ಶನಿವಾರಸಂತೆ, ಮಾ. ೧೮: ಶನಿವಾರಸಂತೆ ಸಮೀಪದ ಕೊಡ್ಲಿಪೇಟೆಯ ಎಸ್. ಜೇಕಬ್ ಅವರನ್ನು ಸೋಮವಾರಪೇಟೆ ನಗರ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರನ್ನಾಗಿ ನೇಮಿಸಿ ಘಟಕದ ಗೋವಿಂದ್ ರಾಜ್ ದಾಸ್ ಆದೇಶ ನೀಡಿದರು.
ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಕಾರ್ಮಿಕ ಘಟಕದ ಅಧ್ಯಕ್ಷ ವೇದಕುಮಾರ್, ಜಂಟಿ ಕಾರ್ಯದರ್ಶಿ ಪಾವನಾ, ಮುಖಂಡ ಲಾರೆನ್ಸ್ ಇದ್ದರು.