ಮಡಿಕೇರಿ, ಮಾ. ೧೭: ಹಾಕತ್ತೂರು ಬಿಳಿಗೇರಿ ಬದರ್ ಜುಮಾ ಮಸೀದಿಯ ಉರೂಸ್ ನೇರ್ಚೆ ತಾ. ೨೦ ರಿಂದ ಆರಂಭವಾಗಲಿದ್ದು, ತಾ. ೨೨ರವರೆಗೆ ನಡೆಯಲಿದೆ ಎಂದು ಬದರ್ ಜಮಾಅತ್ ಕಾರ್ಯದರ್ಶಿ ಅಬ್ದುಲ್ ಖಾದರ್ ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ತಾ. ೨೦ ರಂದು ಸಂಜೆ ೪.೩೦ ಗಂಟೆಗೆ ಬದರ್ ಜಮಾಅತ್ ಅಧ್ಯಕ್ಷ ಪಿ.ಎಂ. ಅಬ್ದುಲ್ಲಾ ಹಾಜಿ ಅವರು ಧ್ವಜಾರೋಹಣ ನೆರವೇರಿಸಲಿದ್ದು, ಮಗರಿಬ್ ನಮಾಜಿನ ನಂತರ ಮಖಾಂ ಅಲಂಕಾರ, ದ್ಸಿಕ್ಸ್ ಹಲ್ಕಾ ಖತಂ ದುಹಾ ಮಜ್ಲಿಸ್ ನಡೆಯಲಿದ್ದು, ಕೇರಳದ ಆದೂರಿನ ಅಸ್ಸಯಿದ್ ಕಾಸಿಂಸಖಾಫಿ ಅಲ್‌ಹಾದಿ ತಂಙಳ್ ನೇತೃತವ ವಹಿಸಲಿದ್ದಾರೆ. ಹಾಕತ್ತೂರು ಜುಮಾ ಮಸೀದ್ ಖತೀಬರಾದ ಸೂಫಿ ಸಹದಿ ತಿಲ್ಲಂಗೇರಿ ಉದ್ಘಾಟನೆ ನೆರವೇರಿಸಲಿದ್ದಾ. ತಾ. ೨೧ರಂದು ಮಧ್ಯಾಹ್ನ ೩.೩೦ ಗಂಟೆಗೆ ಮೌಲೂದ್ ಪಾರಾಯಣ ಹಾಗೂ ೪.೩೦ ಗಂಟೆಗೆ ಅನ್ನದಾನ ನಡೆಯಲಿದ್ದು, ಮಹಿಳೆಯರಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಅದೇ ದಿನ ರಾತ್ರಿ ೮.೩೦ ಗಂಟೆಗೆ ಧಾರ್ಮಿಕ ಉಪನ್ಯಾಸ ನಡೆಯಲಿದ್ದು, ಹಾಕತ್ತೂರು ಮದರಸ ಸದರ್ ಮುಅಲ್ಲಿಂ ಹೆಚ್.ಐ. ಸಾದುಲಿ ಸಖಾಫಿ ಕೊಂಡAಗೇರಿ ಉದ್ಘಾಟಿಸಲಿದ್ದಾರೆ. ಹಾಕತ್ತೂರು ಜಮಾ ಮಸೀದ್ ಖತೀಬರಾದ ಸೂಫಿ ಸಹದಿ ತಿಲ್ಲಂಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೇರಳ ಕ್ಯಾಲಿಕಟ್ ಚೆರುಮೊತ್‌ನ ಇಸ್ಮಾಯಿಲ್ ಮಿಸ್ಬಾಹಿ ಉಪನ್ಯಾಸ ನೀಡಲಿದ್ದಾರೆ. ಹಾಕತ್ತೂರು ಖದರ್ ಜಮಾಯಿತ್ ಕಮಿಟಿ ಅಧ್ಯಕ್ಷ ಅಬ್ದುಲ್ಲಾ ಹಾಜಿ, ಉಮರ್ ಮುಸ್ಲಿಯಾರ್, ಸೈಪುದ್ದೀನ ಮುಸ್ಲಿಯಾರ್ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ಬದರ್ ಜಮಾಅತ್ ಅಧ್ಯಕ್ಷ ಪಿ.ಎಂ. ಅಬ್ದುಲ್ಲಾ ಹಾಜಿ, ಉಪಾಧ್ಯಕ್ಷ ಕೆ.ಎಂ. ಖಾಸಿಂ, ಸಹ ಕಾರ್ಯದರ್ಶಿ ಹಸೈನಾರ್ ಉಪಸ್ಥಿತರಿದ್ದರು.