ಮಡಿಕೇರಿ, ಮಾ. ೧೫: ಹುಲಿತಾಳದ ಡಾ. ಭೀಮ್‌ರಾವ್ ಅಂಬೇಡ್ಕರ್ ಕ್ರೀಡಾ ಸಮಿತಿ ಮತ್ತು ದಲಿತ ನಾಗಾಸ್ ಕ್ರೀಡಾ ಅಕಾಡೆಮಿಯ ಜಂಟಿ ಆಶ್ರಯದಲ್ಲಿ ಏ. ೮ ರಿಂದ ೧೦ ರವರೆಗೆ ಮೂರ್ನಾಡಿನ ಪದವಿಪೂರ್ವ ಕಾಲೇಜು ಮೈದಾನದಲ್ಲಿ ೨೦ನೇ ವರ್ಷದ ಜೈ ಭೀಮ್ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷÀ ಹೆಚ್.ಜಿ. ಯತೀಶ್ ಕ್ರೀಡಾ ಕೂಟದ ಬಗ್ಗೆ ಮಾಹಿತಿ ನೀಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವ ಸಮೂಹಕ್ಕೆ ಸೀಮಿತವಾಗಿ ಗ್ರಾಮೀಣಮಟ್ಟದ ಪಂದ್ಯಾವಳಿ ಆಯೋಜಿಸಿರುವುದಾಗಿ ತಿಳಿಸಿದರು.
ಪಂದ್ಯಾವಳಿಯಲ್ಲಿ ೫೦ಕ್ಕೂ ಹೆಚ್ಚಿನ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಆಸಕ್ತ ತಂಡಗಳು ತಾ. ೨೫ ರೊಳಗಾಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. ೭೪೮೩೭೦೬೨೧೭, ೯೦೦೮೪೬೯೨೫೭ ಸಂಪರ್ಕಿಸಬಹುದೆAದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಹೆಚ್.ಪಿ. ಶಶಿಕುಮಾರ್, ಉಪಾಧ್ಯಕ್ಷರಾದ ಹೆಚ್.ಎಂ. ಶಾಂತಕುಮಾರ್, ಖಜಾಂಚಿ ಹೆಚ್.ಜಿ. ಸೂರ್ಯ, ಮಾಜಿ ಅಧ್ಯಕ್ಷ ಹೆಚ್.ಬಿ. ನಿತಿನ್ ಹಾಗೂ ಗೌರವ ಅಧ್ಯಕ್ಷÀ ಹೆಚ್.ಬಿ. ಪ್ರವೀಣ್ ಉಪಸ್ಥಿತರಿದ್ದರು.