ಮಡಿಕೇರಿ, ಮಾ. ೧೧: ೧೩ ನೇ ಅಂತರರಾಷ್ಟಿçÃಯ ಚಲನಚಿತ್ರೋತ್ಸವದ ಪ್ರಯುಕ್ತ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಕೊಡವ ಭಾಷೆಯ ಚಿತ್ರ ‘ದೇವಡಕಾಡ್’ಗೆ ೩ನೇ ಬಹುಮಾನ ದೊರೆತಿದೆ. ಜಿಲ್ಲೆಯವರಾದ ತಾತಂಡ ಪ್ರಭು ನಾಣಯ್ಯ ಹಾಗೂ ಅಲ್ಲಾರಂಡ ವಿಠಲ್ ನಂಜಪ್ಪ ನಟಿಸಿರುವ ಈ ಚಿತ್ರದ ನಿರ್ಮಾಪಕರಾಗಿ ಅವಿನಾಶ್ ಶೆಟ್ಟಿ ಹಾಗೂ ನಿರ್ದೇಶಕರಾಗಿ ಅಮರ್.ಎಲ್ ಕಾರ್ಯನಿರ್ವಹಿಸಿದ್ದಾರೆ.

ಚಿತ್ರೋತ್ಸವದಲ್ಲಿ ವಿವಿಧ ಭಾಷೆಗಳ ಸುಮಾರು ೧೩೪ ಚಿತ್ರಗಳು ಪ್ರದರ್ಶನಗೊಂಡಿದ್ದು, ದೊಡ್ಡಟ್ಟಿ ಭೈರೇಗೌಡ ಸಿನಿಮಾಗೆ ಪ್ರಥಮ, ಬಾಂಡಿ ಚಿತ್ರಕ್ಕೆ ದ್ವಿತೀಯ ಹಾಗೂ ದೇವಡಕಾಡ್ ಸಿನಿಮಾಗೆ ಮೂರನೇ ಬಹುಮಾನ ಲಭಿಸಿದೆ.