ನಾಪೋಕ್ಲು, ಮಾ. ೧೪: ಕರ್ನಾಟಕ ಜಾನಪದ ಅಕಾಡಮಿ ಬೆಂಗಳೂರು ಇವರ ಆಶ್ರಯದಲ್ಲಿ ಕೆ.ಎಚ್. ಪ್ರೌಢಶಾಲೆ ಕಕ್ಕಬ್ಬೆ ಆವರಣದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ, ಜಾನಪದ ಪ್ರಶಸ್ತಿ ವಿಜೇತ ಕುಡಿಯರ ಪೊನ್ನಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಜಾನಪದ ಕಲೆ ಇಂದು ನಶಿಸಿಹೋಗುವ ಹಂತಕ್ಕೆ ತಲುಪಿದ್ದು ಇದನ್ನು ನಮ್ಮ ಹಿರಿಯರು ಯುವ ಪೀಳಿಗೆಗೆ ಕಲಿಸಿಕೊಡುವ ವ್ಯೆವಸ್ಥೆಯಾಗಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಡಿಕೇರಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಕಲೆಗೆ ನೀಡಿದ ಗೌರವವಾಗಿದೆ ಇದರಿಂದ ಗ್ರಾಮೀಣ ಪ್ರತಿಭೆಗಳು ಅರಳಲು ಸಾಧ್ಯ ಎಂದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯ ಕುಡಿಯರ ಮುತ್ತಪ್ಪ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಕ್ಕೆ ನಾಡಿನ ಜನರು ಪ್ರೋತ್ಸಾಹ ನೀಡಬೇಕು ಎಂದರು.
ಕಕ್ಕಬ್ಬೆ ನಗರದಿಂದ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆಯನ್ನು ಪದ್ಮಶ್ರೀ ಪುರಕೃತೆ ಬೆಂಗಳೂರು ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ ಉದ್ಘಾಟಿಸಿದರು. ನಂತರ ಸಮಾರಂಭದಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ ಜಾನಪದ ಕಲೆಯನ್ನು ಉಳಿಸಲು ನಾವು ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಕರ್ನಾಟಕ ಜಾನಪದ ಅಕಾಡಮಿ ಸದಸ್ಯೆ ಕೆ.ಈ, ಬೋಜಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ಮಂಜಮ್ಮ ಜೋಗತಿ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಂ.ಪA. ಸದಸ್ಯೆ ಇಂದಿರಾ, ಕೋಡಿಮಣಿಯಂಡ ಬೋಪಯ್ಯ, ಭರತ್ ಚಂದ್ರ ದೇವಯ್ಯ, ಭಾಗಮಂಡಲ ಲ್ಯಾಂಪ್ ಸೊಸೈಟಿಯ ಅಧ್ಯಕ್ಷ ಮಿಟ್ಟು ರಂಜಿತ್, ಕೆ.ಕೆ. ಬೋಪಯ್ಯ, ಕೆ.ಬಿ. ದಿಲೀಪ್ ಕುಮಾರ್, ಎರವರ ಸಿದ್ದಪ್ಪ, ತಿತಿಮತಿ ಲ್ಯಾಂಪ್ ಸೊಸೈಟಿಯ ಅಧ್ಯಕ್ಷ ಮಣಿಕುಂಜ, ಗ್ರಾಂ.ಪA. ಮಾಜಿ ಅಧ್ಯಕ್ಷೆ ಕರ್ತಂಡ ಶೈಲ ಕುಟ್ಟಪ್ಪ, ಮಾಜಿ ಸದಸ್ಯ ಚಂಡೀರ ಜಗದೀಶ್, ಅಕಾಡೆಮಿ ರಿಜಿಸ್ಟಾçರ್ ನಮ್ರತಾ, ಅಕಾಡೆಮಿ ಸದಸ್ಯ ಶ್ರೀವತ್ಸ ಮತ್ತಿತರರು ಇದ್ದರು. -ದುಗ್ಗಳ