ಕುಶಾಲನಗರ, ಮಾ. ೧೭: ಕುಶಾಲನಗರ ಪಟ್ಟಣದ ಬಡಾವಣೆಯೊಂದರ ಮನೆಯ ಬಳಿ ನಿಲ್ಲಿಸಿದ್ದ ಕಾರು (ಕೆಎ ೦೯ ಪಿ ೬೧೬೯) ಬೆಂಕಿಗೆ ಆಹುತಿಯಾಗಿದೆ.
ಸಂತೋಷ್ ಎಂಬುವವರು ತಮ್ಮ ಮನೆಯ ಬಳಿ ನಿಲ್ಲಿಸಿದ್ದ ಕಾರಿಗೆ ಬೆಂಕಿ ತಗುಲಿದೆ. ಬುಧವಾರ ತಡರಾತ್ರಿಯಲ್ಲಿ ಈ ಘಟನೆ ಸಂಭವಿಸಿದ್ದು, ಬೆಂಕಿ ಕಂಡ ತಕ್ಷಣ ಸಂತೋಷ್ ಮತ್ತಿತರರು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರು ಭಾಗಶಃ ಸುಟ್ಟುಹೋಗಿದೆ. ಘಟನೆ ಬಗ್ಗೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಸಂತೋಷ್ ದೂರು ನೀಡಿದ್ದು ತಮ್ಮ ಕಾರಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿರುವ ಸಾಧ್ಯತೆ ಇರುವುದಾಗಿ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.