ಪೊನ್ನಂಪೇಟೆ, ಮಾ. ೧೭: ಪೊನ್ನಂಪೇಟೆ ಸಮೀಪದ ಮತ್ತೂರು ಶ್ರೀ ಭೂತನಾಥ ಅಯ್ಯಪ್ಪ ದೇವರ ವಾರ್ಷಿಕ ಹಬ್ಬದ ಪ್ರಯುಕ್ತ ತಾ. ೧೮ ರಂದು (ಇಂದು) ಸಂಜೆ ೭ ಗಂಟೆಗೆ ಉತ್ತರ ನಕ್ಷತ್ರದಲ್ಲಿ ದೇವರ ಕೊಡಿಮರ ನಿಲ್ಲಿಸುವುದರೊಂದಿಗೆ ಆರಂಭಗೊಳ್ಳಲಿದೆ. ತಾ. ೨೨ ರವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಅಪರಾಹ್ನ ೩.೩೦ಕ್ಕೆ ದೇವರು ಹೊರಬರುವುದು, ಭಂಡಾರ ನಂತರ ದೇವರ ಕೆರೆಯಲ್ಲಿ ಮೀಯುವುದು, ಸಂಜೆ ಪೊನ್ನಂಪೇಟೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸೇರಿದಂತೆ ವಸಂತ ಪೂಜೆ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.