ಕುಶಾಲನಗರ, ಮಾ. ೧೧: ಕುಶಾಲನಗರ ಒಳಚರಂಡಿ ಯೋಜನೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕಿದೆ ಎಂದು ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆಯಿತು.
ಕುಶಾಲನಗರ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಅಧ್ಯಕ್ಷ ಜಯವರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಡಿ.ಕೆ. ತಿಮ್ಮಪ್ಪ ಮಾತನಾಡಿ, ಒಳಚರಂಡಿ ಯೋಜನೆಯ ವಿಳಂಬದ ಬಗ್ಗೆ ಸಂಬAಧಿಸಿದ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಬೇಕಾಗಿದೆ. ಅಧಿಕಾರಿ ಗಳ ಸಭೆ ಕರೆದು ಮಾಹಿತಿಯನ್ನು ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಗಮನಕ್ಕೆ ತರುವಂತೆ ಸಲಹೆ ನೀಡಿದರು.
ಪಟ್ಟಣದ ಸಂಪೂರ್ಣ ತ್ಯಾಜ್ಯ, ಕಲುಷಿತ ನೀರು ಚರಂಡಿ ಮೂಲಕ ನದಿಗೆ ನೇರವಾಗಿ ಸೇರುತ್ತಿದ್ದು, ಇದರಿಂದ ಕುಡಿಯುವ ನೀರು ಕಲುಷಿತಗೊಳ್ಳುತ್ತಿದೆ ಮತ್ತು ನದಿ ನೀರಿನ ಗುಣಮಟ್ಟ ಬಹುತೇಕ ಕುಸಿಯುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಈ ಬಗ್ಗೆ ಸಭೆಗೆ ಮಾಹಿತಿ ನೀಡಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ ಯುಜಿಡಿ ಕಾಮಗಾರಿ ಬಗ್ಗೆ ಪಟ್ಟಣ ಪಂಚಾಯಿತಿ ಜನಪ್ರತಿನಿಧಿಗಳು, ಅಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿಶೇಷ ಸಭೆ ಕರೆದು ಯೋಜನೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಕಾರ್ಯ ಯೋಜನೆಯನ್ನು ರೂಪಿಸಲಾಗುವುದು ಎಂದರು.
ವಾರದ ಸಂತೆ ಮಾರುಕಟ್ಟೆ ಸ್ಥಳಾಂತರ ನಂತರ ಪಟ್ಟಣ ಪಂಚಾಯಿತಿಗೆ ಆದಾಯದ ಕೊರತೆ ಉಂಟಾಗಿದ್ದು ಈ ಮೂಲಕ ಪ್ರಸಕ್ತ ನಡೆಯುವ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ವರ್ತಕರಿಂದ ದೊರಕುವ ಸಂತೆ ಶುಲ್ಕದಲ್ಲಿ ಪಟ್ಟಣ ಪಂಚಾಯಿತಿ ಪಾಲು ಪಡೆಯುವ ನಿಟ್ಟಿನಲ್ಲಿ ಸಮಿತಿಯ ಆಡಳಿತಾಧಿಕಾರಿಗಳ ಮೂಲಕ ಚರ್ಚಿಸಬೇಕು ಎನ್ನುವ ಆಗ್ರಹ ಸಭೆಯಲ್ಲಿ ಕೇಳಿಬಂದಿತು.
ಪಟ್ಟಣದಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡುವ ಸಂಬAಧ ಮೀಸಲಿರುವ ಶೇ. ೩೦ ಅನುದಾನದಲ್ಲಿ ಪಾರಂಪರಿಕ ತ್ಯಾಜ್ಯವನ್ನು ಸಂಸ್ಕರಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ಸರ್ಕಾರದ ನಿರ್ದೇಶನದಂತೆ ಸಮಗ್ರ ಯೋಜನಾ ವರದಿಯನ್ನು ತಯಾರಿಸಿ ಅಂದಾಜು ರೂ. ೫ ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲಾಯಿತು.
ಕುಶಾಲನಗರ ನೆಹರು ಬಡಾವಣೆಯ ಸಮೀಪದ ಬಲಮುರಿ ದೇವಾಲಯ ಮುಂಭಾಗದಲ್ಲಿರುವ ಜಾಗವನ್ನು ಸಮತಟ್ಟು ಮಾಡುವ ಮೂಲಕ ಸಂಪೂರ್ಣ ಪ್ರದೇಶಕ್ಕೆ ಆವರಣ ಬೇಲಿ ನಿರ್ಮಿಸುವ ಬಗ್ಗೆ ಸಭೆ ಒಮ್ಮತದ ನಿರ್ಣಯ ಕೈಗೊಂಡಿತು.
ಪಟ್ಟಣದ ರಾಧಾಕೃಷ್ಣ ಬಡಾವಣೆಯ ಸಿ ಎ ನಿವೇಶನವು ವಾಣಿಜ್ಯ ಉದ್ದೇಶಕ್ಕೆ ಮೀಸಲಿರಿಸುವ ದಾಖಲೆಗಳು ಕಂಡುಬAದಿದ್ದು ನಿವೇಶನವನ್ನು ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ಸಭೆಗೆ ಮಾಹಿತಿ ಒದಗಿಸಲಾಯಿತು. ಪಟ್ಟಣದ ೧ನೇ ಬ್ಲಾಕ್ ಸರ್ವೆ ನಂಬರ್ ೮೦/ ೧ ಚಂದ್ರಶೇಖರ್ ಬಡಾವಣೆಯಲ್ಲಿ ಮೀಸಲಿರಿಸಿರುವ ೨೬.೬ ೪ ಸೆಂಟ್ ಸಿ ಎ ನಿವೇಶನವನ್ನು ಕುಶಾಲನಗರ ಯೋಜನಾ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಲು ಸರ್ವಾನುಮತದಿಂದ ಸಭೆ ತೀರ್ಮಾನಿಸಿತು.
ಕುಶಾಲನಗರ ಗಡಿ ಕೊಪ್ಪ ಕಾವೇರಿ ನದಿ ಸೇತುವೆ ಮೇಲೆ ಎರಡು ಭಾಗಗಳಲ್ಲಿ ಸಂರಕ್ಷಣಾ ಮೆಸ್ ಅಳವಡಿಸಲು ಸ್ಥಳೀಯ ಫೆಡರಲ್ ಬ್ಯಾಂಕ್ ಮುಂದೆ ಬಂದಿದ್ದು, ಈ ಬಗ್ಗೆ ಬ್ಯಾಂಕ್ ರೂ. ೯.೫ ಲಕ್ಷಗಳನ್ನು ನೀಡಲು ಮುಂದೆ ಬಂದಿದೆ ಈ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಹಿಂದಿನ ಮಾಹೆಯ ಜಮಾ ಖರ್ಚು ಓದಿ ಅಂಗೀಕರಿಸಲಾಯಿತು. ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಂತೆಮಾಳದಲ್ಲಿರುವ ಕುರಿ ಕೋಳಿ ಮತ್ತು ಹಸಿ ಮೀನು ಮಾರಾಟ ಮಳಿಗೆಗಳ ಹಾಗೂ ಹಂದಿ ಮಾಂಸ ಹರಾಜು ಪ್ರಕ್ರಿಯೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪಟ್ಟಣ ಪಂಚಾಯಿತಿಯ ಎಸ್ಎಫ್ಸಿ ಮತ್ತು ಪಟ್ಟಣ ಪಂಚಾಯಿತಿ ಅನುದಾನಗಳಲ್ಲಿ ವಿವಿಧ ಯೋಜನೆಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಹಾಗೂ ವಿಶೇಷಚೇತನರ ನಿಧಿಯಡಿ ಮೀಸಲಿರುವ ಅನುದಾನದಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಲು ಅನುಭವಿಗಳ ಆಯ್ಕೆ ಕುರಿತು ಚರ್ಚೆ ನಡೆಯಿತು. ಪಟ್ಟಣದಲ್ಲಿ ಮುಖ್ಯರಸ್ತೆ ಹಾಗೂ ಬಡಾವಣೆಗಳ ರಸ್ತೆ ವ್ಯಾಪ್ತಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು ಸಂಚಾರಿ ನಿಯಮಗಳನ್ನು ಅಳವಡಿಸುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಸಮರ್ಪಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ಸದಸ್ಯರು ಚರ್ಚಿಸಿದರು. ಪಟ್ಟಣದ ಮೈಸೂರು ರಸ್ತೆ ಬಳಿ ಚರಂಡಿ ಮೇಲೆ ಹೊಟೇಲ್ ನಿರ್ಮಿಸಿ ವಾಹನ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿರುವ ಬಗ್ಗೆ ವಿ.ಎಸ್. ಆನಂದಕುಮಾರ್ ಸಭೆಯ ಗಮನಕ್ಕೆ ತಂದು ಕೂಡಲೇ ಅಂತಹ ವ್ಯಾಪಾರ ವಹಿವಾಟುಗಳನ್ನು ಕಟ್ಟುನಿಟ್ಟಾಗಿ ತೆರವುಗೊಳಿಸುವಂತೆ ಸಭೆಯ ಗಮನಕ್ಕೆ ತಂದರು. ಪಂಚಾಯಿತಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯೋನ್ಮುಖರಾಗುವಂತೆ ಸಭೆಯಲ್ಲಿ ಸಲಹೆಗಳು ಕೇಳಿಬಂದವು. ಪಟ್ಟಣದ ಮಹಿಳಾ ಸಮಾಜದ ಕಟ್ಟಡದಲ್ಲಿ ಒಳಒಪ್ಪಂದ ಮಾಡಿಕೊಂಡು ಕೆಲವು ವರ್ತಕರಿಗೆ ಅಂಗಡಿ-ಮುAಗಟ್ಟುಗಳನ್ನು ನೀಡಿ ಪಂಚಾಯಿತಿ ಲೈಸೆನ್ಸ್ ಪಡೆದ ಬಗ್ಗೆ ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯ ಎಂ.ವಿ ನಾರಾಯಣ ಅಧ್ಯಕ್ಷರಿಂದ ಮತ್ತು ಅಧಿಕಾರಿಗಳಿಂದ ಸ್ಪಷ್ಟನೆ ಬಯಸಿದರು. ಇದೇ ಸಂದರ್ಭ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆ ನಡೆದು ಈ ಬಗ್ಗೆ ಮುಂದಿನ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ಸಮರ್ಪಕ ಮಾಹಿತಿ ಪಡೆಯಲು ಮುಖ್ಯ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚನೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಸುರಯ್ಯ ಭಾನು, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಸದಸ್ಯರಾದ ಕೆ. ಪ್ರಮೋದ್, ಡಿ.ಕೆ. ತಿಮ್ಮಪ್ಪ, ಸುರೇಶ್, ಕೆ.ಆರ್. ರೇಣುಕಾ, ಪುಟ್ಟಲಕ್ಷಿö್ಮ, ಅಮೃತರಾಜ್, ಆನಂದ್ ಕುಮಾರ್, ಜಯಲಕ್ಷ್ಮಿ, ಶೈಲಕೃಷ್ಣಪ್ಪ, ಜಯಲಕ್ಷö್ಮಮ್ಮ, ಎಂ.ಎನ್. ಶಂಭುಲಿAಗಪ್ಪ, ಕೆ.ಜಿ. ಮನು, ಎಂ.ವಿ. ನಾರಾಯಣ, ಬಿ.ಎಲ್. ಜಗದೀಶ್, ಕೆ.ಆರ್. ರೇಣುಕಾ, ಎಂ.ಕೆ. ಸುಂದರೇಶ್, ಶೇಖ್ ಕಲಿಮುಲ್ಲಾ, ರೂಪ ಉಮಾಶಂಕರ್, ಪಂಚಾಯಿತಿ ಅಧಿಕಾರಿ, ಸಿಬ್ಬಂದಿ ವರ್ಗದವರು ಇದ್ದರು.