ಭಾಗಮಂಡಲ, ಮಾ. ೧೭: ತಾ. ೧೯ ರಂದು ಬೆಳಿಗ್ಗೆ ೧೦ ಗಂಟೆಗೆ ಆಯ್ಯಂಗೇರಿ ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಶಂಕು ಸ್ಥಾಪನೆ, ೧೦.೪೫ ಗಂಟೆಗೆ ಭಾಗಮಂಡಲ ಗೌಡ ಸಮಾಜ ಕಟ್ಟಡದ ಶಂಕು ಸ್ಥಾಪನೆ, ೧೧.೧೫ ಗಂಟೆಗೆ ತಲಕಾವೇರಿಯಲ್ಲಿರುವ ಪಂಚಾಯಿತಿ ಅಂಗಡಿ ಮಳಿಗೆಯ ನೂತನ ಕಟ್ಟಡದ ಉದ್ಘಾಟನೆ ಮತ್ತು ಶಂಕು ಸ್ಥಾಪನೆ, ೧೧.೪೫ ಗಂಟೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಣ್ಣು ಪರೀಕ್ಷೆ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮವು ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಲಿದೆ. ಶಾಸಕ ಕೆ.ಜಿ ಬೋಪಯ್ಯ, ಲೋಕಾಸಭಾ ಸದಸ್ಯ ಪ್ರತಾಪ್ ಸಿಂಹ, ಎಂಎಲ್‌ಸಿ ಸುಜಾಕುಶಾಲಪ್ಪ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಉಪಸ್ಥಿತರಿರುವರು