲಯ ಸಂವಿಧಾನವನ್ನು ರೂಪಿಸುವಾಗ, ಶ್ರೀ ಅಗಸ್ತö್ಯ ಮಹರ್ಷಿಗಳು ಹಾಗೂ ಶ್ರೀ ಕಾವೇರಿ ಮಾತೆಯ ಹಿತವನ್ನು ಗಮನದಲ್ಲಿಟ್ಟು ಕೊಂಡು ತುಲಾಸಂಕ್ರಮಣ ಮತ್ತು ಇತರ ಪರ್ವ ದಿನಗಳ ನಿರ್ಣಯವನ್ನು, ಶಾಸ್ತಿçÃಯವಾದ ಪ್ರತ್ಯಕ್ಷ ಸಿದ್ಧ, ವೈಜ್ಞಾನಿಕ ಗಣಿತದಿಂದ ತಯಾರಾದ ಪಂಚಾAಗದಿAದಲೇ ಅನುಸರಣೆ ಮಾಡಬೇಕಾದ್ದು ಇಲ್ಲಿಯ ದೇವರಿಗೆ ಹಿತವಾಗಿರುತ್ತದೆ ಎಂಬುದು ಮುಖ್ಯ ವಿಚಾರವಾಗಿದೆ ಎಂದು ತಿಳಿದು ಬರುತ್ತದೆ. ಸ್ಕಾಂದ ಪುರಾಣದ ಕಾವೇರಿ ಮಹಾತ್ಮೆಯಲ್ಲಿ ತುಲಾರಾಶಿಗೆ ಸೂರ್ಯನು ಪ್ರವೇಶಿಸುವಾಗ ಸಮಸ್ತ ತೀರ್ಥಗಳೂ, ಕಾವೇರಿಯಲ್ಲಿ ಸನ್ನಿಹಿತವಾಗಿರುತ್ತದೆ ಎಂಬುದಾಗಿ ಸ್ಪಷ್ಟವಿದೆ.
ಈ ಬಗ್ಗೆ ಪರ-ವಿರೋಧ ಪಕ್ಷವಹಿಸಿ ಪ್ರಚಾರ-ಅಪಪ್ರಚಾರಗಳಲ್ಲಿ ತೊಡಗಿ, ಸಂಕ್ರಮಣದ ಬಗ್ಗೆ ಇಲ್ಲ ಸಲ್ಲದ ವಾದ-ಪ್ರತಿವಾದಗಳಿಂದ, ಇದನ್ನು ಒಂದು ಯುದ್ಧಭೂಮಿಯನ್ನಾಗಿ ಮಾರ್ಪಡಿಸಿ, ಭಕ್ತ ಜನರು ಭಯಭೀತರಾಗಿ ಸ್ವರಕ್ಷಣೆಗಾಗಿ ಪರದಾಡುವಂತೆ, ಇಲ್ಲಿಗೆ ಆಗಮಿಸಲೂ ಹೆದರಿಕೊಳ್ಳುವಂತೆ, ಸಂಘರ್ಷಗಳು ಪ್ರತಿ ಬಾರಿಯೂ ಆಗುತ್ತಿರುವುದರಿಂದ, ಪ್ರತಿ ಉತ್ಸವವೂ ಅಪೂರ್ಣವಾಗಿ, ವೃಥಾ ಧ್ವಂಸ ಪ್ರಚೋದಕವಾದ ಭಾವನೆಯಿಂದಲೇ ಲೋಪ-ದೋಷಗಳಿಂದ ಯುಕ್ತವಾಗಿ ಜರುಗುವುದು ಇಲ್ಲಿಯ ಶ್ರೀ ಅಗಸ್ತö್ಯರಿಗೂ, ಶ್ರೀ ಕಾವೇರಿ ಮಾತೆಗೂ, ಇಷ್ಟವಾಗಿರುವುದಿಲ್ಲ, ಮಾತ್ರವಲ್ಲ ದೇವರಿಗೆ ಇದರಿಂದಾಗಿ ತುಂಬಾ ನೋವುಂಟಾಗಿರುವುದೂ ಕಂಡು ಬರುತ್ತಿದೆ. ಇದು ಶುಭಪ್ರದವಲ್ಲವಾಗಿದೆ. ಆದ್ದರಿಂದ ತುಲಾ ಸಂಕ್ರಮಣವೇ ಮೊದಲಾದ ವಿಶೇಷ ಉತ್ಸವಾದಿಗಳ ಬಗ್ಗೆ ಬಹಿರಂಗ ಕದನಗಳು ಇಲ್ಲಿಯ ದೇವರಿಗೆ ಇಷ್ಟವೇ ಅಲ್ಲವೆನ್ನುವುದು ತಿಳಿದು ಬರುತ್ತದೆ. ಈ ವಿಷಯದ ಬಗ್ಗೆ ಗಮನ ಹರಿಸತಕ್ಕದ್ದು ಶ್ರೀ ದೇವರ ಪ್ರೀತಿಗೆ ಅತ್ಯಗತ್ಯವಾಗಿದೆ. ಇಲ್ಲಿಯ ಶ್ರೀ ಅಶ್ವತ್ಥ ವೃಕ್ಷದಲ್ಲಿ ಶ್ರೀ ಅಗಸ್ತö್ಯರ ಸಾನ್ನಿಧ್ಯವಿರುತ್ತದೆ. ಮುಂಚೆ ಇದ್ದ ಪುರಾತನ ವೃಕ್ಷನಾಶವಾಗಿ ಮತ್ತೆ ಅದರ ಸ್ಥಾನದಲ್ಲಿ ಹೊಸ ವೃಕ್ಷ ಬೆಳೆಸಲಾಗಿರುತ್ತದೆ. ಅದರ ಸಾನ್ನಿಧ್ಯ ವೃದ್ಧಿಯಾಗಿಲ್ಲವೆಂದು ಕಂಡು ಬರುತ್ತದೆ.
ಮಹರ್ಷಿ ಅಗಸ್ತö್ಯರಿಂದ ಪ್ರತಿಷ್ಠಾಪನೆಗೊಂಡ ಶ್ರೀ ಅಗಸ್ತೇಶ್ವರ ಸಾನ್ನಿಧ್ಯ ಇಲ್ಲಿ ಮೇಲೆ ಇರುತ್ತದೆ. ಈ ದೇವಾಲಯದ ಈಶ್ವರ ಬಿಂಬವು ಕಡುಶರ್ಕರ ದಿಂದ ನಿರ್ಮಿಸಿದ್ದಾಗಿದ್ದು, ಅಷ್ಟಬಂಧ ಚಲನೆಯಾಗಿ ಅಭಿಷೇಕಾದಿಗಳು ನಿತ್ಯವಾಗಿ ಜರುಗಲು ಅಸಾಧ್ಯವಾಗುವಷ್ಟು, ಬುಡದಲ್ಲಿ ಪೂರ್ಣ ಜೀರ್ಣತೆ ಉಂಟಾಗಿ ಬಿಂಬವು ಕೆಲವು ಬಾರಿ ಪತನಗೊಂಡಿದ್ದಲ್ಲದೇ ಜೀರ್ಣಾವಸ್ಥೆ ಯಲ್ಲಿರುತ್ತದೆ. ಇದಕ್ಕೆ ಯಾವುದೇ ಪರಿಹಾರಗಳನ್ನೂ ಮಾಡಿರುವುದಿಲ್ಲ. ಅಲ್ಲದೆ, ಈ ಈಶ್ವರ ದೇವರ ಸಾನ್ನಿಧ್ಯಕ್ಕೆ ಯಾವುದೇ ಪ್ರಾಧಾನ್ಯವನ್ನೂ ಇಲ್ಲಿ ನೀಡುತ್ತಿರುವುದೂ ಕಂಡು ಬರುತ್ತಿಲ್ಲವೆಂಬುದು ಅತ್ಯಂತ ಖೇದಕರ ವಿಷಯವಾಗಿದೆ.
ಶ್ರೀ ಕಾವೇರಿ ಯಾತ್ರೆಯಲ್ಲಿ ಬರುವ ಭಕ್ತಾದಿಗಳು, ಎಲ್ಲಾ ಸಾನ್ನಿಧ್ಯಗಳ ದರ್ಶನವನ್ನು ಪಡೆಯುವುದೂ ಇಲ್ಲವೆಂದು ತಿಳಿಯುತ್ತದೆ, ಇದರಿಂದಾಗಿ ಯಾತ್ರೆಯ ಪೂರ್ಣಫಲವು ಸಿದ್ಧಿಸುವುದಿಲ್ಲವೆಂದು ಕಂಡು ಬಂದಿರುತ್ತದೆ.
ಹಿAದೆ ಬ್ರಹ್ಮ ಕಲಶದ ಸಂದರ್ಭದಲ್ಲಿ ಮಳೆ ಬಂದು ಅಸ್ತವ್ಯಸ್ತಗೊಂಡು ಕರ್ಮಕ್ಕೆ ವಿಘ್ನ ಹಾಗೂ ವೈಕಲ್ಯ ಉಂಟಾಗಿರುತ್ತದೆ. ಅಲ್ಲದೆ, ಇಪ್ಪತ್ತೆöÊದು ವರ್ಷಗಳ ಹಿಂದೆ, ಸಾನ್ನಿಧ್ಯಗಳನ್ನು ಸ್ಥಳ ಬದಲಾವಣೆ ಮಾಡಿ ಪ್ರತಿಷ್ಠೆ ಮಾಡಿರುವುದು ಕಂಡು ಬರುತ್ತಿದೆ. ಶಿಲ್ಪಶಾಸ್ತಿçÃಯವಾದ ನಿಯಮಗಳ ಉಲ್ಲಂಘನೆಯಾಗಿದ್ದು, ಗಣಪತಿ, ಈಶ್ವರ, ಕಾವೇರಿ ಸಾನ್ನಿಧ್ಯಗಳಲ್ಲಿ ಸ್ಥಾನ ಬದಲಾವಣೆಯಾಗಿರುತ್ತದೆ. ಪೂರ್ವಿಕ, ಪ್ರತಿಷ್ಠಾನ ಸಂಕಲ್ಪದಲ್ಲಿ ಬದಲಾವಣೆ ಯಾಗಿರುತ್ತದೆ. ಶ್ರೀಮಹÀರ್ಷಿ ಅಗಸ್ತö್ಯರಿಂದಲೇ ಪ್ರತಿಷ್ಠಿತವಾಗಿ ಪೂಜಿಸಲ್ಪಟ್ಟ ಈಶ್ವರನ ಪೂಜೆ ಹಾಗೂ ಉತ್ಸವದಲ್ಲಿ ವೈರುಧ್ಯ ಮತ್ತು ಲೋಪಗಳು ಕಂಡುಬರುತ್ತಿದ್ದು, ಇದು ಗಂಭೀರವಾಗಿರುತ್ತದೆ. ಇದನ್ನು ಅಗತ್ಯವಾಗಿ ಸರಿಪಡಿಸಬೇಕಾಗಿದೆ. ಇಲ್ಲಿಗೆ ವಾಯವ್ಯ ದಿಕ್ಕಿನಲ್ಲಿ "ಅಯ್ಯಪ್ಪಕಾಡು" ಎಂಬುದಿದ್ದು ಇಲ್ಲಿಯ ಕನಕೆ-ಕಜೆ ಎಂಬಲ್ಲಿ ಕನ್ನಿಕೆ ನದಿಯ ಉಗಮ ಸ್ಥಳವಿದೆ. ಇದು ಶ್ರೀ ಅಗಸ್ತö್ಯರು ಸ್ನಾನ ಮಾಡಿದ ಸ್ಥಳವಾಗಿದೆ. ಈಗ ಇದು ಜೀರ್ಣಾವಸ್ಥೆಯಲ್ಲಿರುತ್ತದೆ. ಇದರ ಜೀರ್ಣೋದ್ಧಾರವೂ ಕ್ರಮೇಣ ಆಗತಕ್ಕದ್ದು ಬಹುಮುಖ್ಯವಾಗಿದೆ. ಈ ಸಂಕೇತದಲ್ಲಿರುವ ಕನಕಜೆಯ ಕನ್ನಿಕಾ ನದಿಯ ಪವಿತ್ರ ತೀರ್ಥಜಲವನ್ನು ಕಾವೇರಿಯ ಸ್ನಾನದ ಕೆರೆಗೆ ಪೂರೈಸಬಹುದಾಗಿದೆ ಎಂದು ಕಂಡುಬAದಿದೆ. ಬ್ರಹ್ಮಗಿರಿಯಲ್ಲಿ ಸಪ್ತ ಋಷಿಗಳ ಆವಾಸಸ್ಥಾನವಿದ್ದು, ಅವರು ಯಜ್ಞ ಮಾಡಿದ ಕುರುಹುಗಳೂ ಇರುತ್ತದೆ. ಶ್ರೀ ಕಾವೇರಿ ಯಾತ್ರೆಯಲ್ಲಿ ಸಪ್ತ ಋಷಿಗಳ ಭೇಟಿಯೂ ಒಂದು ಪ್ರಧಾನ ಅಂಗವಾಗಿರುತ್ತದೆ ಎಂಬುದನ್ನು ಎಲ್ಲರೂ ಮನಗಾಣ ಬೇಕಾಗಿದೆ. ಶ್ರೀ ಕಾವೇರಿಯ ತೀರ್ಥ ಕುಂಡಿಕೆಯ ಪಾವಿತ್ರö್ಯ ಅತ್ಯಂತ ಮುಖ್ಯವಾದುದಾಗಿದೆ. ಈಗಿನ ಕುಂಡಿಕೆಯಲ್ಲಿ ಕುಂಕುಮ, ನಾಣ್ಯ, ಹೂವು, ತುಳಸಿ ಇತ್ಯಾದಿಗಳನ್ನು ಹಾಕಿದ್ದರಿಂದಲೂ ದುರ್ಬಲ ವಾದ, ಶಿಥಿಲವಾದ, ಕ್ಷÄದ್ರ ಜಂತುಗಳಾದ ಹಾವು ಇಲಿ, ಇತ್ಯಾದಿಗಳು ಬಿದ್ದು ಸತ್ತದ್ದರಿಂದಲೂ ತೀರ್ಥ ಜಲವು ಮಲಿನಗೊಳ್ಳುತ್ತಿದೆ. (ಮುಂದುವರಿಯುವುದು)
- ಜಿ. ರಾಜೇಂದ್ರ, ಮಡಿಕೇರಿ.