ಕುಶಾಲನಗರ, ಮಾ.೧೬: ಲಾರಿಯೊಂದರಲ್ಲಿ ಭತ್ತದ ಹೊಟ್ಟಿನ ಕೆಳಭಾಗ ಭಾರಿ ಮೌಲ್ಯದ ಬೀಟೆ ಮರದ ನಾಟಾಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣ ಕುಶಾಲನಗರ ಸಮೀಪದ ನಂಜರಾಯಪಟ್ಟಣ ಬಳಿ ಪತ್ತೆಯಾಗಿದೆ.

ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದು, ಲಾರಿಯೊಂದಿಗೆ ಒಟ್ಟು ೩೨ ಲಕ್ಷ ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಲಾರಿ ಚಾಲಕ ಪುತ್ತೂರು ಮೂಲದ ಅಬ್ದುಲ್ ಸಲೀಂ ಎಂಬಾತನನ್ನು ಬಂಧಿಸಲಾಗಿದೆ.

ಲಾರಿಯಲ್ಲಿ (ಕೆಎ-೧೯-ಎಎ-೫೨೭೨) ಶ್ರೀಮಂಗಲ ಕಡೆಯಿಂದ ೩೨ ಬೀಟೆಮರಗಳ ನಾಟಾಗಳನ್ನು ತುಂಬಿಸಿಕೊAಡು ಅದರ ಮೇಲೆ ಭತ್ತದ ಹೊಟ್ಟು ಹಾಕಿ ಸಿದ್ದಾಪುರ ಮೂಲಕ ಕುಶಾಲನಗರ

ಕಡೆಗೆ ಬರುತ್ತಿದ್ದ ಸಂದರ್ಭ ನಂಜರಾಯಪಟ್ಟಣ ಬಳಿ ಮಂಗಳವಾರ ತಡರಾತ್ರಿಯಲ್ಲಿ ಅಲ್ಲಿನ ಅರಣ್ಯ ಅಧಿಕಾರಿ, ಸಿಬ್ಬಂದಿಗಳು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದ ಸಂದರ್ಭ ಒಳಭಾಗದಲ್ಲಿ ಭಾರೀ ಬೀಟೆ ಮರಗಳ ನಾಟಗಳು ಕಂಡುಬAದಿವೆ.

ಶ್ರೀಮAಗಲ ಕಾಫಿ ತೋಟದಿಂದ ಈ ಮರಗಳನ್ನು ಕಡಿದು ಸಾಗಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಂದಿತ ಚಾಲಕ ಪುತ್ತೂರು ಮೂಲದವನಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ತಿಳಿಸಿದ್ದಾರೆ.

ಮರ ಸಾಗಾಟದ ಖಚಿತ ಸುಳಿವಿನ ಮೇರೆಗೆ ಮಡಿಕೇರಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಎ.ಟಿ ಪೂವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಇವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಸುಬ್ರಾಯ ಅರಣ್ಯ ರಕ್ಷಕ ರವಿ, ಚಾಲಕ ವಾಸು, ಸಿಬ್ಬಂದಿಗಳಾದ ಟಿ.ಟಿ. ಕುಶಾಲಪ್ಪ, ಅಲ್ಬರ್ಟ್ ಡಿಸೋಜ ಮತ್ತು ಆರ್ ಆರ್ ಟಿ ಸಿಬಂದಿಗಳು ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು. ಕಳೆದ ವರ್ಷ ಇದೇ ದಿನ

ಇದೇ ರೀತಿಯ ಅಕ್ರಮ ಬೀಟೆ

ಮರ ಸಾಗಾಟ ಪ್ರಕರಣ ಪತ್ತೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.