ಮಡಿಕೇರಿ, ಮಾ. ೧೫: ಸೋಮವಾರಪೇಟೆ ತಾಲೂಕಿನ ಅಂಕನಹಳ್ಳಿ ಬಳಿಯ ಮನೆಹಳ್ಳಿ ಮಠದ ಶ್ರೀ ಬಿಲ್ವ ಗೋಶಾಲೆ ದಶಮಾನೋತ್ಸವದ ಅಂಗವಾಗಿ ರಾಜ್ಯಮಟ್ಟದ ಸಾವಯವ ಕೃಷಿ ಮತ್ತು ಕುಲ ಗೋವುಗಳ ಸಮ್ಮೇಳನ ತಾ. ೨೩, ೨೪ ಮತ್ತು ೨೫ ರಂದು ಮನೆಹಳ್ಳಿ ಶ್ರೀ ತಪೋಕ್ಷೇತ್ರದಲ್ಲಿ ನಡೆಯಲಿದೆ ಎಂದು ಮಠಾಧಿಪತಿ ಶ್ರೀ ಮಹಾಂತಶಿವಲಿAಗ ಸ್ವಾಮೀಜಿ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೨೩ ರಂದು ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೧ ಗಂಟೆಯವರೆಗೆ ಉಚಿತ ಪಶು ವೈದ್ಯಕೀಯ ಶಿಬಿರ ನಡೆಯಲಿದ್ದು, ತಾ. ೨೪ ರಂದು ಬೆಳಿಗ್ಗೆ ೯ ಗಂಟೆಯಿAದ ಮಧ್ಯಾಹ್ನ ೧೨.೩೦ ರವರೆಗೆ ಸಾವಯವ ಕೃಷಿ ಮತ್ತು ಗವ್ಯೋತ್ಪನ್ನಗಳ ಉತ್ಪಾದನೆ ಕುರಿತು ಪ್ರಾತ್ಯಕ್ಷಿಕೆ ಕಾರ್ಯಾಗಾರ ನಡೆಯಲಿದೆ. ಮಧ್ಯಾಹ್ನದ ನಂತರ ಗ್ರಾಮೀಣ ಜನರಿಗೆ ಪ್ರಾದೇಶಿಕ ಕ್ರೀಡೆಗಳನ್ನು ಏರ್ಪಡಿಸಲಾಗಿದ್ದು, ಮಹಿಳೆಯರಿಗೆ ರೊಟ್ಟಿ ಮಾಡುವ ಸ್ಪರ್ಧೆ, ಧಾನ್ಯ ಹಾಗೂ ತರಕಾರಿ ಬಳಸಿ ರಂಗೋಲಿ ಸ್ಪರ್ಧೆ, ಪುರುಷರಿಗೆ ಹಗ್ಗಜಗ್ಗಾಟ, ಭಾರದ ಗುಂಡು ಎಸೆತ, ಹಸಿರೆಲೆ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ತಾ. ೨೫ ರಂದು ಬೆಳಿಗ್ಗೆ ೮ ಗಂಟೆಯಿAದ ೯.೩೦ ರವರೆಗೆ ಕುಲ ಗೋವುಗಳ ಸಾಂಪ್ರದಾಯಿಕ ಉತ್ಸವ ಜರುಗಲಿದ್ದು, ಕುಲಗೋವುಗಳ ಪ್ರದರ್ಶನ ಮತ್ತು ಸಾವಯುವ ಕೃಷಿ ಮಳಿಗೆಗಳ ಉದ್ಘಾಟನೆ ನಡೆಯಲಿದೆ. ಬೆಳಿಗ್ಗೆ ೧೦ ಗಂಟೆಗೆ ಮಹಾರಾಷ್ಟçದ ಕನ್ನೇರಿಸಿದ್ದಗಿರಿ ಮಠದ ಶ್ರೀ ಅದೃಶ್ಯ ಕಾಡುಸಿದ್ದೇಶ್ವರ ಸ್ವಾಮಿಗಳು ಹಾಗೂ ಎಲ್ಲಾ ಸಂತರ ದಿವ್ಯ ಸಾನಿಧ್ಯದಲ್ಲಿ ಮೊದಲ ಅಧಿವೇಶನ ನಡೆಯಲಿದೆ. ರಾಷ್ಟಿçÃಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೆಂಡೆ ಜಿ ನೇತೃತ್ವ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಾವಯುವ ಕೃಷಿ ಮಿಷನ್ ರಾಜ್ಯಾಧ್ಯಕ್ಷ ಆನಂದ್ ಜಿ, ಪುತ್ತೂರು ಪ್ರಾಂತ್ಯ ಗೋ ಸೇವಾ ಪ್ರಮುಖ ಪ್ರವೀಣ್ ಸರಳಾಯ, ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಎಂ.ಪಿ. ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ ಬಿ.ಸಿ. ಸತೀಶ್, ಪೊಲೀಸ್ ವರಿಷ್ಠಾಧಿಕಾರಿ ಮಲಚೀರ ಅಯ್ಯಪ್ಪ, ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಉತ್ತಮ ರಾಸುಗಳಿಗೆ ಪ್ರಥಮ ರೂ. ೧೨,೦೦೦ ನಗದು,

(ಮೊದಲ ಪುಟದಿಂದ) ದ್ವಿತೀಯ ರೂ. ೧೧,೦೦೦ ನಗದು, ತೃತೀಯ ರೂ. ೧೦,೦೦೦ ನಗದು ಹಾಗೂ ಸಮಾಧಾನಕರ ಬಹುಮಾನ ನೀಡಲಾಗುವುದು. ಮಧ್ಯಾಹ್ನ ೧ ಗಂಟೆಗೆ ಕೃಷಿ ಪರಿಣಿತರ ಸಮ್ಮುಖದಲ್ಲಿ ಮೊದಲ ಅಧಿವೇಶನದ ಉದ್ಘಾಟನೆಯಾಗಲಿದ್ದು, ಮಧ್ಯಾಹ್ನ ೨ ಗಂಟೆಗೆ ಎರಡನೇ ಅಧಿವೇಶನ ನಡೆಯಲಿದ್ದು, ನಂತರ ವಿಜೇತ ಪ್ರಾದೇಶಿಕ ಕ್ರೀಡಾಪಟುಗಳಿಗೆ, ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ ಎಂದರು. ಕನ್ನಡ ಜಾಗೃತಿ ಸಮಿತಿ ಸದಸ್ಯ ಮಹೇಶ್ ಮಾತನಾಡಿ, ಕಾರ್ಯಕ್ರಮದಲ್ಲಿ ಸಾವಯವ ಉತ್ಪನ್ನ ಪ್ರದರ್ಶನಕ್ಕೆ ಅವಕಾಶವಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಕ್ಷೇತ್ರದ ಸ್ವಯಂಸೇವಕರಾದ ಎಸ್.ಟಿ. ಗೌರವ್, ನಾರಾಯಣಸ್ವಾಮಿ, ಶಿವಯೋಗಿ, ಕೆ.ಎಸ್. ರತೀಶ್ ಉಪಸ್ಥಿತರಿದ್ದರು.