ಮಡಿಕೇರಿ, ಮಾ. ೧೯: ಕರ್ನಾಟಕ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ವತಿಯಿಂದ ಉಡುಪಿಯಲ್ಲಿ ಜರುಗಿದ ೩ನೇ ಕರ್ನಾಟಕ ರಾಜ್ಯ ಮಾಸ್ಟರ್ಸ್ ಗೇಮ್ಸ್ -೨೦೨೨ರಲ್ಲಿ ೫೫+ ವಿಭಾಗದ ಬ್ಯಾಡ್ಮಿಂಟನ್‌ನಲ್ಲಿ ಮಡಿಕೇರಿಯವರಾದ ತಾತಪಂಡ ಜ್ಯೋತಿ ಸೋಮಯ್ಯ ಅವರು ಚಿನ್ನದ ಪದಕ ಗಳಿಸಿದ್ದಾರೆ. ಅಲ್ಲದೆ ಮಿಕ್ಸೆಡ್ ಡಬಲ್ಸ್ನಲ್ಲಿ ಬೆಳ್ಳಿ ಪದಕವನ್ನು ಇವರು ಪಡೆದಿದ್ದಾರೆ. ಈ ಸಾಧನೆಯೊಂದಿಗೆ ಜ್ಯೋತಿ ರಾಷ್ಟಿçÃಯ ಪಂದ್ಯಾವಳಿಗೆ ಆಯ್ಕೆಯಾಗಿದ್ದು ಈ ಕ್ರೀಡಾಕೂಟ ತ್ರಿವೇಡ್ರಂನಲ್ಲಿ ಮೇ ತಿಂಗಳಿನಲ್ಲಿ ಜರುಗಲಿದೆ.