ಸೋಮವಾರಪೇಟೆ, ಮಾ. ೧೩: ಇಲ್ಲಿನ ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಸಾಕಮ್ಮನ ಬಂಗಲೆಯ ಎದುರಿನ ಮೈದಾನದಲ್ಲಿ ನಡೆದ ೩೫ನೇ ವರ್ಷದ ರಾಜ್ಯಮಟ್ಟದ ಕಬಡ್ಡಿ ಕ್ರೀಡಾಕೂಟದಲ್ಲಿ ಅರುಣ್ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನ ಪಡೆಯಿತು. ಸೋಮವಾರಪೇಟೆಯ ಒಕ್ಕಲಿಗರ ಯುವ ವೇದಿಕೆ ತಂಡ ದ್ವಿತೀಯ ಸ್ಥಾನ ಪಡೆದರೆ, ಸತ್ಯ ಸ್ಫೋರ್ಟ್ಸ್ ತಂಡ ತೃತೀಯ ಸ್ಥಾನ ಪಡೆಯಿತು.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ರಂಜಿತ್ ಸ್ಫೋರ್ಟ್ಸ್ ಕ್ಲಬ್ ಪ್ರಥಮ, ವಿಕ್ಕಿ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು.
೧೯ರ ವಯೋಮಿತಿಯ ವಿಭಾಗದಲ್ಲಿ ರಾಮದೂತ ತಂಡ ಪ್ರಥಮ ಹಾಗೂ ಜೈಭೀಮ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಸಮಾರೋಪ ಸಮಾರಂಭದಲ್ಲಿ ಹಿರಿಯ ಕಬಡ್ಡಿ ಆಟಗಾರ ಮಂಜೂರು ತಮ್ಮಣ್ಣಿ, ಇಂದಿರಗಾAಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ಪ್ರಮುಖರಾದ ಮಂಜುನಾಥ್, ಶೇಷಪ್ಪ, ಪುನಿತ್, ಮನೋಜ್, ಚನ್ನಯ್ಯ, ರಾಜಪ್ಪ, ಅಜಯ್, ಹೃದಯ್, ತೀರ್ಪುಗಾರರಾದ ರಾಜಪ್ಪ, ಪ್ರವೀಣ್, ಇಶಾಕ್ ಉಪಸ್ಥಿತರಿದ್ದು, ಬಹುಮಾನ ವಿತರಿಸಿದರು.