*ಗೋಣಿಕೊಪ್ಪ, ಮಾ. ೧೮: ಹಾಡಿ, ಕುಣಿದು ನಲಿದಾಡುವ ಮೂಲಕ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆ ಯನ್ನು ಪೊನ್ನಂಪೇಟೆ, ವೀರಾಜಪೇಟೆ ತಾಲೂಕು ಅಂಗನವಾಡಿಯ ೧೩ ವರ್ತುಲದ ನೌಕರರು ಅದ್ಧೂರಿಯಾಗಿ ಆಚರಿಸಿ ಸಂಭ್ರಮಿಸಿದರು.

ಗೋಣಿಕೊಪ್ಪ ಪರಿಮಳ ಮಂಗಳ ವಿಹಾರದಲ್ಲಿ ಅಂಗನವಾಡಿ ಕಾರ್ಯಕರ್ತರು ಕೊಡವ, ಕನ್ನಡ, ಹಿಂದಿ, ತಮಿಳು ಭಾಷೆಗಳ ಗೀತೆಗಳಿಗೆ ನರ್ತಿಸುವ ಮೂಲಕ ಮತ್ತು ಜಾನಪದ ಗೀತಾ ಗಾಯನಗಳ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಗಮನ ಸೆಳೆದರು.

ಬಿರುನಾಣಿ ವರ್ತುಲದ ಚೋಂದಮ್ಮ, ಸಲೀನ ಅವರಿಂದ ಕೊಡವ ನೃತ್ಯ ಪ್ರದರ್ಶನ, ಗೋಪಮ್ಮ ತಂಡದಿAದ ಜಾನಪದ ನೃತ್ಯ, ಅಮ್ಮತ್ತಿ ವರ್ತುಲ ಕಾರ್ಯಕರ್ತರಿಂದ ನೃತ್ಯ, ಕುಟ್ಟ, ಕಾನೂರು ವರ್ತುಲದಿಂದ ನಾಗರಹೊಳೆ ಬುಡಕಟ್ಟು ಜನರ ಜಾನಪದ ಗೀತೆಗೆ ನೃತ್ಯ, ಗೋಣಿಕೊಪ್ಪ ವರ್ತುಲದ ಕಾರ್ಯಕರ್ತರಾದ ರೀನಾ, ರಮ್ಯ, ಲೇಖ ತಂಡದಿAದ ನೃತ್ಯ, ಹುದಿಕೇರಿ ವರ್ತುಲದಿಂದ ಸ್ವಾಗತ ನೃತ್ಯ, ಪಾಲಿಬೆಟ್ಟ, ವೀರಾಜಪೇಟೆ, ಅಮ್ಮತ್ತಿ ವರ್ತುಲದ ಕಾರ್ಯಕರ್ತÀರಿಂದ ಜಾನಪದ ಗೀತಾ ಗಾಯನ ಮತ್ತು ವಿವಿಧ ಸಂಸ್ಕöÈತಿಯನ್ನು ಬಿಂಬಿಸುವ ಗೀತೆಗಳಿಗೆ ನೃತ್ಯಗಳನ್ನು ಮಾಡುವ ಮೂಲಕ ಸಾಂಸ್ಕöÈತಿಕ ಮೆರುಗನ್ನು ಮಹಿಳಾ ದಿನಾಚರಣೆ ನೀಡಿತು. ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ.ಆರ್. ರಾಜೇಶ್ ಅವರು ಏಕಪಾತ್ರ ಅಭಿನಯದ ಮೂಲಕ ಸಾಂಸ್ಕöÈತಿಕ ರಂಗನ್ನು ತುಂಬಿ ಗಮನ ಸೆಳೆದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕ ಎಂ. ಮಂದಣ್ಣ, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ.ಆರ್. ರಾಜೇಶ್, ಜಿಲ್ಲಾ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಚೇಂದಿರ ಕಾವೇರಮ್ಮ, ತಾಲೂಕು ಅಧ್ಯಕ್ಷೆ ಸುಮಿತ್ರಾ, ೨೦೨೧-೨೨ನೇ ಸಾಲಿನ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಬಿ.ಸಿ. ನಳಿನಾಕ್ಷಿ, ಕೊರೊನಾ ವಾರಿಯರ್ಸ್ ಲತಾ, ಉಷಾಕುಮಾರಿ, ಅಂಗನವಾಡಿ ನೌಕರರ ಕ್ಷೇಮನಿಧಿ ಅಧ್ಯಕ್ಷೆ ಬಿ.ಕೆ. ಸರೋಜ, ಜಾನಪದ ಕಲೆಯನ್ನು ಅಂರ‍್ರಾಷ್ಟಿçÃಯ ಮಟ್ಟಕ್ಕೆ ಕೊಂಡೊಯ್ದ ಅಂಗನವಾಡಿ ಕಾರ್ಯಕರ್ತೆ ಗೋಪಮ್ಮ ಇವರುಗಳು ಮಹಿಳಾ ದಿನಾಚರಣೆಯಲ್ಲಿ ಸನ್ಮಾನಿತರಾದರು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಬಿ. ಚೇತನ್ ಅಧ್ಯಕ್ಷತೆಯಲ್ಲಿ ನಡೆದ ಮಹಿಳಾ ದಿನಾಚರಣೆಯನ್ನು ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಎನ್.ಎಸ್. ಪ್ರಶಾಂತ್ ವೇದಿಕೆಯಲ್ಲಿದ್ದ ಇತರ ಅತಿಥಿಗಳೊಂದಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ತಹಶೀಲ್ದಾರ್ ಎನ್.ಎಸ್. ಪ್ರಶಾಂತ್, ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಆತ್ಮಸ್ಥೆöÊರ್ಯವನ್ನು ಹೊಂದ ಬೇಕಾಗಿದೆ. ಇದನ್ನು ಮಹಿಳೆಯರು ಸಂಘಟನಾತ್ಮಕ ಬಲದಲ್ಲಿ ಪಡೆದುಕೊಳ್ಳುವ ಮೂಲಕ ತನ್ನ ಶಕ್ತಿಯನ್ನು ಸಮಾಜಕ್ಕೆ ತಿಳಿಸುವಲ್ಲಿ ಸದಾ ಕಾರ್ಯೋನ್ಮುಖರಾಗಬೇಕೆಂದು ಹೇಳಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ. ಮಂದಣ್ಣ ಮಾತನಾಡಿ, ಸಮಾಜದಲ್ಲಿ ಲಿಂಗಬೇಧವಿಲ್ಲದೇ ಸಮಾನತೆಯನ್ನು ಮಹಿಳೆಯರು ಕಂಡುಕೊಳ್ಳಲು ಶಿಕ್ಷಣದಿಂದ ಸಾಧ್ಯವಿದೆ. ಇಡೀ ಸಮಾಜ ಇಂದು ಮಹಿಳೆಯರ ಮೇಲೆ ಅವಲಂಬಿತವಾಗಿದೆ. ಮಹಿಳೆಯರು ಸಮಾಜದ ಶಕ್ತಿ. ಪ್ರತಿಯೊಬ್ಬ ಪುರುಷನಿಗೂ ಮಹಿಳೆಯರ ಸಹಾಯವಿಲ್ಲದೇ ಯಾವುದೇ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅಸಾಧ್ಯ. ಮನೆ ಮತ್ತು ಮನೆಯ ಹೊರಗಿನ ವ್ಯವಸ್ಥೆಯನ್ನು ಬಹು ಜವಾಬ್ದಾರಿಯುತವಾಗಿ ನಿಭಾಯಿಸುವ ತಾಳ್ಮೆ, ಜಾಣ್ಮೆ ಹೊಂದಿರುವುದು ಹೆಣ್ಣು ಮಾತ್ರ. ಪುರುಷನಿಗೆ ವಿವಿಧ ರೀತಿಯಲ್ಲಿ ಶಕ್ತಿಯನ್ನು ತುಂಬಿ ಧನಾತ್ಮಕತೆಯನ್ನು ತುಂಬುವಲ್ಲಿ ಸದಾ ಸಕ್ರಿಯವಾಗಿ ಹೆಣ್ಣು ತೊಡಗಿಸಿಕೊಂಡಿದ್ದಾಳೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಶಿಶು ಅಭಿವೃದ್ಧಿ ಅಧಿಕಾರಿ ಕೆ.ಆರ್. ರಾಜೇಶ್, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಸದಸ್ಯೆ ಕೊಣಿಯಂಡ ಬೋಜಮ್ಮ, ಕ್ಷೇತ್ರ ಸಮನ್ವಯಾಧಿಕಾರಿ ವನಜಾಕ್ಷಿ, ಉದ್ಯಮಿ ಗುಮ್ಮಟಿರ ಕಿಲನ್ ಗಣಪತಿ ಮಾತನಾಡಿದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ, ಜಿಲ್ಲಾ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಚೇಂದಿರ ಕಾವೇರಮ್ಮ, ತಾಲೂಕು ಅಧ್ಯಕ್ಷೆ ವಿ.ಎಸ್. ಸುಮಿತ್ರಾ, ಕ್ಷೇಮ ನಿಧಿ ಅಧ್ಯಕ್ಷೆ ಬಿ.ಕೆ. ಸರೋಜ, ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಪಿ. ಲೀಲಾವತಿ ಹಾಗೂ ಅಂಗನವಾಡಿಯ ನೌಕರರ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.