ಸೋಮವಾರಪೇಟೆ, ಮಾ. ೧೬: ಕರ್ನಾಟಕ ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ವತಿಯಿಂದ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಆಯೋಜಿಸಿದ್ದ ೩ನೇ ವರ್ಷದ ರಾಜ್ಯ ಮಟ್ಟದ ಮಾಸ್ಟರ್ ಗೇಮ್ಸ್ ಸ್ಪರ್ಧೆಯಲ್ಲಿ ತಾಲೂಕಿನ ಶಾಂತಳ್ಳಿ ಗ್ರಾಮದ ಗಿರಿಜಾ ಜೋಯಪ್ಪ ಅವರಿಗೆ ಪ್ರಶಸ್ತಿ ಲಭಿಸಿದೆ.
೩೫ ವರ್ಷ ಮೇಲ್ಪಟ್ಟ ವಯೋಮಾನ ದವರ ಜಾವೆಲಿನ್ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ, ಕುದುರೆ ಓಟ ಹಾಗೂ ೪೦೦ ಮೀಟರ್ ರಿಲೇಯಲ್ಲಿ ಭಾಗವಹಿಸಿದ್ದ ಗಿರಿಜಾ ಅವರು ತೃತೀಯ ಸ್ಥಾನ ಪಡೆದಿದ್ದಾರೆ.
ಉಡುಪಿ ಶಾಸಕ ರಘುಪತಿ ಭಟ್, ಅಸೋಸಿಯೇಷನ್ ಅಧ್ಯಕ್ಷ ಸದಾನಂದ ಆಳ್ವ, ಪ್ರಧಾನ ಕಾರ್ಯದರ್ಶಿ ಕುದ್ಸಿಯ ನಜೀರ್, ಸಂಘಟನಾ ಕಾರ್ಯದರ್ಶಿ ಶಾಲಿನಿ ಶೆಟ್ಟಿ ಸೇರಿದಂತೆ ಇನ್ನಿತರ ಗಣ್ಯರು ಸ್ಪರ್ಧಾ ವಿಜೇರಿಗೆ ಬಹುಮಾನ ವಿತರಿಸಿದರು.