ಮಡಿಕೇರಿ, ಮಾ. ೧೪: ಕಳೆದ ಎರಡು ದಿನಗಳಿಂದ ಗಾಳಿಬೀಡು ಪ್ರೌಢ ಶಾಲಾ ಮೈದಾನದಲ್ಲಿ ನಡೆದ ಪ್ರಥಮ ವರ್ಷದ ಗಾಳಿಬೀಡು ಕ್ರಿಕೆಟ್ ಹಬ್ಬದಲ್ಲಿ ಟೀಂ ಮ್ಯಾಕ್ಸ್ವೆಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಎಸ್.ಎಸ್. ಫ್ರೆೆ್ರಂಡ್ಸ್ ದ್ವಿತೀಯ ಸ್ಥಾನ ಗಳಿಸಿತು. ಸ್ನೇಹಿತರ ಯುವಕ ಸಂಘ ಹಾಗೂ ರಾಯಲ್ ಚಾಲೆಂರ‍್ಸ್ ತಂಡಗಳು ಭಾಗವಹಿಸಿದ್ದವು.
ಊರಿನವರ ಸಹಕಾರದೊಂದಿಗೆ ಯುವಕರೆಲ್ಲ ಸೇರಿ ನಡೆಸಿದ ಐಪಿಎಲ್ ಮಾದರಿಯ ಕ್ರಿಕೆಟ್ ಹಬ್ಬದಲ್ಲಿ ಗಾಳಿಬೀಡು, ಒಂದನೇ ಮೊಣ್ಣಂಗೇರಿ, ವಣಚಲು ಗ್ರಾಮದ ಆಟಗಾರರು ಪಾಲ್ಗೊಂಡಿದ್ದರು. ಯೂಟ್ಯೂಬ್‌ನಲ್ಲಿ ನೇರ ಪ್ರಸಾರದ ವ್ಯವಸ್ಥೆ ಕೂಡ ಮಾಡಲಾಗಿತ್ತು.