ಮಡಿಕೇರಿ, ಮಾ. ೧೭: ಮೂರ್ನಾಡು ಸಂತೆ, ಅಂಗಡಿ ಮತ್ತು ಹೊಟೇಲ್ಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಹಾಗೂ ಕೋಟ್ಪಾ ಕಾಯ್ದೆ ಉಲ್ಲಂಘನೆಯಾಗಿರುವ ಪ್ರಕರಣಗಳಲ್ಲಿ ಸೆಕ್ಷನ್ ೪ ಅಡಿಯಲ್ಲಿ ೧೭ (ರೂ. ೨೭೦೦) ಹಾಗೂ ೬ರ ಅಡಿಯಲ್ಲಿ ೩ (ರೂ. ೬೦೦) ಒಟ್ಟು ೨೦ ಪ್ರಕರಣದ ದಾಳಿ ನಡೆಸಿದ್ದು, ಸಂಗ್ರಹಣೆಯಾದ ಒಟ್ಟು ರೂ. ೩೩೦೦ ದಂಡವನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಜಂಟಿ ಖಾತೆಗೆ ಜಮೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.