ಶನಿವಾರಸಂತೆ, ಮಾ. ೧೭: ಸಮೀಪದ ಕೊಡ್ಲಿಪೇಟೆ ಹೇಮಾವತಿ ರೋಟರಿ ಸಂಸ್ಥೆ ವತಿಯಿಂದ ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳ ಶಿಕ್ಷಣ ಸದ್ಬಳಕೆಗೆ ೧೦ ಕಂಪ್ಯೂಟರ್‌ಗಳನ್ನು ವಿತರಿಸಲಾಯಿತು. ರೋಟರಿ ಸಂಸ್ಥೆ ಅಧ್ಯಕ್ಷ ದಿನೇಶ್, ಕಾರ್ಯದರ್ಶಿ ಉಮೇಶ್, ಸದಸ್ಯರಾದ ಪ್ರಕಾಶ್ ಪ್ರಭು, ಜೆ.ಪಿ. ರಮೇಶ್, ಪ್ರಾಂಶುಪಾಲ ಹೆಚ್.ಜೆ. ಕುಮಾರ್, ಉಪನ್ಯಾಸಕರಾದ ಡಿ.ಎಂ. ರೂಪಕುಮಾರ್, ಪರ್ವತರಾಜ್ ಇದ್ದರು.