ವೀಣಾ ಪ್ರಶ್ನೆಗೆ ಸಚಿವರ ಉತ್ತರ

ಮಡಿಕೇರಿ, ಮಾ.೧೭: ಕೊಡಗು ಜಿಲ್ಲೆಯಲ್ಲಿ ಕೊಡವ ಭಾಷಿಕರು ಮತ್ತು ಅರೆಭಾಷೆ ಗೌಡ ಜನಾಂಗದವರು ಬಂದೂಕು ವಿನಾಯಿತಿ ಹೊಂದಿದ್ದು, ಅವರುಗಳ ಹಕ್ಕುಗಳ ರಕ್ಷಣೆಯ ಕುರಿತು ಸರಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಕೋವಿ ಹಕ್ಕಿನ ಕುರಿತು ವಿವಾದ ಮತ್ತು ಗೊಂದಲದ ಹೇಳಿಕೆ ಬರುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆಯೇ

(ಮೊದಲ ಪುಟದಿಂದ) ಬಂದಿದ್ದಲ್ಲಿ ಕೊಡವ ಬೈರೇಸ್ ಮತ್ತು ಜಮ್ಮಾ ಪರವಾನಗಿ ಕುರಿತು ಸರಕಾರದ ನಿಲುವು, ಸರಕಾರದ ಆದೇಶ ಹಾಗೂ ಕೈಗೊಂಡ ಕ್ರಮಗಳ ಕುರಿತು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಗೊಂದಲದ ಹೇಳಿಕೆಗಳು ಸರಕಾರದ ಗಮನಕ್ಕೆ ಬಂದಿದ್ದು, ಹಕ್ಕುಗಳ ರಕ್ಷಣೆಯ ವಿಚಾರ ಸರಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.