ಮಡಿಕೇರಿ, ಮಾ. ೧೮: ಹಾಕತ್ತೂರು ಯುವ ಸ್ಪಂದನ ಯೂತ್ ಫೌಂಡೇಶನ್ ವತಿಯಿಂದ ತಾ. ೨೬, ೨೭, ೨೮ ರಂದು ೨ನೇ ವರ್ಷದ ಸೂಪರ್ ೮ ಜಿಲ್ಲಾಮಟ್ಟದ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಮುತ್ತಾರ್ಮುಡಿಯಲ್ಲಿ ಆಯೋಜಿಸಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ಕೆ.ಎಂ. ಶಿವರಾಜ್ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಥಮ ಬಹುಮಾನವಾಗಿ ೩೦,೦೦೦ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ೧೫,೦೦೦ ನಗದು ಮತ್ತು ಆಕರ್ಷಕ ಟ್ರೋಫಿ, ತೃತೀಯ ಬಹುಮಾನ ಆಕರ್ಷಕ ಟ್ರೋಫಿ ಹಾಗೂ ಮ್ಯಾನ್ ಆï್ಫ ದಿ ಮ್ಯಾಚ್, ಮ್ಯಾನ್ ಆಫ್ ದಿ ಸೀರಿಸ್, ಉತ್ತಮ ಬ್ಯಾಟ್ಸ್ಮೆನ್, ಉತ್ತಮ ಬೌಲರ್ ಪ್ರಶಸ್ತಿಗಳನ್ನು ನೀಡಲಾಗುವುದು. ಪಾಲ್ಗೊಳ್ಳುವ ತಂಡಗಳು ತಾ. ೨೨ ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ೭೮೯೯೨೨೬೯೧೫, ೮೭೬೨೯೨೩೮೬೩ ದೂರವಾಣಿಯನ್ನು ಸಂಪರ್ಕಿಸಬಹುದೆAದು ಹೇಳಿದರು. ಗೋಷ್ಠಿಯಲ್ಲಿ ಯುವ ಸ್ಪಂದನ ಯೂತ್ಫೌಂಡೇಶನ್ ಸದಸ್ಯರುಗಳಾದ ರಮೇಶ್ ರೈ, ತೆಕ್ಕಡೆ ಚೇತನ್, ಬಿ.ಕೆ. ಯತೀಶ್, ಅನೀಶ್ ಚೂರಿಕಾಡು, ದೇರಜೆ ಮನೋಜ್ ಉಪಸ್ಥಿತರಿದ್ದರು.