ಉಕ್ರೇನ್ ವೈದ್ಯಕೀಯ ವಿಶ್ವವಿದ್ಯಾಲಯಗಳಿಂದ ಆನ್‌ಲೈನ್ ತರಗತಿ ಪ್ರಾರಂಭ

ನವದೆಹಲಿ, ಮಾ. ೧೫: ಯುದ್ಧ ಪೀಡಿತ ಉಕ್ರೇನ್‌ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ನಂತರ ಅತಂತ್ರ ಭವಿಷ್ಯದ ಭಯದಲ್ಲಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಹಲವಾರು ಉಕ್ರೇನಿಯನ್ ವೈದ್ಯಕೀಯ ವಿಶ್ವವಿದ್ಯಾಲಯಗಳು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿದ್ದು ಕೊಂಚ ನಿರಾಳ ತಂದಿದೆ. ಆದಾಗ್ಯೂ, ಪ್ರಾಯೋಗಿಕ ತರಗತಿಗಳಿಗೆ ಹಾಜರಾಗಲು ಸಾಧ್ಯವಿಲ್ಲದಿರುವುದಕ್ಕೆ ಕೆಲವು ವಿದ್ಯಾರ್ಥಿಗಳು ಚಿಂತಿತರಾಗಿದ್ದಾರೆ. ರಷ್ಯಾದ ಪಡೆಗಳ ನಿರಂತರ ಶೆಲ್ ದಾಳಿಯ ನಡುವೆ ಉಕ್ರೇನ್‌ನಲ್ಲಿ ದೈಹಿಕ ತರಗತಿಗಳನ್ನು ನಡೆಸುವುದು ಅಸಾಧ್ಯವಾದ ಕಾರಣ, ಪಶ್ಚಿಮ ಉಕ್ರೇನ್‌ನಲ್ಲಿರುವ ಹಲವಾರು ವೈದ್ಯಕೀಯ ವಿಶ್ವವಿದ್ಯಾಲಯಗಳು ಸೋಮವಾರದಿಂದ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿವೆ. ಭಾರತೀಯ ವಿದ್ಯಾರ್ಥಿಗಳ ಪ್ರಕಾರ ಮುಂಬರುವ ದಿನಗಳಲ್ಲಿ ಇತರ ವಿಶ್ವವಿದ್ಯಾಲಯಗಳು ಆನ್‌ಲೈನ್ ತರಗತಿಗಳನ್ನು ಪುನರಾರಂಭಿಸಲು ಯೋಜಿಸಿವೆ. ಮುಂದುವರಿದ ಶೆಲ್ ದಾಳಿಯ ನಡುವೆ ತಮ್ಮ ಶಿಕ್ಷಕರು ತಮ್ಮ ಮನೆ ಅಥವಾ ಸುರಕ್ಷಿತ ಸ್ಥಳಗಳಿಂದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಭಾರತೀಯ ವಿದ್ಯಾರ್ಥಿಗಳು ಹೇಳಿದ್ದಾರೆ. ಡ್ಯಾನಿಲೊ ಹ್ಯಾಲಿಟ್ಸ್ಕಿ ಎಲ್ವಿವ್ ರಾಷ್ಟಿçÃಯ ವೈದ್ಯಕೀಯ ವಿಶ್ವವಿದ್ಯಾಲಯ, ಇವಾನೊ-ಫ್ರಾಂಕಿವ್ಸ್ಕ್ ರಾಷ್ಟಿçÃಯ ವೈದ್ಯಕೀಯ ವಿಶ್ವವಿದ್ಯಾಲಯ, ವಿನ್ನಿಟ್ಸಿಯಾ ನ್ಯಾಷನಲ್ ಪಿರೊಗೊವ್ ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಬೊಗೊಮೊಲೆಟ್ಸ್ ರಾಷ್ಟಿçÃಯ ವೈದ್ಯಕೀಯ ವಿಶ್ವವಿದ್ಯಾಲಯ ಸೋಮವಾರದಿಂದ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿವೆ.

೧೨-೧೪ ವರ್ಷದ ಮಕ್ಕಳಿಗೆ ಲಸಿಕೆ; ಮಾರ್ಗಸೂಚಿ ಬಿಡುಗಡೆ

ನವದೆಹಲಿ, ಮಾ. ೧೫: ತಾ. ೧೬ ರಿಂದ (ಇಂದಿನಿAದ) ಪ್ರಾರಂಭವಾಗಲಿರುವ ೧೨-೧೪ ವರ್ಷದ ಮಕ್ಕಳಿಗೆ ಕೋವಿಡ್-೧೯ ಲಸಿಕೆ ಅಭಿಯಾನಕ್ಕಾಗಿ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲು ಕೋರ್ಬೆವ್ಯಾಕ್ಸ್ ಲಸಿಕೆಯನ್ನು ಮಾತ್ರ ಬಳಕೆ ಮಾಡಬೇಕೆಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ. ಬಯಾಲಜಿಕಲ್ ಇ' ಸಂಸ್ಥೆಯ ಇಂಟ್ರಾಮಸ್ಕ್ಯೂಲರ್ ಲಸಿಕೆ ಕೋರ್ಬೆವ್ಯಾಕ್ಸ್ ನ ಎರಡು ಡೋಸ್‌ಗಳನ್ನು ೨೮ ದಿನಗಳ ಅಂತರದಲ್ಲಿ ಮಕ್ಕಳಿಗೆ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಪ್ರಕಟಿಸಲಾಗಿದ್ದು, ರಾಜ್ಯಗಳೊಂದಿಗೆ ಮಾರ್ಗಸೂಚಿಯನ್ನು ಹಂಚಿಕೊಳ್ಳಲಾಗಿದೆ. ೧೪-೧೫ ವರ್ಷದ ಮಕ್ಕಳಿಗೆ ಈಗಾಗಲೇ ೧೫-೧೮ ವರ್ಷದವರಿಗೆ ಲಸಿಕೆ ಅಭಿಯಾನದಲ್ಲೇ ನೀಡಲಾಗಿದೆ. ಮಾರ್ಗಸೂಚಿಗಳ ಪ್ರಕಾರ ಮಾ. ೧,೨೦೨೧ ರ ಪ್ರಕಾರ, ೧೨-೧೩ ವರ್ಷಗಳ ವಯಸ್ಸಿನ ೪.೭ ಕೋಟಿ ಮಕ್ಕಳು ದೇಶಾದ್ಯಂತ ಇದ್ದಾರೆ. ೬೦ ವರ್ಷಗಳ ಮೇಲ್ಪಟ್ಟ ಎಲ್ಲಾ ಮಂದಿಗೂ ಈಗ ಮುನ್ನೆಚ್ಚರಿಕಾ ಕ್ರಮ ಡೋಸ್ ಲಸಿಕೆಯನ್ನು ನೀಡಲಾಗುತ್ತದೆ. ಈ ಡೋಸ್ ನೀಡುವುದಕ್ಕೆ ಎರಡನೇ ಡೋಸ್ ನೀಡಿದಾಗಿನಿಂದ ೩೯ ವಾರಗಳು ಕಳೆದಿರುವುದೇ ಮಾನದಂಡವಾಗಿರಲಿದೆ ಎಂದು ಮಾರ್ಗ ಸೂಚಿಯಲ್ಲಿ ತಿಳಿಸಲಾಗಿದೆ.

ಸೇನಾ ಕಮಾಂಡರ್ ಗುರಿಯಾಗಿಸಿ ಕಾರ್ ಬಾಂಬ್ ದಾಳಿ

ಸನಾ(ಯೆಮೆನ್), ಮಾ. ೧೫: ಯುದ್ಧಪೀಡಿತ ಯೆಮೆನ್‌ನಲ್ಲಿ ಮಂಗಳವಾರ ಸೇನಾ ಕಮಾಂಡರ್ ಗುರಿಯಾಗಿಸಿ ಕಾರ್ ಬಾಂಬ್ ದಾಳಿ ನಡೆಸಿದ್ದು, ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಹಿರಿಯ ಭದ್ರತಾ ಅಧಿಕಾರಿ ಸೇರಿದಂತೆ ಎಂಟು ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಬ್ಯಾನ್‌ನ ದಕ್ಷಿಣ ಪ್ರಾಂತ್ಯದ ಭದ್ರತಾ ಬೆಲ್ಟ್ ಫೋರ್ಸ್ ಎಂದು ಕರೆಯಲ್ಪಡುವ ಕಮಾಂಡರ್ ಅಬ್ದೆಲ್-ಲತೀಫ್ ಎಲ್-ಸಯೀದ್ ಅವರ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ಜಿಂಜಿಬಾರ್ ನಗರದಲ್ಲಿ ದಾಳಿ ನಡೆಸಲಾಗಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದ್ದಾರೆ. ಜಿಂಜಿಬಾರ್ ಅಬ್ಯಾನ್ ಪ್ರಾಂತೀಯ ರಾಜಧಾನಿಯಾಗಿದೆ. ಸೆಕ್ಯುರಿಟಿ ಬೆಲ್ಟ್ ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ ತರಬೇತಿ ಪಡೆದ ಮತ್ತು ಧನಸಹಾಯ ಪಡೆದ ಒಂದು ಸೇನಾಪಡೆಯಾಗಿದೆ ಮತ್ತು ಪ್ರತ್ಯೇಕತಾವಾದಿ ಸದರ್ನ್ ಟ್ರಾನ್ಸಿಷನಲ್ ಕೌನ್ಸಿಲ್‌ಗೆ ನಿಷ್ಟವಾಗಿದೆ. ಸ್ಫೋಟದಿಂದ ಎಲ್-ಸಯೀದ್ ಬೆಂಗಾವಲು ಪಡೆಯ ನಾಲ್ಕು ವಾಹನಗಳಿಗೆ ಹಾನಿಯಾಗಿದೆ.

ನವಾಬ್ ಮಲಿಕ್‌ಗೆ ಜಾಮೀನು ನೀಡಲು ಹೈಕೋರ್ಟ್ ನಕಾರ

ಮುಂಬೈ, ಮಾ. ೧೫: ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಹಾರಾಷ್ಟç ಕ್ಯಾಬಿನೆಟ್ ಸಚಿವ ನವಾಬ್ ಮಲಿಕ್‌ಗೆ ಮಧ್ಯಂತರ ಜಾಮೀನು ನೀಡಲು ಮತ್ತು ನ್ಯಾಯಾಂಗ ಬಂಧನದಿAದ ಬಿಡುಗಡೆಗೆ ಆದೇಶ ಹೊರಡಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಭೂಗತ ಪಾತಕಿ ದಾವೋದ್ ಇಬ್ರಾಹಿಂ ಸಹಚರರ ಜೊತೆಗೆ ನಂಟು ಆರೋಪದಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಇದೇ ವರ್ಷದ ಫೆಬ್ರವರಿ ೨೩ ರಂದು ಇಡಿ ಮಲಿಕ್ ಅವರನ್ನು ಬಂಧಿಸಿತ್ತು. ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ತನಗೆ ಮಧ್ಯಂತರ ಜಾಮೀನು ನೀಡಿ, ಕೂಡಲೇ ಬಿಡುಗಡೆ ಮಾಡಬೇಕೆಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ಆಗಿರುವ ನವಾಜ್ ಮಲಿಕ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದಾಗ್ಯೂ, ಮಲಿಕ್‌ಗೆ ಇಂತಹ ಯಾವುದೇ ಮಧ್ಯಂತರ ಜಾಮೀನು ಆದೇಶ ನೀಡುವುದನ್ನು ನ್ಯಾಯಮೂರ್ತಿಗಳಾದ ಪಿ.ಬಿ. ವರಾಳೆ ಮತ್ತು ಎಸ್.ಎಂ. ಮೋದಕ ಅವರನ್ನೊಳಗೊಂಡ ನ್ಯಾಯಪೀಠ ನಿರಾಕರಿಸಿದೆ. ಯಾವುದೇ ಅಂತಿಮ ಆದೇಶ ಪ್ರಕಟಿಸುವ ಮುನ್ನ ಉಭಯ ಕಡೆಗಳಿಂದ ಸುದೀರ್ಘ ವಾದದ ವಿಚಾರಣೆಯ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

ಉಕ್ರೇನ್ ಕದನ ನಿಲುಗಡೆಗೆ ವಿಶ್ವಸಂಸ್ಥೆ ನೇರ ಸಂಧಾನ

ಜಿನೇವಾ, ಮಾ. ೧೫: ರಷ್ಯಾ- ಉಕ್ರೇನ್ ಮಧ್ಯೆ ನೇರವಾಗಿ ಸಂಧಾನ ನಡೆಸುವಂತೆ ಕೋರಿ ವಿಶ್ವಸಂಸ್ಥೆ ಭಾರತ, ಚೀನಾ ಮತ್ತು ಫ್ರಾನ್ಸ್ ದೇಶಗಳೊಂದಿಗೆ ಚರ್ಚೆ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ, ತಾನು ಉಕ್ರೇನ್ ಮತ್ತು ರಷ್ಯಾ ಎರಡೂ ದೇಶಗಳ ಜೊತೆ ಸಂಪರ್ಕದಲ್ಲಿ ಇರುವುದಾಗಿ ತಿಳಿಸಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ ಈ ಕೂಡಲೇ ನಿಲ್ಲಬೇಕು. ಕದನ ವಿರಾಮ ಏರ್ಪಡಬೇಕು ಎಂದು ಭಾರತದ ಪ್ರಧಾನಿ ಮೋದಿ ಈ ಹಿಂದೆ ಹಲವು ಬಾರಿ ಹೇಳಿದುದನ್ನು ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ತಿಳಿಸಿದ್ದಾರೆ. ವಿಶ್ವಸಂಸ್ಥೆಯಲ್ಲಿ ಭಾರತ ಪ್ರತಿನಿಧಿ ರವೀಂದ್ರ ಅವರು ಉಕ್ರೇನಿನಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ಸ್ಥಳಾಂತರಿಸಲು ನಡೆಸಿದ ಆಪರೇಷನ್ ಗಂಗಾ ಕುರಿತು ಮಾಹಿತಿ ಹಂಚಿಕೊAಡರು. ಇದುವರೆಗೂ ಒಟ್ಟು ೨೨,೫೦೦ ಭಾರತೀಯರನ್ನು ಉಕ್ರೇನಿನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಈ ಕಾರ್ಯಾಚರಣೆಗೆ ನೆರವು ನೀಡಿದ ದೇಶಗಳಿಗೆ ರವೀಂದ್ರ ಧನ್ಯವಾದ ಅರ್ಪಿಸಿದರು. ಇದೇ ವೇಳೆ ರಷ್ಯಾ-ಉಕ್ರೇನ್ ಯುದ್ಧದಿಂದ ಬಡ ದೇಶಗಳು ಆಹಾರ ಸಮಸ್ಯೆಯನ್ನು ಎದುರಿಸುತ್ತಿರುವುದಾಗಿ ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್ ಆತಂಕ ವ್ಯಕ್ತಪಡಿಸಿದ್ದಾರೆ. ಬಡದೇಶಗಳು ಮುಖ್ಯವಾಗಿ ಗೋದಿಗಾಗಿ ರಷ್ಯಾ- ಉಕ್ರೇನನ್ನು ಅವಲಂಬಿಸಿವೆ.