ವೀರಾಜಪೇಟೆ, ಮಾ. ೧೫: ಸುಮಾರು ೮೦೦ ವರ್ಷಗಳ ಇತಿಹಾಸವಿರುವ ವೀರಾಜಪೇಟೆ ಮಲೆತಿರಿಕೆ ಬೆಟ್ಟದ ಶ್ರೀ ಮಲೆ ಮಹಾದೇಶ್ವರ ದೇವಾಲಯದ ವಾರ್ಷಿಕ ಉತ್ಸವಕ್ಕೆ ಇಂದಿನಿAದ ಚಾಲನೆ ದೊರೆಯಿತು.
ದೇವಸ್ಥಾನದಲ್ಲಿ ತಾ. ೧೫ ರಂದು ಸಂಜೆ ನಾಲ್ಕು ಗಂಟೆಗೆ ಕುಂದಿರ ಮನೆಯಿಂದ ಭಂಡಾರ ತರುವುದು, ಸಂಜೆ ೭ಕ್ಕೆ ಕೊಡಿಮರ ನಿಲ್ಲಿಸಿ, ರಾತ್ರಿ ೮ ಗಂಟೆಗೆ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆ ನಡೆಸಲಾಯಿತು. ತಾ. ೧೬ ರಂದು ಬೆಳಿಗ್ಗೆ ೧೧ ಗಂಟೆಗೆ ಶ್ರೀ ನಾಗ ದೇವರ ಸ್ಥಾನದಲ್ಲಿ ವಿಶೇಷ ಪೂಜೆ, ರಾತ್ರಿ ೮ಕ್ಕೆ ಕಾಪು, ಮಹಾಪೂಜೆ ನಡೆಯಲಿದೆ. ತಾ. ೧೭ ರಂದು ಬೆಳಿಗ್ಗೆ ೧೧ ಗಂಟೆಗೆ ಮುಕ್ಕಾಟ್ ಸ್ಥಾನದಲ್ಲಿ ವಿಶೇಷ ಪೂಜೆ, ರಾತ್ರಿ ೮ಕ್ಕೆ ಇರುಳುಬೊಳಕು ನಂತರ ಮಹಾಪೂಜೆ ನಡೆಯಲಿದೆ.
ತಾ. ೧೮ ರಂದು ಅಪರಾಹ್ನ ೧೨ ಗಂಟೆಗೆ ನೆರಪು, ನಂತರ ಎತ್ತ್ ಪೋರಾಟ ಮತ್ತು ತೆಂಗಿನಕಾಯಿಗೆ ಗುಂಡುಹೊಡೆಯುವುದು, ೧ ಗಂಟೆಗೆ ಮಹಾ ಪೂಜೆ, ೩ ಕ್ಕೆ ದೇವರು ಹೊರಗೆ ಬರುವುದು, ಸಂಜೆ ೬ ಗಂಟೆಗೆ ವೀರಾಜಪೇಟೆ ಪಟ್ಟಣದ ಮುಖ್ಯ ಬೀದಿಯಲ್ಲಿ ದೇವರ ಉತ್ಸವ ಮೂರ್ತಿಯ ಮೆರವಣಿೆಗೆ ನಡೆಯಲಿದೆ. ತಾ. ೧೯ ಅಪರಾಹ್ನ ೧೨ ಕ್ಕೆ ಮಹಾಪೂಜೆ, ಸಂಜೆ ೬ಕ್ಕೆ ದೇವರು ಜಳಕಕ್ಕೆ ಹೋಗುವುದು- ಅವಭೃತ ಸ್ನಾನ ನಡೆಯಲಿದೆ. ತಾ, ೨೦ ಬೆಳಿಗ್ಗೆ ೧೧ಕ್ಕೆ ಕೊಡಿಮರ ಇಳಿಸುವುದು ನಂತರ ಅಪರಾಹ್ನ ೧೨ಕ್ಕೆ ಮಹಾಪೂಜೆ ನಡೆಯಲಿದೆ. ದೇವಾಲಯದಲ್ಲಿ ತಾ. ೧೫ ರಿಂದ ೨೦ರ ವರೆಗೆ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಉತ್ಸವಕ್ಕೆ ಬರುವ ಭಕ್ತಾದಿಗಳಿಗೆ ಮಗ್ಗುಲ ಜಂಕ್ಷನ್ನಿAದ ಬಸ್ನ ವ್ಯವಸ್ಥೆ ಮಾಡಲಾಗಿದೆ ಎಂದು ದೇವಾಲಯ ಟ್ರಸ್ಟ್ ಅಧ್ಯಕ್ಷ ವಾಟೇರಿರ ಶಂಕರಿ ಪೂವಯ್ಯ ತಿಳಿಸಿದ್ದಾರೆ.
ದೇವತಕ್ಕರಾದ ಕೊಳುವಂಡ ರಾಜರಾಮ್, ಕಾರ್ಯದರ್ಶಿ ಬೊಳ್ಳಚಂಡ ಪ್ರಕಾಶ್, ಸಹಕಾರ್ಯದರ್ಶಿ ಚೋಕಂಡ ರಮೇಶ್ ಮತ್ತು ಖಜಾಂಚಿ ಚಾರಿಮಂಡ ಗಪ್ಪುಗಣಪತಿ ಸೇರಿದಂತೆ ಭಕ್ತಾದಿಗಳು ಹಾಜರಿದ್ದರು.