ಸುಳ್ಯ, ಮಾ. ೧೭: ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೀಡಾಗಿ ೨೧ ಮಂದಿ ಗಾಯಗೊಂಡ ಘಟನೆ ಸಂಪಾಜೆಯಲ್ಲಿ ಸಂಭವಿಸಿದೆ.

ಧರ್ಮಸ್ಥಳದಿAದ ಗುಂಡ್ಲುಪೇಟೆಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಸಂಪಾಜೆ ಬಳಿಯ ಗಡಿಕಲ್ಲು ಎಂಬಲ್ಲಿ ತೋಡಿಗೆ ಉರುಳಿದೆ. ಬಸ್ಸ್ನಲ್ಲಿದ್ದ ಪ್ರಯಾಣಿಕರಲ್ಲಿ ೨೧ ಮಂದಿಗೆ ಗಾಯಗಳಾಗಿದ್ದು, ಆ ಪೈಕಿ ಚಾಲಕ ಸೇರಿದಂತೆ ನಾಲ್ಕು ಮಂದಿಗೆ ಗಂಭೀರ ಗಾಯಗಳಾಗಿವೆ. ಬಸ್ಸಿನ ಟಯರ್ ಸ್ಪೋಟಗೊಂಡು ನಿಯಂತ್ರಣ ತಪ್ಪಿ ಬಸ್ ನದಿಗೆ ಉರುಳಿದೆ. ಘಟನೆ ನಡೆದ ಕೂಡಲೇ ಜನಪ್ರತಿನಿಧಿಗಳು, ಅಧಿಕಾರಿಗಳು ಸಾರ್ವಜನಿಕರು ಕಾರ್ಯಾಚರಣೆ ನಡೆಸಿ ಗಾಯ ಗೊಂಡವರನ್ನು ಆ್ಯಂಬ್ಯುಲೆನ್ಸ್ ಮೂಲಕ ಸುಳ್ಯ ಆಸ್ಪತ್ರೆಗೆ ದಾಖಲಿಸಿದರು.

ಕನಕಪುರದ ಶಿವಲಿಂಗೇಗೌಡ (೭೦) ಮತ್ತು ಭಾಗಮಂಡಲದ ಮಹಾಬಲೇಶ್ವರ ಭಟ್ (೬೨) ಗಂಭೀರ ಗಾಯಗೊಂಡಿದ್ದು, ಚಾಲಕ ಸುಭಾಶ್ ಕೂಡ ಗಂಭೀರ ಗಾಯಗೊಂಡಿದ್ದಾರೆ. ಉಳಿದಂತೆ ಭರತೇಶ್ (೧೮), ನಂದಕುಮಾರ್ ಕುಶಾಲನಗರ (೫೭), ಲೋಕೇಶ್

(ಮೊದಲ ಪುಟದಿಂದ) ಮೈಸೂರು (೫೮), ಜಸ್ಸಿ ಮಡಿಕೇರಿ (೩೦), ಬೇಬಿ ಮರಿಯಾ (೪ ವರ್ಷ) ರಾಜೇಶ್ ಮೈಸೂರು (೧೭), ಭಾಗ್ಯ (೪೮), ಗೋವರ್ಧನ್ ಕಂದ್ರಪ್ಪಾಡಿ, ತಾರಾ ಮಡಿಕೇರಿ (೪೩), ಪ್ರಕಾಶ್ ಮೈಸೂರು (೨೭), ಮೇದಪ್ಪ (೨೬), ಶೇಷಪ್ಪ ಸುಬ್ರಹ್ಮಣ್ಯ (೬೮), ನಳಿನಿ (೫೨), ಚಂದ್ರಶೇಖರ್, ಲಕ್ಷಿö್ಮÃ, ರಮೇಶ್ ಮಂಡ್ಯ, ಶಿವಲಿಂಗಯ್ಯ ಮಂಡ್ಯ, ನಿರ್ವಾಹಕ ಲೋಹಿತ್ ಸುಳ್ಯ ಕೆವಿಜಿ ಆಸ್ಪತ್ರೆ ಮತ್ತು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ೧೭ ಮಂದಿ ಕೆವಿಜಿಯಲ್ಲಿದ್ದು, ೪ ಮಂದಿ ಸರಕಾರಿ ಆಸ್ಪತ್ರೆಯಲ್ಲಿದ್ದಾರೆ. ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.