ಮಡಿಕೇರಿ, ಮಾ. ೧೪: ಕೊಡಗು ಜಿಲ್ಲಾ ಜಂಯ್ಯತುಲ್ ಉಲಮಾ ಹಾಗೂ ಇದರ ಪೋಷಕ ಸಂಘಟನೆಗಳ ಆಶ್ರಯದಲ್ಲಿ ತಾ. ೧೭ರಂದು ಮಡಿಕೇರಿಯಲ್ಲಿ ಸೈಯ್ಯಿದ್ ಹೈದರ್ ಅಲಿ ಶಿಹಾಬ್ ತಂಙಳ್ ಅನುಸ್ಮರಣಾ ಸಂಗಮ ಕಾರ್ಯಕ್ರಮ ನಡೆಯಲಿದೆ ಎಂದು ಎಸ್‌ಕೆಎಸ್ ಎಸ್‌ಎಫ್ ಮುಖಂಡ ತಮ್ಲಿಖ್ ದಾರಿಮಿ ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.

ಮುಸ್ಲಿಂ ಸಮುದಾಯದ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಮಜಲುಗಳಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವ ಸಮಸ್ತ ಕೇರಳ ಜಂಯ್ಯತುಲ್ ಉಲಮಾ ಕೇಂದ್ರ ಸಮಿತಿ ಉಪಾಧ್ಯಕ್ಷರು, ಮುಸ್ಲಿಂ ಲೀಗ್ ಪಕ್ಷದ ಅಧ್ಯಕ್ಷರು, ಉಮ್ಮಲ್ ಮದಾರಿಸ್ ಜಾಮಿಅಃ ನೂರಿಯಾ ಅರೇಬಿಯಾ ಕಾಲೇಜು, ದಾರುಲ್ ಹುದಾ ಯೂನಿವರ್ಸಿಟಿ ಚೆಮ್ಮಾಡ್, ರಹ್ಮಾನಿಯ ಕಡಮೇರಿ, ನಂದಿ ದಾರುಸ್ಸಲಾಂ ಸೇರಿದಂತೆ ಉನ್ನತ ವಿದ್ಯಾಲಯಗಳ ಅಧ್ಯಕ್ಷರಾಗಿದ್ದ ಸಾವಿರಾರು ಮಹಲ್ಲ್ ಖಾಝಿಯೂ, ನೇತಾರರು ಆಗಿದ್ದ ಪ್ರವಾದಿ (ಸ.ಅ.) ಅವರ ಕುಟುಂಬದ ಪರಂಪರೆಯ ಮರ್ಹೂಂ ಸೈಯಿದ್ ಹೈದರ್ ಅಲಿ ಶಿಹಾಬ್ ತಂಙಳ್ ಅವರು ಇತ್ತೀಚೆಗೆ ನಮ್ಮನ್ನು ಅಗಲಿದ್ದು, ಅವರ ಅನುಸ್ಮರಣಾ ಸಂಗಮವು ತಾ. ೧೭ರಂದು ಬೆಳಿಗ್ಗೆ ೧೧ ಗಂಟೆಗೆ ಕಮ್ಯುನಿಟಿ ಹಾಲ್‌ನಲ್ಲಿ ನಡೆಯಲಿದೆ.

ಅನುಸ್ಮರಣಾ ಸಮ್ಮೇಳನದ ಮುಖ್ಯ ಭಾಷಣಕಾರರಾಗಿ ಖ್ಯಾತ ವಾಗ್ಮಿ, ಎಸ್‌ವೈಎಸ್ ಕೇಂದ್ರ ಸಮಿತಿ ನಾಯಕ ಸ್ವಲಾಹುದ್ದೀನ್ ಫೈಝಿ ವಲ್ಲಪುಯ ಆಗಮಿಸಲಿದ್ದಾರೆ. ಸಮಸ್ತ ಕೇರಳ ಜಂಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರಾದ ಕೊಡಗು ಜಿಲ್ಲಾ ನಾಯಿದ್ ಖಾಝಿ ಎಂ.ಎA. ಅಬ್ದುಲ್ಲಾ ಫೈಝಿ ಅಧ್ಯಕ್ಷತೆ ವಹಿಸಲಿದ್ದು, ಸಮಸ್ತ ಕೇರಳ ಜಂಯ್ಯತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿ ಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಂಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಎ.ಸಿ. ಉಸ್ಮಾನ್ ಫೈಝಿ ಸುಂಟಿಕೊಪ್ಪ, ಮುಹಮ್ಮದಲಿ ಶಿಹಾಬ್ ತಂಙಳ್ ಕಾಲೇಜು ಸುಂಟಿಕೊಪ್ಪ ಇದರ ಅಧ್ಯಕ್ಷರು, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್, ಅಲ್ ಅಮೀನ್ ಮಡಿಕೇರಿ ಅಧ್ಯಕ್ಷ ಬಿ.ಹೆಚ್. ಅಹ್ಮದ್ ಹಾಜಿ, ಎಸ್‌ವೈಎಸ್ ನಾಯಕ ಯಾಕೂಬ್ ಬಜೆಗುಂಡಿ, ಬದ್ರಿಯಾ ಜಿಮಾ ಮಸೀದಿ ಮಡಿಕೇರಿ ಇದರ ಅಧ್ಯಕ್ಷ ಅಮೀನ್ ಮೊಹ್ಸಿನ್, ಶಿಹಾಬ್ ತಂಙಳ್ ಕಾಲೇಜು ಸುಂಟಿಕೊಪ್ಪದ ಸದಸ್ಯರಾದ ಹಾರೂನ್‌ಹಾಜಿ, ಹಮೀದ್ ಹಾಜಿ ಬೆಟ್ಟಗೇರಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಮ್ಲಿಖ್ ಧಾರಿಮಿ ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಜಿಲ್ಲಾ ಜಂಯ್ಯತುಲ್ ಉಲಮಾ ಅಧ್ಯಕ್ಷ ಎಂ.ಎA. ಅಬ್ದುಲ್ಲಾ ಫೈಝಿ, ಪ್ರಧಾನ ಕಾರ್ಯದರ್ಶಿ ಎ.ಸಿ. ಉಸ್ಮಾನ್ ಪೈಝಿ, ಎಸ್‌ವೈಎಸ್ ಕೋಶಾಧಿಕಾರಿ ಉಮ್ಮರ್ ಫೈಜಿ ಉಪಸ್ಥಿತರಿದ್ದರು.