ಕುಶಾಲನಗರ, ಮಾ. ೧೫: ಕೂಡುಮಂಗಳೂರು ಗ್ರಾ.ಪಂ. ಸಾಮಾನ್ಯ ಸಭೆಯು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿಗೆ ನೀಡಲಾಗಿದ್ದ ಅರ್ಜಿಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಅವರು ಸಭೆಯಲ್ಲಿ ಮಂಡಿಸಿದರು. ದೂರುದಾರರು ಹಾಗೂ ಪ್ರತಿದೂರುದಾರರಿಂದ ಸರಿಯಾದ ಮಾಹಿತಿ ಪಡೆದು ನ್ಯಾಯಯುತವಾದ ತೀರ್ಮಾನವನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷೆ ಇಂದಿರಾ ರಮೇಶ್, ಸಾಮಾಜಿಕ ನ್ಯಾಯ ಸಮಿತಿ ಸದಸ್ಯರಾದ ಪಾರ್ವತಮ್ಮ, ಕೆ.ಬಿ. ಷಂಶುದ್ದೀನ್, ದಿನೇಶ್ ಹಾಗೂ ಗ್ರಾ.ಪಂ. ಸದಸ್ಯರಾದ ಖತೀಜಾ, ಆಶಾ ವೆಂಕಟೇಶ್, ದೀಪಾ, ಹರೀಶ್, ಭಾಗ್ಯ ಇದ್ದರು.