ಶನಿವಾರಸಂತೆ, ಮಾ. ೧೪: ಕೊಡ್ಲಿಪೇಟೆ ಸಮೀಪದ ಕೆರಗನಹಳ್ಳಿ ಗ್ರಾಮದ ನಿವಾಸಿ ಕೆ.ಕೆ. ಶೇಖರ್ ಅವರ ಸ್ಕೂಟರ್ (ಕೆಎ ೧೨ ಕ್ಯೂ ೫೫೬೧)ಗೆ ಹಿಂಭಾಗದಿAದ ಕೆಂಚಮ್ಮನ ಹೊಸಕೋಟೆಯ ನಿವಾಸಿ ಅಕ್ಷತಾ ಎಂಬವರು ಚಾಲಿಸುತ್ತಿದ್ದ ಕಾರು (ಕೆಎ ೦೫ ಎಂಸಿ ೧೨೪೦) ಡಿಕ್ಕಿಪಡಿಸಿದ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಯಸಳೂರು ಜಂಕ್ಷನ್ ಬಳಿ ಅಪಘಾತ ಸಂಭವಿಸಿದ್ದು, ಶೇಖರ್ಗೆ ಗಾಯಗಳಾಗಿವೆ. ಸೋಮವಾರಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಸ್ಥಳಕ್ಕೆ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಸಬ್ಇನ್ಸ್ಪೆಕ್ಟರ್ ಗೋವಿಂದ್ರಾಜ್ ಹಾಗೂ ಹೆಡ್ಕಾನ್ಸ್ಟೇಬಲ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿದ್ದಾರೆ.